Thursday, 28th November 2024

Month Of Giving: ಚೆನ್ನೈ, ಪುಣೆ ಮತ್ತು ಬೆಂಗಳೂರಿನಾದ್ಯಂತ ‘ದಾನದ ಮಾಸʼ (ಮಂತ್‌ ಆಫ್‌ ಗಿವಿಂಗ್‌) ಉಪಕ್ರಮಗಳಲ್ಲಿ ತೊಡಗಿದ ʻಎಲ್ಎನ್‌ಡಬ್ಲ್ಯೂ ಇಂಡಿಯಾʼ ಉದ್ಯೋಗಿಗಳು

280ಕ್ಕೂ ಹೆಚ್ಚು ʻಎಲ್ಎನ್‌ಡಬ್ಲ್ಯೂ ಇಂಡಿಯಾʼ ಸ್ವಯಂಸೇವಕರು ಟಿ-ಶರ್ಟ್‌ಗಳನ್ನು ಬಟ್ಟೆ ಚೀಲಗಳಾಗಿ ಪರಿವರ್ತಿಸುವ ಮೂಲಕ ಮತ್ತು ಚೆನ್ನೈ, ಪುಣೆ ಮತ್ತು ಬೆಂಗಳೂರಿನಾದ್ಯಂತ ಮರ ನೆಡುವ ಉಪಕ್ರಮಗಳ ಮೂಲಕ ಸುಸ್ಥಿರತೆಯನ್ನು ಹೆಚ್ಚಿಸಿದ್ದಾರೆ.

ಇದು ಸ್ಥಳೀಯ ಸಮುದಾಯಗಳ ಮೇಲೆ ಪರಿಣಾಮ ಬೀರಲಿದ್ದು, ಮತ್ತು ಪರಿಸರ ಸಂಬಂಧಿತ ಉಪಕ್ರಮಗಳ ಬಗ್ಗೆ ಮುಂದಾಳತ್ವವನ್ನು ಉತ್ತೇಜಿಸಲಿದೆ ~
ಜಾಗತಿಕ ಗೇಮಿಂಗ್ ತಂತ್ರಜ್ಞಾನ ಸಂಸ್ಥೆ ಮತ್ತು ʻಲೈಟ್&ವಂಡರ್ ಐಎನ್‌ಸಿʼಯ ಅಂಗಸಂಸ್ಥೆಯಾದ ʻಎಲ್ಎನ್‌ಡಬ್ಲ್ಯೂ ಇಂಡಿಯಾ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ʼ(“ಎಲ್ಎನ್‌ಡಬ್ಲ್ಯೂ”) ಚೆನ್ನೈ, ಪುಣೆ ಹಾಗೂ ಬೆಂಗಳೂರಿನಲ್ಲಿ ತನ್ನ ‘ದಾನದ ಮಾಸʼ ಉಪಕ್ರಮಗಳನ್ನು ಮುಕ್ತಾಯಗೊಳಿಸಿದೆ. 280ಕ್ಕೂ ಹೆಚ್ಚು ಉದ್ಯೋಗಿಗಳು ತ್ಯಾಜ್ಯ ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣಾ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದರು. ನೌಕರರು ಮತ್ತು ಸ್ಥಳೀಯ ಸಮುದಾಯಗಳಲ್ಲಿ ಸ್ವಯಂಸೇವಯ ಭಾವ ಮತ್ತು ಪರಿಸರ ಸುಸ್ಥಿರತೆಯ ಸಂಸ್ಕೃತಿಯನ್ನು ಬೆಳೆಸುವ ಗುರಿಯನ್ನು ಈ ಉಪಕ್ರಮಗಳು ಹೊಂದಿವೆ.

ಪರಿಸರ ಮತ್ತು ಸಮುದಾಯ ಕಲ್ಯಾಣಕ್ಕಾಗಿ ಮೀಸಲಾಗಿರುವ ಸರಕಾರೇತರ ಸೇವಾ ಸಂಸ್ಥೆ (ಎನ್‌ಜಿಒ), ʻವೇ ಫಾರ್ ಲೈಫ್ʼ ನ ಸಹಯೋಗದಲ್ಲಿ ʻಎಲ್ಎನ್‌ಡಬ್ಲ್ಯೂʼ, ಉದ್ಯೋಗಿಗಳು ದಾನ ಮಾಡಿದ ಬಳಸಿದ ಟಿ-ಶರ್ಟ್‌ಗಳಿಂದ 200ಕ್ಕೂ ಹೆಚ್ಚು ಬಟ್ಟೆ ಚೀಲಗಳನ್ನು ತಯಾರಿಸಲಾಗಿದೆ. ಮರುಬಳಕೆ ಮಾಡಬಹುದಾದ ಈ ಚೀಲಗಳನ್ನು ಸ್ಥಳೀಯ ತರಕಾರಿ ಮಾರಾಟಗಾರರಿಗೆ ವಿತರಿಸಿ, ಏಕ-ಬಳಕೆಯ ಪ್ಲಾಸ್ಟಿಕ್ ಚೀಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಾಗುವುದು, ಪರಿಸರ ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸಲಾಗುವುದು. ಮನೆಯಲ್ಲೂ ಸುಸ್ಥಿರ ಅಭ್ಯಾಸಗಳನ್ನು ಅನುಸರಿಸಲು ಉದ್ಯೋಗಿಗಳು ನಿರ್ದಿಷ್ಟ ಸಂಖ್ಯೆಯ ಚೀಲಗಳನ್ನು ತಮ್ಮ ಬಳಕೆಗೆ ಉಳಿಸಿಕೊಂಡಿದ್ದಾರೆ.

