Saturday, 4th January 2025

N H Shivashankar Reddy: ಬಿಜೆಪಿಯವರು ಎಂದಿಗೂ ಸ್ವಾತಂತ್ರ‍್ಯಣ ಹೋರಾಟಕ್ಕೆ ಬೆಂಬಲ ನೀಡಿದವರಲ್ಲ: ಎನ್.ಎಚ್.ಶಿವಶಂಕರ್ ರೆಡ್ಡಿ

ಹೊಸ ವರ್ಷದ ದಿನದಂದು ಕಾರ್ಯಕರ್ತರ ಸಭೆ ನಡೆಸಿದ ಮಾಜಿ ಸಚಿವ                                                

ಗೌರಿಬಿದನೂರು : ಬಿಜೆಪಿಯವರು ಎಂದಿಗೂ ಸ್ವಾತಂತ್ರ‍್ಯ ಹೋರಾಟಕ್ಕೆ ಬೆಂಬಲ ನೀಡಿದವರಲ್ಲ. ಕೇವಲ ಆರೋ ಪಗಳನ್ನು ಮಾಡುತ್ತಾ ಪ್ರಚಾರ ಗಿಟ್ಟಿಸಿಕೊಂಡು ಅಧಿಕಾರಕ್ಕೆ ಬಂದವರು. ದೇಶದಲ್ಲಿ ಮುಂದಿನ ದಿನಗಳಲ್ಲಿ ಸ್ವಾತಂತ್ರ‍್ಯಕ್ಕೆ ಹೋರಾಟ ಮಾಡಿದವರಿಗೆ ಗೌರವ ಮತ್ತು ಮನ್ನಣೆ ಸಿಗಲಿದೆ ಎಂದು ಮಾಜಿ ಸಚಿವ ಎನ್.ಹೆಚ್. ಶಿವಶಂಕರ್‌ರೆಡ್ಡಿ ತಿಳಿಸಿದರು.

ತಾಲ್ಲೂಕಿನ ರಾಜಕೀಯ ಶಕ್ತಿಕೇಂದ್ರ ಎಚ್.ನಾಗಸಂದ್ರದಲ್ಲಿ ಜನವರಿ ೧, ೨೦೨೫ ರ ಬುಧವಾರ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ರವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ ದರು.

ಕಾಂಗ್ರೆಸ್ ಪಕ್ಷದ ಹಿರಿಯ ಧೀಮಂತ ನಾಯಕರು ಮತ್ತು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರವರ ಅಗಲೀಕರಣ ದೇಶಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೋವುಂಟಾಗಿದ್ದು, ತುಂಬಲಾರದ ನಷ್ಟವಾಗಿದೆ. ಅವರಿಬ್ಬರೂ ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ನಿಜಕ್ಕೂ ಸ್ಮರಣೀಯವಾಗಿದೆ. ಅವರ ತತ್ವ, ಬದ್ದತೆ ಮತ್ತು ಆದರ್ಶ ಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿ ಎಲ್ಲರೂ ಗೌರವಪೂರ್ವಕವಾಗಿ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿದರು.

ಕ್ಷೇತ್ರದಲ್ಲಿ ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಕೆಲವೊಂದು ತಾಂತ್ರಿಕ ಕಾರಣಗಳಿಂದ ನಾವು ಸೋತಿದ್ದೇವೆ, ಆದರೆ ಕಾರ್ಯಕರ್ತರು ಇಂದಿಗೂ ಧೃತಿಗೆಡದೆ ಆತಸ್ಥೆರ್ಯದಿಂದ ಪಕ್ಷ ಸಂಘಟನೆಯಲ್ಲಿದ್ದಾರೆ. ಚುನಾವಣೆಯಲ್ಲಿ ಘಟಿಸಿದ ಕಹಿ ನೆನಪುಗಳನ್ನು ಮೆಲುಕು ಹಾಕುವುದು ಮತ್ತು ಪಕ್ಷದ್ರೋಹ ಮಾಡಿದವರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ನನ್ನ ಅಧಿಕಾರಾವಧಿ ಯಲ್ಲಿ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಈ ಭಾಗದ ಜನತೆಗೆ ಶಕ್ತಿ ನೀಡಿದೆ, ಉದ್ಯೋಗದ ಅವಕಾಶಗಳನ್ನು ಕಲ್ಪಿಸಿದೆ ಎಂದರು.

