ಚಿಕ್ಕಬಳ್ಳಾಪುರ : ಒಂದೆಡೆ ಹಬ್ಬದ ನಿಮಿತ್ತ ಸಾಲು ಸಾಲು ರಜೆ,ಮಗದೊಂದೆಡೆ ಶಾಲಾ ಮಕ್ಕಳಿಗೆ ನೀಡಿರುವ ದಸರಾ ರಜೆಯ ಕಾರಣ ನಂದಿಗಿರಿಧಾಮಕ್ಕೆ ಶನಿವಾರ ಭಾನುವಾರ ಪ್ರವಾಸಿಗರ ದಂಡೇ ಹರಿದುಬಂದಿತ್ತು.
ಬೆಳ್ಳAಬೆಳಗ್ಗೆ ನಂದಿಬೆಟ್ಟಕ್ಕೆ ಹೋಗಬೇಕು, ಅಲ್ಲಿ ಸೂರ್ಯೋದಯ ನೋಡಬೇಕು ಎಂಬ ಆಸೆಯಲ್ಲಿ ಕಾರು ಹಾಗೂ ಬೈಕ್‌ಗಳಲ್ಲಿ ಬಂದ ಸಾವಿರಾರು ಸಂಖ್ಯೆಯ ಪ್ರವಾಸಿಗರ ಕಾರಣವಾಗಿ ಬೆಟ್ಟದ ಬುಡದಿಂದ ಮೇಲಿನವರೆಗೆ ಜನವೋ ಜನ,ರಸ್ತೆಯುದ್ಧಕ್ಕೂ ವಾಹನ ಸಂದಣಿಯಿ0ದಾಗಿ ಸಾಕಷ್ಟು ಮಂದಿ ನಂದಿಬೆಟ್ಟದ ಬುಡದಲ್ಲಿಯೇ ಉಳಿಯು ವಂತಾಯಿತು.
ನಿನ್ನೆ ಮೊನ್ನೆ ವಿಜಯದಶಮಿ ಹಬ್ಬದ ಹಿನ್ನೆಲೆ ಇಂದು ಭಾನುವಾರವಾದ ಕಾರಣ ನಂದಿಗಿರಿಧಾಮಕ್ಕೆ ಜನಸಾಗರ ವೇ ಹರಿದು ಬಂದಿತ್ತು. ಬೆ0ಗಳೂರು ಸೇರಿ ರಾಜ್ಯದ ವಿವಿಧ ಮೂಲೆಗಳಿಂದ ನಂದಿಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರ ಸಂಖ್ಯೆ ರಜಾದಿನಗಳಲ್ಲಿ ಮೇರೆ ಮೀರಿರುತ್ತದೆ. ಪ್ರವಾಸಿಗರು ಭಾನುವಾರ ಬೆಳಗ್ಗೆ 5 ಗಂಟೆಯಿ0ದಲೇ ಬೆಟ್ಟಕ್ಕೆ ಲಗ್ಗೆಯಿಟ್ಟಿದ್ದು ಬೆಳಗ್ಗೆ 6 ಗಂಟೆಗೆ ಹೊತ್ತಿಗಾಗಲೇ ಪಾರ್ಕಿಂಗ್ ಹೌಸ್ ಫುಲ್ ಆಗಿತ್ತು. ಪ್ರವಾಸಿಗರು ಏಕಕಾಲದಲ್ಲಿ ಆಗಮಿಸಿದ ಪರಿಣಾಮ ಟಿಕೆಟ್ ಕೌಂಟರ್ ನಿಂದ ನಂದಿ ಸರ್ಕಲ್ ವರೆಗೂ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂದಿಗಿರಿಧಾಮದ ಮೇಲೆ ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ಸ್ಥಳವಿಲ್ಲದೆ ಕಾರಣ ಪ್ರವಾಸಿಗರು ಪರದಾಡುವಂತಾಗಿದ್ದು ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಗಮನಹರಿಸಲಿ ಎಂದು ಹೆಸರು ಹೇಳದ ಪ್ರವಾಸಿಗರು ಮನವಿ ಮಾಡಿದ್ದಾರೆ.
ವಾರಾಂತ್ಯದ ಭಾನುವಾರ ಬೆಂಗಳೂರಿಗರ ಪಿಕ್ನಿಕ್ ಸ್ಪಾಟ್, ಪ್ರವಾಸಿಗರ ಹಾಟ್ ಫೆವರೇಟ್ ನಂದಿಬೆಟ್ಟಕ್ಕೆ ಪ್ರವಾಸಿ ಗರ ದಂಡೇ ಹರಿದುಬರುವುದು ಸಹಜ. ನೀರಿಕ್ಷೆಗೂ ಮೀರಿ ನಂದಿಬೆಟ್ಟಕ್ಕೆ ಪ್ರವಾಸಿಗರು ಬಂದ ಕಾರಣ ನಂದಿಬೆಟ್ಟದ ಚೆಕ್ ಪೋಸ್ಟ್ನಿಂದ ನಂದಿಬೆಟ್ಟದ ಕ್ರಾಸ್,ಹೆಗಡಿಹಳ್ಳಿ, ಕಣಿವೆಪುರ ಗ್ರಾಮದವದರೆಗೂ ಕಿಲೋಮೀಟರ್ ಗಟ್ಟಲೇ ವಾಹನಗಳು ನಿಂತಲ್ಲೇ ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಹೋಗಿ ಸೂರ್ಯೋದಯ ನೋಡಬೇಕು ಅಂತ ಬಂದ ಪ್ರವಾಸಿಗರಿಗೆ ನಿರಾಸೆಯಾಯಿತು.