‘ದಾನದ ಮಾಸʼ(ಮಂತ್ ಆಫ್ ಗಿವಿಂಗ್) ಅಡಿಯಲ್ಲಿ ಎರಡನೇ ಚಟುವಟಿಕೆಯ ಭಾಗವಾಗಿ, ʻಎಲ್ಎನ್‌ಡಬ್ಲ್ಯೂʼ ಸಂಸ್ಥೆಯ ಉದ್ಯೋಗಿಗಳು, ʻಗ್ರೋ ಬಿಲಿಯನ್ ಟ್ರೀಸ್ʼ ಎಂಬ ಎನ್‌ಜಿಒ ಸಹಯೋಗದೊಂದಿಗೆ ಪುಣೆ, ಚೆನ್ನೈ ಮತ್ತು ಬೆಂಗಳೂರಿನ ಅನೇಕ ಸ್ಥಳಗಳಲ್ಲಿ 833 ಸಸಿಗಳನ್ನು ನೆಟ್ಟಿದ್ದಾರೆ. ಈ ಅಭಿಯಾನವು ನಗರ ಪ್ರದೇಶಗಳಲ್ಲಿ ಹಸಿರು ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಅಸ್ತಿತ್ವದಲ್ಲಿರುವ ವಾಯು ಗುಣಮಟ್ಟದ ಕಳವಳವನ್ನು ಪರಿಹರಿಸಲು ʻಎಲ್ಎನ್‌ಡಬ್ಲ್ಯೂʼ ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿದೆ. ಹೀಗೆ ನೆಟ್ಟ ಸಸಿಗಳಲ್ಲಿ ಬಾದಾಮಿ, ಪೇರಲ, ಮಾವು, ಹಲಸು ಮುಂತಾದ ವೈವಿಧ್ಯಮಯ ಸಸ್ಯಗಳು ಸೇರಿವೆ. ಈ ಉಪಕ್ರಮವು ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಮತ್ತು ಸುತ್ತಮುತ್ತಲಿನ ಸಮುದಾಯಗಳಿಗೆ ಶುದ್ಧ ಗಾಳಿಯನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮಾತನಾಡಿದ ʻಎಲ್ಎನ್‌ಡಬ್ಲ್ಯೂʼನ ಪೀಪಲ್ ಕೆಪಬಿಲಿಟಿ-ಇಂಡಿಯಾದ ಉಪಾಧ್ಯಕ್ಷ ರಿತು ಭಾಟಿ,ಅವರು “ದಾನದ ಮಾಸʼದ ಉಪಕ್ರಮದಲ್ಲಿ ಅನೇಕ ಉದ್ಯೋಗಿಗಳು ಭಾಗವಹಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ನಮ್ಮ ಸಂಸ್ಥೆಯೊಳಗೆ ಸ್ವಯಂಸೇವೆಯ ಸಂಸ್ಕೃತಿಯನ್ನು ಬೆಳೆಸುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಉಪಕ್ರಮಗಳು ಪರಿಸರ ಸವಾಲುಗಳನ್ನು ಎದುರಿಸಲು ಹಾಗೂ ಸ್ಥಳೀಯ ಸಮುದಾಯಗಳನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ. ಇದು ನಮ್ಮ ಪ್ರಮುಖ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ,ʼʼ ಎಂದು ಹೇಳಿದರು.

‘ದಾನದ ಮಾಸʼ ಉಪಕ್ರಮವು ಕ್ರಾಂತಿಕಾರಿ ಎಂದು ಕರೆಯಲ್ಪಡುವ ʻಎಲ್ಎನ್‌ಡಬ್ಲ್ಯೂʼನ ವಿಸ್ತೃತ ಸಿಎಸ್ಆರ್ ಕಾರ್ಯಕ್ರಮದ ಭಾಗವಾಗಿದೆ. ಇದು ಉದ್ಯೋಗಿಗಳನ್ನು ಅರ್ಥಪೂರ್ಣ, ಸಮುದಾಯ ಆಧಾರಿತ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಬದಲಾವಣೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ. ʻವೇ ಫಾರ್ ಲೈಫ್ʼ ಮತ್ತು ʻಗ್ರೋ ಬಿಲಿಯನ್ ಟ್ರೀಸ್ʼನಂತಹ ಸ್ಥಳೀಯ ʻಎನ್‌ಜಿಒʼಗಳೊಂದಿಗೆ ಕೆಲಸ ಮಾಡುವ ಮೂಲಕ, ಸಂಸ್ಥೆಯು ತನ್ನ ಉದ್ಯೋಗಿಗಳನ್ನು ಕಚೇರಿಯ ವ್ಯಾಪ್ತಿ ಮೀರಿ ತಾವು ವಾಸಿಸುವ ಮತ್ತು ಕೆಲಸ ಮಾಡುವ ಸಮುದಾಯಗಳಿಗೆ ತಮ್ಮ ಪ್ರಭಾವವನ್ನು ಸಕಾರಾತ್ಮಕವಾಗಿ ವಿಸ್ತರಿಸಲು ಅನುವು ಮಾಡಿಕೊಟ್ಟಿದೆ.

ʻಗ್ಲೋಬಲ್ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿʼ ಉಪಾಧ್ಯಕ್ಷ ಟ್ರೇಸಿ ಸ್ಕೆನಾಂಡೋರ್ಅವರು ಮಾತನಾಡಿ, “ನಮ್ಮ ಭಾರತ ತಂಡವು ಮಾಡುತ್ತಿರುವ ಕೆಲಸವು ನಮ್ಮ ಕೆಲಸದಸ್ಥಳ ಮತ್ತು ನಾವು ವಾಸಿಸುವ ಸ್ಥಳೀಯ ಸಮುದಾಯಗಳಲ್ಲಿ ನೈಜ ಬದಲಾವಣೆ ತರಲಿದೆ. ಜಾಗತಿಕ ಸಂಸ್ಥೆಯಾಗಿರುವ ʻಲೈಟ್ & ವಂಡರ್ʼನಲ್ಲಿ ನಾವು ಆರು ಖಂಡಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಮುದಾಯಗಳು ಮತ್ತು ಪರಿಸರಗಳ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಲು ಬದ್ಧವಾಗಿದ್ದೇವೆ. ಅಲ್ಲಿ ನಾವು ಪ್ರತಿವರ್ಷ ಜಾಗತಿಕವಾಗಿ 16,000 ಗಂಟೆಗಳಿಗಿಂತ ಹೆಚ್ಚು ಕಾಲ ಸ್ವಯಂಸೇವಕರನ್ನು ಕೆಲಸದಲ್ಲಿ ತೊಡಗಿಸಿದ್ದೇವೆ. ನಮ್ಮ ಜಾಗತಿಕ ವಾರ್ಷಿಕ ಸಿಎಸ್ಆರ್ ವರದಿಯಲ್ಲಿ ಪ್ರತಿಬಿಂಬಿತವಾದಂತೆ ಶಾಶ್ವತ ಬದಲಾವಣೆ ಮತ್ತು ಪರಿಣಾಮವನ್ನು ಉಂಟುಮಾಡಲು ನಾವು ಬದ್ಧರಾಗಿದ್ದೇವೆ,ʼʼ ಎಂದು ಹೇಳಿದರು.

ʻಲೈಟ್ & ವಂಡರ್‌ʼನ ಜಾಗತಿಕ ಸಿಎಸ್ಆರ್ ಕಾರ್ಯಕ್ರಮವಾದ ʻಗೇಮ್‌ ಚೇಂಜರ್ಸ್‌ʼ ಪರಿಸರ ಸುಸ್ಥಿರತೆ, ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಸಕಾರಾತ್ಮಕ, ಶಾಶ್ವತ ಬದಲಾವಣೆಯನ್ನು ತರುವ ಗುರಿಯನ್ನು ಹೊಂದಿದೆ. ಅಲ್ಲದೆ, ಅಂಗವಿಕಲ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ದೀನದಲಿತ ಮಕ್ಕಳಿಗೆ ಶೈಕ್ಷಣಿಕ ಪ್ರಾಯೋಜಕತ್ವ, ಆಶ್ರಯ ಮನೆಗಳಲ್ಲಿರುವ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಒದಗಿಸುವುದು ಮತ್ತು ಇಂಗು ಗುಂಡಿಗಳು, ಸೌರ ಫಲಕಗಳ ನಿರ್ಮಾಣಕ್ಕೆ ಬೆಂಬಲಿಸುವುದು ಸೇರಿದಂತೆ ಹಲವಾರು ಇತರ ʻಸಿಎಸ್ಆರ್ʼ ಯೋಜನೆಗಳಲ್ಲಿ ʻಎಲ್ಎನ್‌ಬ್ಲ್ಯೂʼ ತನ್ನ ಕೆಲಸವನ್ನು ಮುಂದುವರೆಸಿದೆ