ಚೇಳೂರು: ಪತ್ರಿಕಾ ಮಾಧ್ಯಮಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದ್ದು ಶಾಸಕಾಂಗ, ಕಾರ್ಯಾಂಗ, ಕಿಂತಲೂ ಹೆಚ್ಚಿನ ಶಕ್ತಿ ಪತ್ರಿಕಾ ರಂಗಕ್ಕೆ ಇದ್ದು ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತಹ ಕೆಲಸ ಮಾಡುತ್ತಿದೆ ಎಂದು ಶಾಸಕ ಎಸ್ಆರ್ ಶ್ರೀನಿವಾಸ್ ಹೇಳಿದರು.
ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ಪತ್ರಿಕಾ ದಿನಾಚರಣೆ, ಹಾಗೂ ಪದ ಗ್ರಹಣ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಪತ್ರಕರ್ತರು ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿದಾಗ ಮಾತ್ರ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಲು ಸಾಧ್ಯ. ಶಾಸಕಾಂಗ, ಕಾರ್ಯಾಂಗ, ಕಿಂತಲೂ ಹೆಚ್ಚಿನ ಶಕ್ತಿ ಪತ್ರಿಕಾ ರಂಗಕ್ಕೆ ಇದ್ದು ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತಹ ಕೆಲಸವನ್ನು ಮಾಡುತ್ತಿರುವ ಪತ್ರ ಕರ್ತರು ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ಸಾಹಿತಿ ಎಚ್. ಕೆ ನರಸಿಂಹಮೂರ್ತಿ ಮಾತನಾಡಿ ಪತ್ರಿಕೆಗಳಿಗೆ ಸಮಾಜದ ತಪ್ಪನ್ನು ತಿದ್ದುವ ಶಕ್ತಿಯಿದೆ. ಕನ್ನಡದ ದಿನಪತ್ರಿಕೆ ಗಳು ಬೆಳೆದು ಬಂದ ಹಾದಿಯನ್ನು ಹಾಗೂ ತುಮಕೂರು ಜಿಲ್ಲೆಯಲ್ಲಿ ಮೊದಲ ಪತ್ರಿಕೆ ಆರಂಭದಿಂದ ಹಿಡಿದು ಇಂದಿನ ಸಾಮಾಜಿಕ ಜಾಲತಾಣಗಳ ವಿಚಾರದ ವರೆಗೂ ಸಹ ಎಳೆಯಾಗಿ ಬಿಚ್ಚಿಟ್ಟ ಅವರು ಪತ್ರಿಕೆಗಳು ಸಮಾಜಕ್ಕೆ ಕನ್ನಡಿ ಹಿಡಿಯ ಬೇಕಾಗಿದೆ. ಇದರಿಂದ ವಸ್ತು ಸ್ಥಿತಿಯನ್ನು ಅರಿಯಲು ಜನ ಸಾಮಾನ್ಯರಿಗೆ ತಿಳಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಮಾಜದ ಸೇವಕ ಎಸ್. ಡಿ ದಿಲೀಪ್ ಕುಮಾರ್ ಮಾತನಾಡಿ, ಇತ್ತೀಚೆಗೆ ಕೆಲವು ಪತ್ರ ಕರ್ತರು ಪತ್ರಿಕಾರಂಗವನ್ನು ದಾರಿ ತಪ್ಪಿ ಸುವ ಕೆಲಸವನ್ನು ಮಾಡುತ್ತಿದ್ದು ಇದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೂ ಕೆಟ್ಟ ಹೆಸರು ಬರುತ್ತಿದೆ ಪತ್ರಕರ್ತರ ಸಂಘವು ಇಂಥವುಗಳ ಮೇಲೆ ನಿಗಾವಹಿಸಿ ಕೆಲಸವನ್ನು ಮಾಡಿದಾಗ ಉತ್ತಮ ಸಮಾಜ ವನ್ನು ಸೃಷ್ಟಿಸಬಹುದು ಎಂದು ತಿಳಿಸಿದರು.
ತಾಲೂಕಿನ ಪತ್ರಕರ್ತರ ಸಂಘಕ್ಕೆ ಕೂಡಲೇ ಕಟ್ಟಡ ಒದಗಿಸುವುದರ ಜೊತೆಗೆ ಶಾಶ್ವತ ವಾಗಿ ಸಂಘಕ್ಕೆ ಅಗತ್ಯವಿರುವ ನಿವೇಶನ ನೀಡುವ ಭರವಸೆ ನೀಡಿದರು. ಕಾರ್ಯಕ್ರಮ ದಲ್ಲಿ ಪ್ರತಿನಿತ್ಯ ಪತ್ರಿಕೆ ಹಂಚುವ ಹುಡುಗರಿಗೆ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆಂಜಿನಪ್ಪ, ಉಪಾಧ್ಯಕ್ಷ ಕೆ.ಟಿ ರಂಗಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಕುಮಾರ್, ಚಾಲುಕ್ಯ ಆಸ್ಪತ್ರೆಯ ಸಿಇಓ ಡಾ. ನಾಗಭೂಷಣ್, ಅಕ್ಷಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ. ಎಸ್ ಪ್ರಸನ್ನಕುಮಾರ್, ಮುಖಂಡರಾದ ಗುರು ರೇಣುಕಾ ರಾಧ್ಯ, ಶಂಕರಾನಂದ, ಉಪತಹಸೀಲ್ದಾರ್ ವೆಂಕಟ ರಂಗನ್, ಕಂದಾಯ ನಿರೀಕ್ಷಕ ನಾಗಭೂಷಣ್, ಸೇರಿದಂತೆ ಇನ್ನಿತರರು ಹಾಜರಿದ್ದರು.