Thursday, 28th November 2024

N Nagaraj: ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ನೀಡುವುದೇ ಶಿಕ್ಷಕರ ಆಶಯವಾಗಿರಬೇಕು- ಎನ್.ನಾಗರಾಜ್

ಗೌರಿಬಿದನೂರು: “ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ನೀಡುವುದೇ ಶಿಕ್ಷಕರ ಆಶಯವಾಗಿರಬೇಕು” ಎಂದು ಪ್ರಜ್ಞಾ ಟ್ರಸ್ಟ್‌ ನ ಸಂಸ್ಥಾಪಕ, ಯೋಜನಾ ನಿರ್ದೇಶಕ ಎನ್.ನಾಗರಾಜ್ ಹೇಳಿದರು.

ನಗರದ ಪ್ರಜ್ಞಾಟ್ರಸ್ಟ್‌ʼನ ಪ್ರತೀಕ್ಷಾ ಕೇಂದ್ರ ಮತ್ತು ಅರುಣೋದಯ ವಿಶೇಷ ಶಾಲೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಪ್ರಾಮಾಣಿಕ ಬಲಿಷ್ಠ ಸಮಾಜವನ್ನು ನಿರ್ಮಾಣ ಮಾಡಲು ಶಿಕ್ಷಕರು ಶ್ರಮ ಪಡಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದ ಅವರು ರಾಧಾಕೃಷ್ಣನ್ ರೀತಿ ಶಿಕ್ಷಕರು ಸಮಾಜಕ್ಕೆ ಮಾದರಿಯಾಗು ಳಿಯಬೇಕು ಎಂದರು.

ಅರುಣೋದಯ ವಿಶೇಷ ಶಾಲೆಯ ಪ್ರಾಂಶುಪಾಲರಾದ ಎಸ್. ವಿಜಯಲಕ್ಷ್ಮೀ ಮಾತನಾಡಿ, ಇಂದಿನ ಗುರುಗಳು ಶಿಕ್ಷಕರ ದಿನಾಚರಣೆಯ ಮಹತ್ವ ಮತ್ತು ಅರ್ಥವನ್ನು ಅರಿತು ತಮ್ಮ ತಮ್ಮ ಕಾಯಕವನ್ನು ನಿಷ್ಟೆ ಶ್ರದ್ಧೆ ಸೇವಾ ಮನೋಭಾವದ ನೆಲೆಯಲ್ಲಿ ಮಾಡಬೇಕಿದೆ. ಎಲ್ಲವನ್ನೂ ಅನುಕೂಲದ ದೃಷ್ಟಿಯಿಂದ ನೋಡಲು ಹೋದರೆ ಗುರುಗಳು ಬ್ರಹ್ಮಸ್ಥಾನ ಪಡೆಯಲು ಆಗದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿಂದೆ  ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದ ಶ್ರೀಮತಿ ಪೂಜಾ ಮತ್ತು ನವೀನ ಅವರನ್ನು ಸನ್ಮಾ ನಿಸಲಾಯಿತು. ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿಗೆ ದಿನಾಚರಣೆ ಅಂಗವಾಗಿ ಉಡುಗೊರೆ ಗಳನ್ನು ನೀಡಲಾಯಿತು.

ಪ್ರಶಿಕ್ಷಣಾರ್ಥಿಗಳಾಗಿ ಆಗಮಿಸಿದ್ದ, ಕುಮಾರಿ ಪೂಜಿತ, ಕುಮಾರಿ ಅಖಿಲ, ಕುಮಾರಿ ಸಾನಿಯಾ ಅಂಜುಮ್ ಕಾರ್ಯ ಕ್ರಮವನ್ನು ಉತ್ತಮವಾಗಿ, ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರಣ ಅವರಿಗೂ ಉಡುಗೊರೆಗಳನ್ನು ನೀಡಲಾಯಿತು.

ಇದೇ ವೇಳೆ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಈ ಶಾಲೆಯ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ಅತಿಥಿಗಳು ವಿತರಿಸಿದರು. ಅರುಣೋದಯ ಶಾಲೆಯ ಮಕ್ಕಳು ನೃತ್ಯ ಪ್ರದರ್ಶನ ಮಾಡಿ ಸಮಾರಂಭಕ್ಕೆ ಕಳೆ ಕಟ್ಟಿದರು.

ರಮಾದೇವಿಯವರು ಪ್ರಾರ್ಥಿಸಿದರೆ ಅಖಿಲ ಸ್ವಾಗತಿಸಿ, ಸಾನಿಯಾ ಅಂಜುಮ್ ವಂದನೆ ಸಲ್ಲಿಸಿದರು. ಕಾರ್ಯ ಕ್ರಮವನ್ನು ಶಾಂತಾ ಮಹೇಶ್ ಸೊಗಸಾಗಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಫಿಸಿಯೋಥೆರಪಿಸ್ಟ್ ಹರಿಣಿ, ಉಷಾ, ನಂದಿನಿ, ದಿವ್ಯ, ನವ್ಯ, ಸವಿತಾ ಅವರೊಂದಿಗೆ ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದು ಶ್ರೀಮತಿ ಹರಿಣಿಯವರು ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು.