ಚಿಕ್ಕಬಳ್ಳಾಪುರದಲ್ಲಿ ರಸ್ತೆ ಅಗಲೀಕರಣ ಸಮಯದಲ್ಲಿ ಈ ದುರಂತ
ಚಿಕ್ಕಬಳ್ಳಾಪುರ ನಗರದ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ರಸ್ತೆ ಅಗಲೀಕರಣದ ಕೆಲಸ ಕಳೆದ ಒಂದು ವಾರದಿಂದ ಭರದಿಂದ ಸಾಗುತ್ತಿದೆ. ಖಾಸಗಿ ಕಟ್ಟಡ ಮಾಲೀಕರು ತಮ್ಮ ಕಟ್ಟಡಗಳನ್ನು ತೆರವು ಮಾಡುವ ಕಾರ್ಯ ಸ್ವತಃ ಮಾಡಿಸುತ್ತಿದ್ದು, ಈ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಈ ದುರ್ಘಟನೆ ಸಂಭವಿಸಿದೆ.
ನಗರದ ಎಂ.ಜಿ.ರಸ್ತೆಯ ಎಪಿಎಂಸಿ ಮಾರುಕಟ್ಟೆಯ ಹತ್ತಿರ ಇರುವ ಹೋಟೆಲ್ ಕೆಂಪಣ್ಣ ಕಟ್ಟಡವನ್ನು ಭಾನುವಾರ ತೆರವು ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಸರಿಯಾದ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಕಾರಣ, ಚಾವಣಿ ಕುಸಿದು ಬಿದ್ದು ದುರಂತ ಸಾವು ಸಂಭವಿಸಿದೆ. ಈ ಅವಘಡದಲ್ಲಿ ಇಸ್ಲಾಂಪುರದ ಕಾರ್ಮಿಕ ಸಮೀವುಲ್ಲಾ ಸಾವನ್ನ ಪ್ಪಿದ್ದು, ಅವರ ಕುಟುಂಬದ ಸದಸ್ಯರಾದ ಮನ್ಸೂರು ಆಲಿ, ನದೀಮ್, ಮತ್ತು ಶಫೀ ಉಲ್ಲಾ ಗಂಭೀರ ಗಾಯ ಗಳೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ವ್ಯಕ್ತಿ ಹಾಗೂ ಗಾಯಾಳುಗಳ ಸಂಬಂಕರು ನೂರಾರು ಜನರೊಂದಿಗೆ ಜಿಲ್ಲಾಸ್ಪತ್ರೆಯ ಬಳಿ ಜಮಾಯಿಸಿ ಕೊಂಡಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತು. ಈ ಆಘಾತದ ಘಟನೆ ತಿಳಿದಂತೆ, ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ನಾಗರಾಜ್ ಹಾಗೂ ನಗರಸಭಾ ಸದಸ್ಯರು ಆಸ್ಪತ್ರೆಗೆ ಆಗಮಿಸಿ, ಸಂತ್ರಸ್ತ ಕುಟುಂಬ ಗಳನ್ನು ಸಮಾಧಾನಪಡಿಸಿದರು. ಈ ಸಂಬಂಧ ನಗರಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: Chikkaballapur News: ಸಂಸ್ಕೃತಭಾಷೆ ಭಾರತೀಯ ಭಾಷೆಗಳ ತಾಯಿಯಿದ್ದಂತೆ-ಅಶ್ವತ್ಥ್ ನಾರಾಯಣ ಅಭಿಮತ