ತುಮಕೂರು: ನಗರದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚಾಗಿದ್ದು, ಮಕ್ಕಳು, ವೃದ್ದರು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ಹಲವು ವಾರ್ಡ್ ಗಳಲ್ಲಿ ನಾಯಿ ಕಡಿತದಿಂದ ಜನರು ಆಸ್ಪತ್ರೆ ಸೇರಿದ ಪರಿಣಾಮ ಶೀಘ್ರ ಕ್ರಮ ಕೈಗೊಳ್ಳುವಂತೆ ಈ ಹಿಂದೆಯೇ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೂಚನೆ ನೀಡಿದ್ದರು.
ಇದರ ಪರಿಣಾಮವಾಗಿ ಜಿಲ್ಲಾ ಕೇಂದ್ರದ ಹಾದಿ ಬೀದಿಗಳಲ್ಲಿ ಗುಂಪು ಗುಂಪುಗಳಾಗಿ ಕಂಡು ಬಂದು ಸಿಕ್ಕಸಿಕ್ಕ ಸಾರ್ವಜನಿಕರ, ಶಾಲಾ, ಕಾಲೇಜು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿದ್ದ ಬೀದಿ ನಾಯಿಗಳ ಹಾವಳಿಗೆ ನಿಯಂತ್ರಣ ಕ್ರಮಕ್ಕಾಗಿ 04 ತಂಡಗಳನ್ನು ವಿಭಾಗ ಮಾಡಿ 3,000 ನಾಯಿಗಳ ಸಂತತಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗುವುದು.
ತುಮಕೂರು ನಗರಕ್ಕೆ ಸಮಸ್ಯೆ ತರುವ ನಿಟ್ಟಿನಲ್ಲಿ ಸಹಸ್ರಾರು ಬೀದಿನಾಯಿಗಳು ನಗರದ 35 ವಾರ್ಡ್ ಮೊಕ್ಕಾಂ ಹೂಡಿ ಒಂಟಿಯಾಗಿ ಮಕ್ಕಳು ಹೋದರೆ ಅಥವಾ ಮನೆಗೆ ಹಾಲು, ಬಿಸ್ಕೆಟ್, ತಿಂಡಿ, ತಿನಿಸು ತರುವ ಸಾರ್ವಜನಿಕರಿಗೆ ಇನ್ನಿಲ್ಲದ ರೀತಿಯಲ್ಲಿ ಕಾಟ ಕೊಡುತ್ತಿದ್ದವು. ಇದರಿಂದ ಸಾರ್ವಜನಿಕರು ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳುವ ಮಂದಿ ಕೈಯಲ್ಲಿ ಕೋಲು ಹಿಡಿದು ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಅಷ್ಟರ ಮಟ್ಟಿಗೆ ತುಮಕೂರು ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮೆರೆದಿದ್ದವು.
ಹಲವು ಬಾರಿ ಶಾಲಾ ಮಕ್ಕಳು, ಸಾರ್ವಜನಿಕರು, ವಯೋವೃದ್ಧರು ನಾಯಿಗಳ ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿದ ಉದಾಹರಣೆಗಳಿವೆ. ಈ ಹಿಂದೆ ತುಮಕೂರು ಮಹಾನಗರಪಾಲಿಕೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಚಿಕಿತ್ಸೆ ಮಾಡಲು ಹಲವು ಬಾರಿ ಟೆಂಡರ್ ಕರೆದರೂ ಯಾರು ಮುಂದೆ ಬಂದಿರಲಿಲ್ಲ. ಆದರೆ ಇದೀಗ ಆಸ್ರಾ ಎಂಬ ಪ್ರಾಣ ಗಳ ಕಲ್ಯಾಣ ಸಂಸ್ಥೆ ಮುಂದಾಗಿದ್ದು, ಅಸ್ರಾ ಸಂಸ್ಥೆಗೆ ಗುತ್ತಿಗೆ ನೀಡಿದೆ. ಅಸ್ರಾ ಪ್ರಾಣ ಗಳ ಕಲ್ಯಾಣ ಸಂಸ್ಥೆಯ ನುರಿತ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅವುಗಳನ್ನು ಹಿಡಿಯುವ ಕೆಲಸಕ್ಕೆ ಚಾಲನೆ ನೀಡಲಿ ದ್ದಾರೆ.
ಒಟ್ಟಿನಲ್ಲಿ ಬೀದಿ ನಾಯಿಗಳ ಹಾವಳಿ, ಅವುಗಳ ದಿಢೀರ್ ದಾಳಿಯಿಂದ ಹಲವು ವರ್ಷಗಳಿಂದ ತೀವ್ರ ಕಂಗಾಲಾಗಿದ್ದ ಸಾರ್ವಜನಿಕರಿಗೆ ನೆಮ್ಮದಿ ತರುವ ನಿಟ್ಟಿನಲ್ಲಿ ಆಕಸ್ಮಿಕವಾಗಿ ಕಚ್ಚಿದರೂ ಅವುಗಳಿಂದ ಅಪಾಯಕಾರಿ ರೇಬಿಸ್ ಕಾಯಿಲೆ ಹರಡದಂತೆ ನಾಯಿಗಳಿಗೆ ಆ್ಯಂಟಿ ರೇಬಿಸ್ ಚುಚ್ಚುಮದ್ದು ಜತೆಗೆ ನಗರದಲ್ಲಿರುವ ಬೀದಿ ನಾಯಿಗಳಿಗೆ ಸಂತತಿ ಆಗದಂತೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವುದರ ಮೂಲಕ ಶೀಘ್ರವಾಗಿ ತುಮಕೂರು ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.
ಇದನ್ನೋ ಓದಿ: MLA Jyoti ganesh: ಸರಕಾರಿ ಶಾಲೆಗಳನ್ನು ಉಳಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ: ಶಾಸಕ ಜ್ಯೋತಿ ಗಣೇಶ್