Saturday, 14th December 2024

MP Vishweshwar Hegde Kaageri: ಮತಬ್ಯಾಂಕಿಗಾಗಿ ಕಾಂಗ್ರೆಸ್ ನದ್ದು ಜಾತಿ ಆಧಾರಿತ ಆಡಳಿತ: ಸಂಸದ ಕಾಗೇರಿ ಖಂಡನೆ

ಶಿರಸಿ: ರಾಜಕೀಯ ಲಾಭಾಕ್ಕಾಗಿ, ಮತಬ್ಯಾಂಕಿಗಾಗಿ ಕಾಂಗ್ರೆಸ್ ಒಡೆದು ಆಳುವ, ಜಾತಿ ಆಧಾರಿತ, ಧರ್ಮಾಧಾರಿತ ಒಡೆದು ಆಳುವ ಕಾರ್ಯ ಮಾಡುತ್ತಿದ್ದು ಇದನ್ನು ಖಂಡಿಸುವುದಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇಂದು ಶಿರಸಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ಶಾಂತಿಯಿಂದ ಇರಲು ಬಿಡದೇ ಅಲ್ಪ ಸಂಖ್ಯಾಂತರಿಂದ ದೊಂಬಿ, ಗಲಭೆಯನ್ನು ಮಾಡಿಸುತ್ತಿದೆ ಎಂದರು.

ಎಟಿಎಂ ಮೂಲಕ ಕೇಂದ್ರದ ರಾಹುಲ್ ಗಾಂಧೀ ಅವರನ್ನು ಓಲೈಸಬೇಕಿದೆ. ರಾಜ್ಯದ ಮಾನ, ಮರ್ಯಾದೆಯನ್ನು ತೆಗೆಯುತ್ತಿರುವ ಸಿದ್ದರಾಮಯ್ಯ ಅವರು ಮೊದಲು ರಾಜೀನಾಮೆ ನೀಡಿ ತಮ್ಮ‌ಮೇಲಿನ ಆರೋಪಕ್ಕೆ ಸದಾವಕಾಶ ಮಾಡಿಕೊಡಬೇಕೆಂದರು.

ಈ ಸಂದರ್ಭದಲ್ಲಿ ಬಿಜೆಪಿ ವಕ್ತಾರ ಸದಾನಂದ ಭಟ್, ಆನಂದ ಸಾಲೇರ್, ನಗರಸಭಾಧ್ಯಕ್ಷೆ ಶರ್ಮಿಳಾ ಮುಂತಾದವರಿದ್ದರು.

ಇದನ್ನೂ ಓದಿ: TSS Sirsi: ಶಿರಸಿ ಟಿಎಸ್‌ಎಸ್ ನಿರ್ದೇಶಕ ಸ್ಥಾನಕ್ಕೆ ರಾಮಕೃಷ್ಣ ಹೆಗಡೆ ಕಡವೆ ರಾಜೀನಾಮೆ