ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ರೈತರಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಉಚಿತವಾಗಿ ಕಸಿ ಕಟ್ಟಿರುವ ಗೋಡಂಬಿ ಗಿಡ ವಿತರಣಾ ಕಾರ್ಯಕ್ರಮಕ್ಕೆ ಯೋಜನಾಧಿಕಾರಿ ಪ್ರೇಮಾನಂದ್ ಶಾವಿಗೆಹಳ್ಳಿ ಗ್ರಾಮದಲ್ಲಿ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಮೂಡಬಿದರೆ ವಿಜಯಲಕ್ಷ್ಮೀ ಪ್ರತಿಷ್ಠಾನ ರಾಜ್ಯಾದ್ಯಂತ ಆಸಕ್ತಿ ಹೊಂದಿರುವ ರೈತರಿಗೆ ಕಸಿ ಕಟ್ಟಿರುವ ಗಿಡಗಳನ್ನು ಉಚಿತವಾಗಿ ನೀಡುತ್ತಿದೆ. ತಾಲ್ಲೂಕಿಗೆ ಒದಗಿಸಿರುವ ೩೦ ಸಾವಿರಕ್ಕೂ ಹೆಚ್ಚು ಗೇರು ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ತಾಲ್ಲೂಕಿನ ರೈತರು ಈ ಸಸಿಗಳನ್ನು ಉತ್ತಮ ರೀತಿಯಲ್ಲಿ ಬೆಳಸುವ ಮೂಲಕ ಆರ್ಥಿಕವಾಗಿ ಸಧೃಢವಾಗಬೇಕು. ನಾಟಿ ಮಾಡುವ ವಿಧಾನ, ಗೊಬ್ಬರ ನಿರ್ವಹಣೆಯ ಬಗ್ಗೆ ಇದೇ ವೇಳೆ ಮಾಹಿತಿ ನೀಡಿದರು.
ಯೋಜನೆಯ ಕೃಷಿ ಮೇಲ್ವಿಚಾರಕ ಯೋಗೀಶ್, ಶಾವಿಗೆಹಳ್ಳಿ ಒಕ್ಕೂಟದ ಅಧ್ಯಕ್ಷೆ ರೂಪ, ಮೇಲನಹಳ್ಳಿ ಒಕ್ಕೂಟದ ಅಧ್ಯಕ್ಷ ರಾಜಶೇಖರ್, ವಲಯದ ಮೇಲ್ವಿಚಾರಕಿ ಚೈತ್ರ, ಪ್ರಗತಿಪರ ರೈತ ಯೋಗೀಶ್ ಹಾಗು ಸಂಘದ ಸದಸ್ಯರು ಇದ್ದರು.