ಚಿಕ್ಕನಾಯಕನಹಳ್ಳಿ : ಸಂಸ್ಕಾರ ಭಾರತಿ ವತಿಯಿಂದ ಸೆ.೪ ರಂದು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಕಾರ ಭಾರತಿ ಅದ್ಯಕ್ಷ ಕೆಂಬಾಳ್ ರಮೇಶ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾರ್ಯಕ್ರಮದ ಅಂಗವಾಗಿ ಕನ್ನಡ ಸಂಘದ ವೇದಿಕೆಯಲ್ಲಿ ಬೆ.೧೧ ರಿಂದ ಶಾಲಾ ಮಕ್ಕಳಿಗೆ ವಿವಿಧ ವಿಭಾಗದಲ್ಲಿ ಶ್ರೀ ಕೃಷ್ಣ ಗಾಯನ, ಚಿತ್ರಕಲಾ ಸ್ಪರ್ಧೆ, ಮತ್ತು ಮಹಿಳೆಯರಿಗೆ ಚುಕ್ಕಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಮಧ್ಯಾಹ್ನ ೨ ರಿಂದ ೧೮ ವರ್ಷ ಮೇಲ್ಪಟ್ಟ ಪುರುಷ ಹಾಗು ಮಹಿಳೆ ಯರಿಗೆ ಮೊಸರು ಕುಡಿಕೆ ಹೊಡೆಯುವ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಸಂಚಾಲಕ್ ಶಿಲ್ಪಿ ವಿಶ್ವನಾಥ್ ಮಾತನಾಡಿ ಸಂಜೆ ೪ ಗಂಟೆಯಿ0ದ ೩ ವರ್ಷದ ಒಳಗಿನ ಮಕ್ಕಳಿಗೆ ಮುದ್ದುಕೃಷ್ಣ ೩ ರಿಂದ ೫ ವರ್ಷದ ಒಳಗಿನ ಮಕ್ಕಳಿಗೆ ಬಾಲಕೃಷ್ಣ ವೇಷ, ಹಾಗು ಯಶೋಧ ಕೃಷ್ಣ ವೇಷ (ತಾಯಿ ಮತ್ತು ಮಗು ವೇಷ ಧರಿಸಿ ಬರುವುದು) ಸ್ಪರ್ಧೆ ನಡೆಯಲಿದೆ ಎಂದರು. ಕಾರ್ಯದರ್ಶಿ ಸುಧೀಂದ್ರ, ಆರ್‌ಎಸ್‌ಎಸ್ ಪ್ರಮುಖ್ ನಾಗರಾಜ್ ಹಾಜರಿದ್ದರು.