Sunday, 15th December 2024

ದೋಷಾರೋಪಣ ಪಟ್ಟಿ ಸಲ್ಲಿಸಿರುವ ಅಧಿಕಾರಿಗಳನ್ನು ನಾರ್ಕೊ ಪರೀಕ್ಷೆಗೆ ಒಳಪಡಿಸಿ

ಇಂಡಿ : ಸಂಚು ರೂಪಿಸಿ,ಸುಳ್ಳು ಸಾಕ್ಷಿ ಸೃಷ್ಠಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿರುವ ಅಧಿಕಾರಿಗಳ ಮೇಲೆ ನಾರ್ಕೊ ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಜ.1 ರಂದು ವಿಜಯಪುರ ಜೈಲಿನಲ್ಲಿಯೇ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ದಲಿತ ಸಮಾಜಪರ ಚಿಂತಕ,ಹೋರಾಟಗಾರ ಜೀತೆಂದ್ರ ಕಾಂಬಳೆ ಅವರಿಗೆ ದಸಂಸ (ಅ0ಬೇಡ್ಕರ ವಾದ)ತಾಲೂಕ ಸಮಿತಿ ಸಂಪೂರ್ಣ ಬೆಂಬಲ ನೀಡಿದೆ ಎಂದು ತಾಲೂಕು ಸಂಚಾಲಕ ಚಂದ್ರಶೇಖರ ಮೇಲಿನಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೀತೆಂದ್ರ ಕಾಂಬಳೆ ಅವರ ಮೇಲೆ ಸುಳ್ಳುಕೇಸು ಹಾಕಿದ್ದು, ಒಬ್ಬ ವ್ಯಕ್ತಿಯ ವಯಕ್ತಿಕ ಸ್ವಾತಂತ್ರ÷್ಯ ಕಿತ್ತುಕೊಂಡ0ತಾಗಿದೆ. ಅನ್ಯಾಯದ ವಿರುದ್ದ ಹಮ್ಮಿಕೊಂಡ ಹೋರಾಟಕ್ಕೆ ಅಧಿಕಾರಿಗಳು ಅಡ್ಡಿಪಡಿಸಿದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿ ಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಮಾದಿಗ ಸಂಘಟನೆ ಬೆಂಬಲ : ದಲಿತ ಹೋರಾಟಗಾರ ಜೀತೇಂದ್ರ ಕಾಂಬಳೆ ಅವರ ಮೇಲೆ ಇಲ್ಲಸಲ್ಲದ ಕೇಸ್ ಹಾಕಿ ನ್ಯಾಯಾ ಲಯದಿಂದ ಜಾಮೀನು ಸಿಗದಂತೆ ಮಾಡಿರುವ ಅಧಿಕಾರಿಗಳನ್ನು ನಾರ್ಕೊ ಪರೀಕ್ಷೆಗೆ ಒಳಪಡಿಸಬೇಕು. ಕೂಡಲೆ ಅವರಿಗೆ ನ್ಯಾಯಾಲಯ ದಿಂದ ಜಾಮೀನು ಸಿಗುವಂತೆ ಆಗಬೇಕು, ಸುಳ್ಳುಕೇಸ್ ದಾಖಲಿಸಿದ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕು.

ಇಲ್ಲವಾದರೆ ತಾಲೂಕಿನಾಧ್ಯಂತ ಉಗ್ರಹೋರಾಟ ಮಾಡಲಾಗುತ್ತದೆ. ಜೀತೆಂದ್ರ ಕಾಂಬಳೆ ಅವರು ಹೋರಾಟಕ್ಕೆ ನಮ್ಮ ಸಂಘ ಟನೆ ಬೆಂಬಲ ಇದೆ ಎಂದು ಕರ್ನಾಟಕ ಮಾದಿಗ ಸಮಾಜದ ಬೆಳಗಾಂವ ವಿಭಾಗದ ಪ್ರಧಾನ ಕಾರ್ಯದರ್ಶಿ ರವೀಂದ್ರ ನಾರಾ ಯಣಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read E-Paper click here