ಭೂಮಿ ಬೆಲೆ ಗರಿಷ್ಟ ಮಟ್ಟಕ್ಕೆ ತಲುಪಿದೆ. ರೈತರ ಹಿತದೃಷ್ಟಿಯಿಂದ ಸಾಕಷ್ಟು ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಸೇರಿದಂತೆ ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿದ್ದೇವೆ ಎಂದರು. ಮುಂಬರುವ ೩-೪ ತಿಂಗಳಿನಲ್ಲಿ ಸ್ಥಳೀಯ ತಾ.ಪಂ ಮತ್ತು ಜಿ.ಪಂ ಚುನಾವಣೆಗಳು ಎದುರಾಗುವ ನಿಟ್ಟಿನಲ್ಲಿ ಕಾರ್ಯಕರ್ತರು ಸನ್ನದ್ದರಾಗಬೇಕಾಗಿದೆ. ಕ್ಷೇತ್ರದಲ್ಲಿ ಕಳೆದ ಒಂದೂವರೆ ವರ್ಷದಿಂದ ರಾಜಕೀಯ ವಿದ್ಯಮಾನಗಳು ಮತ್ತು ಪರಿಸ್ಥಿತಿ ಬಗ್ಗೆ ಜನಸಾಮಾನ್ಯರು ಆರಿತಿದ್ದಾರೆ. ನಮ್ಮ ಅಧಿಕಾರಾ ವಧಿಯಲ್ಲಿ ನಡೆದ ಪ್ರಗತಿಪರ ಕಾರ್ಯಗಳನ್ನು ಸ್ಮರಿಸುತ್ತಿದ್ದಾರೆ. ಮತ್ತೆ ಅವರ ಮನೆಬಾಗಿಲಿಗೆ ತೆರಳಿ ಪಕ್ಷದ ಸಂಘಟನೆ ಮಾಡುವ ಮೂಲಕ ಅವರಲ್ಲಿನ ಆತ್ಮಸ್ಥೆರ್ಯ ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎನ್.ಕೇಶವರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಕ್ಷೇತ್ರದಲ್ಲಿ ಕಳೆದ 25 ವರ್ಷ ಗಳಿಂದ ನಮ್ಮೆಲ್ಲರ ನಾಯಕರಾದ ಎನ್.ಎಚ್. ಶಿವಶಂಕರರೆಡ್ಡಿ ರವರ ನೇತೃತ್ವದಲ್ಲಿ ಸುಭದ್ರವಾಗಿದೆ. ಶೀಘ್ರದಲ್ಲೇ ಮುಂಬರುವ ಜಿ.ಪಂ, ತಾ.ಪಂ ಹಾಗೂ ಗ್ರಾ.ಪಂ ಚುನಾವಣೆಗಳು ಮತ್ತು ಎದುರಾಗುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಕೀಯವಾಗಿ ಚುರುಕಾಗಬೇಕಾಗಿದೆ. ಸ್ಥಳೀಯವಾಗಿ ಬೂತ್ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಸಿದ್ದರಾಗೋಣ ಎಂದು ಹೇಳಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಪಿ.ಅಶ್ವತ್ಥನಾರಾಯಣಗೌಡ, ವೇದಲವೇಣು ಎನ್. ವೇಣು, ಒಬಿಸಿ ಘಟಕದ ಅಧ್ಯಕ್ಷರಾದ ಜಿಲಾಕುಂಟೆ ಗಂಗಾಧರಪ್ಪ, ತಾರಾನಾಥ್, ಮುಖಂಡರಾದ ಮರಳೂರು ಹನುಮಂತರೆಡ್ಡಿ, ಸ್ವಾಮಿ, ಎಚ್.ಎನ್.ಪ್ರಕಾಶರೆಡ್ಡಿ, ವಿ.ರಮೇಶ್, ಅಶ್ವತ್ಥನಾರಾಯಣಪ್ಪ, ಜಾಲಹಳ್ಳಿ ಆರ್. ವೇಣುಗೋಪಾಲ್, ಗಿರೀಶ್, ಶ್ಯಾಮ್, ಆರ್ ಪಿ.ಗೋಪಿನಾಥ್, ರಮೇಶ್, ಕಲ್ಪನಾ, ವಿಜಯ್, ಜಗನ್ನಾಥ್, ಬಾಬು, ಸೇರಿದಂತೆ ಅನೇಕ ಮಂದಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಭಾಗವಹಿಸಿದ್ದರು.