ಬೆಳಿಗ್ಗೆ ೪-೫ ಗಂಟೆಗೆ ನಂದಿಬೆಟ್ಟದತ್ತ ಬಂದವರಿಗೆ ಚೆಕ್ ಪೋಸ್ಟ್ ಬಳಿ ತಡೆ ಒಡ್ಡಲಾಗುತ್ತದೆ. 6 ಗಂಟೆ ನಂತರವೇ ನಂದಿಬೆಟ್ಟದ ಚೆಕ್ ಪೋಸ್ಟ್ ಬಳಿ ಗೇಟ್ ಓಪನ್ ಮಾಡಲಾಗುತ್ತದೆ.ನಂದಿಬೆಟ್ಟದ ಮೇಲ್ಭಾಗದಲ್ಲಿ ಪಾರ್ಕಿಂಗ್ ಸಮಸ್ಯೆ ಇರುವ ಕಾರಣ ಮೊದಲು ಬಂದ 300 ಕಾರುಗಳು ಹಾಗೂ 100 ಬೈಕ್‌ಗಳಿಗಷ್ಟೇ ನಂದಿಬೆಟ್ಟದ ಮೇಲ್ಭಾಗಕ್ಕೆ ತೆರಳಲು ಅವಕಾಶ ನೀಡಲಾಗುತ್ತದೆ. ಮೇಲಿಂದ ಒಂದು ವಾಹನ ವಾಪಾಸ್ಸು ಬಂದರೆ ಮತ್ತೊಂದು ವಾಹನವನ್ನು ಮೇಲ್ಭಾಗಕ್ಕೆ ಬಿಡಲಾಗುತ್ತದೆ.ಇದನ್ನು ಮೀರಿ ನೂರಾರು ಕಾರುಗಳ ಬಂದ ಕಾರಣ ಟ್ರಾಫಿಕ್ ಜಾಮ್ ಆಗಿ ನಿಂತಲ್ಲೇ ಕಾರುಗಳು ನಿಲ್ಲುವಂತಾಯಿತು. ಅತ್ತ ನಂದಿಬೆಟ್ಟಕ್ಕೂ ಹೋಗಲಾಗದೆ ಇತ್ತ ವಾಪಾಸ್ಸು ಬರಲಾಗದೆ ಪ್ರವಾಸಿಗರು ಪರದಾಡಿದರು.
ವಿಶ್ವ ವಿಖ್ಯಾತ ನಂದಿಗಿರಿ ಧಾಮಕ್ಕೆ ಬೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚವಾಗುತ್ತಿದೆ.ಬಡವರ ಪಾಲಿನ ಊಟಿ ಎಂದೇ ಖ್ಯಾತವಾಗಿರುವ ನಂದಿಗಿರಿಧಾಮ ಹಲವು ಕಾರಣಗಳಿಗಾಗಿ ಹೆಸರಾಗಿದೆ.ಸ್ವಾತಂತ್ರ‍್ಯ ಸಂಗ್ರಾಮದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಎರಡು ಬಾರಿ ವಿಶ್ರಾಂತಿ ಪಡೆದಿದ್ದ ನಂದಿ ಬೆಟ್ಟಕ್ಕೆ 2023ರಲ್ಲಿ 14,62,755 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. 2024ರ ಜನವರಿಂದ ಜೂನ್‌ವರೆಗೂ ಒಟ್ಟು 11,49,982 ಮಂದಿ ಭೇಟಿ ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಅಂದಾಜಿ ನ0ತೆ ಈ ವರ್ಷಾಂತ್ಯಕ್ಕೆ ನಂದಿಗಿರಿಧಾಮಕ್ಕೆ ಭೇಟಿ ನೀಡುವವರ ಸಂಖ್ಯೆ 23 ಲಕ್ಷ ದಾಟುವ ಸಂಭವವಿದೆ ಎನ್ನುತ್ತಾರೆ.
ಚಿಕ್ಕಬಳ್ಳಾಪುರ ಬೆಂಗಳೂರಿಗೆ ಸಮೀಪ ಅತಿ ಹೆಚ್ಚು ಪ್ರವಾಸಿತಾಣಗಳನ್ನು ಹೊಂದಿರುವ ಜಿಲ್ಲೆ ಎಂಬ ಖ್ಯಾತಿಗೆ ಒಳಗಾಗಿರುವುದು ಜಿಲ್ಲೆಯ ಹೆಗ್ಗಳಿಕೆ. ಇಲ್ಲಿನ ನಂದಿಗಿರಿಧಾಮ, ಗಾ0ಧಿಭವನ, ಇಲ್ಲಿನ ಯೋಗನಂದೀಶ್ವರ ದೇವಾಲಯ,ಬೆಟ್ಟದ ಕೆಳಗಡೆಯ ನಂದಿಗ್ರಾಮದ ಭೋಗನಂದೀಶ್ವರ, ವಿಶ್ವವಿಖ್ಯಾತ ವಿಜ್ಞಾನಿ ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ ಮುದ್ದೇನಹಳ್ಳಿ,ಪುರಾಣ ಪ್ರಸಿದ್ಧ ರಂಗಸ್ಥಳವಿದೆ.
ಗುಡಿಬ0ಡೆಯ ಅವಲಬೆಟ್ಟದ ಏಕಶಿಲೆಯ ನರಸಿಂಹಸ್ವಾಮಿಯ ದೇವಾಲಯ,ಸೆಲ್ಫಿಬಂಡೆ, ಗೌರಿಬಿದನೂರಿನ ವಿದುರಾಶ್ವತ್ಥ, ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ಮತ್ತು ಸುರಸದ್ಮಗಿರಿ, ಬಾಗೇಪಲ್ಲಿಯ ಗುಮ್ಮನಾಯಕನ ಕೋಟೆ, ಗಡಿದಂವೆ0ಕಟೇಶ್ವರ, ಎಲ್ಲೋಡು, ಚಿಂತಾಮಣಿಯ ಮುರಗಮಲೆ ದರ್ಗಾ, ಕೈವಾರದ ಕಾಲಜ್ಞಾನಿ ಅಮರನಾರಾಯಣ ಮಠ,ಕೈಲಾಸ ಗಿರಿಯ ಗುಹಾಂತರ ದೇವಾಲಯ, ಶಿಡ್ಲಘಟ್ಟದ ತಲಕಾಯಲಬೆಟ್ಟ, ಚಿಕ್ಕದಾಸರಹಳ್ಳಿಯ ಬೇಟೆರಾಯಸ್ವಾಮಿ ದೇವಾಲಯ, ಮಂಚೇನಹಳ್ಳಿಯ ಮಿಣಕನಗುರ್ಕಿ ಮಹೇಶ್ವರಿ ದೇವಾಲಯ ಸೇರಿ ಇಲ್ಲಿನ ಪ್ರವಾಸಿ ತಾಣಗಳಿಗೆ ಕಳೆದ ವರ್ಷ 2023 ರಲ್ಲಿ ಒಟ್ಟು ೬೦.೩೧ ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ವರ್ಷ ೨೦೨೪ ರಲ್ಲಿ ಜನವರಿಯಿಂದ ಜೂನ್ ವರೆಗೂ ೩೮.೪೨ ಲಕ್ಷ ಮಂದಿ ಭೇಟಿ ನೀಡಿದ್ದಾರೆ. ವರ್ಷಾಂತ್ಯಕ್ಕೆ ೭೦ ಲಕ್ಷ ಪ್ರವಾಸಿಗರು ಭೇಟಿ ನೀಡುವ ಸಾದ್ಯತೆ ಇದೆ.
ಜಿಲ್ಲೆಯ ಪ್ರವಾಸೋದ್ಯಮ ತಾಣಗಳಲ್ಲಿ ಮತ್ತಷ್ಟು ಸೌಲಭ್ಯ ಕಲ್ಪಿಸಿದಲ್ಲಿ ಮುಂದಿನ ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆ ಕೋಟಿ ದಾಟುವ ಸಾಧ್ಯತೆ ಇದೆ.ಕೇರಳದಂತೆ ಪ್ರವಾಸೋಧ್ಯಮ ಜಿಲ್ಲೆಯ ಅರ್ಥಿಕ ಪ್ರಗತಿಗೂ ಕೂಡ ಮುನ್ನುಡಿ ಬರೆಯುವ ಕಾರಣ ಜನಪ್ರತಿನಿಧಿಗಳು, ಜಿಲ್ಲಾಡಳಿತ ಇತ್ತ ಗಮನ ಹರಿಸಿಸುವುದು ಅಗತ್ಯ.ಪ್ರಮುಖ ಪ್ರವಾಸಿತಾಣಗಳಲ್ಲಿ ಮೂಲಭೂತಸೌಕರ್ಯಗಳಿಗೆ ಕೊರತೆಯಾಗದಂತೆ ಜಾಗೃತೆ ವಹಿಸುವ ಜತೆಗೆ ಇನ್ನಿತರೆ ಸೌಕರ್ಯ ಒದಗಿಸುವತ್ತ ಚಿತ್ತ ಹರಿಸುವ ಅಗತ್ಯವಿದೆ.
ಇದನ್ನೂ ಓದಿ: Nandini Ghee: ಕರ್ನಾಟಕದ ಮುಜರಾಯಿ ದೇಗುಲಗಳಲ್ಲಿ ಪೂಜೆ, ಪ್ರಸಾದಕ್ಕೆ ʼನಂದಿನಿ ತುಪ್ಪʼ ಕಡ್ಡಾಯ: ಸರ್ಕಾರ ಆದೇಶ