ತುಮಕೂರು: ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆತೀಕ್ ಅಹಮದ್ ಅವರ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕರ‍್ಯರ‍್ತರು ದಾನಾ ಪ್ಯಾಲೇಸ್‌ನಿಂದ ಪಾಲಿಕೆ ಕಚೇರಿಯವರಗೆ ಪಾದಯಾತ್ರೆ ನಡೆಸಿ,ಮೇಯರ್,ಉಪಮೇಯರ್, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ನಗರದ ದಾನಾ ಪ್ಯಾಲೇಸ್‌ನಿಂದ ಹೊರಟ ಪಾದಯಾತ್ರೆ ಸದಾಶಿವನಗರ ಮುಖ್ಯರಸ್ತೆಯ ಮೂಲಕ ಇಸ್ರಾ ಶಾದಿಮಹಲ್, ಕುಣಿಗಲ್ ರಸ್ತೆಯ ಮೂಲಕ ಪಾಲಿಕೆ ಕಚೇರಿಯವರೆಗೆ ಸಾಗಿ ಮುಂದಿನ ೧೫ ದಿನಗಳ ಒಳಗೆ ರಸ್ತೆ ಗುಂಡಿ ಮುಚ್ಚುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳ ದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯ ಮನವಿ ಪತ್ರವನ್ನು ಮೇಯರ್ ಪ್ರಭಾವತಿ, ಉಪಮೇಯರ್ ಟಿ.ಕೆ.ನರಸಿಂಹಮರ‍್ತಿ ಹಾಗೂ ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕಾರವರಿಗೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್ ಅಹಮದ್ ಮಾತನಾಡಿ,ತುಮಕೂರು ನಗರವನ್ನು ಸ್ಮರ‍್ಟ್ಸಿಟಿ ಎಂದು ಘೋಷಿಸಲಾಗಿದೆ.ಆದರೆ ನಗರದ ಕೆಲ ರಸ್ತೆಗಳನ್ನು ಹೊರತು ಪಡಿಸಿದರೆ ಬಹುತೇಕ ಬಡಾವಣೆಗಳ ಮುಖ್ಯರಸ್ತೆಗಳು ಹಾಗೂ ಸಂರ‍್ಕ ರಸ್ತೆಗಳು ಸಂಪರ‍್ಣ ಹಾಳಾಗಿದ್ದು, ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ನಗರದ ಸದಾಶಿವನಗರ, ಮೆಳೇಕೋಟೆ ಮುಖ್ಯರಸ್ತೆ, ಕುಣಿಗಲ್ ಮುಖ್ಯರಸ್ತೆ, ಕೊಡಿ ಬಸವೇಶ್ವರ ದೇವಸ್ಥಾನ ಎದುರುಗಡೆ ರಸ್ತೆ, ಮಂಡಿಪೇಟೆ ರಸ್ತೆ, ಶೆಟ್ಟಿಹಳ್ಳಿ ಗೇಟ್‌ನಿಂದ ಜಯನಗರ ರಸ್ತೆ ಸೇರಿದಂತೆ ಬಹುತೇಕ ಬಡವರು, ಅಲ್ಪಸಂಖ್ಯಾತರು, ಹಿಂದುಳಿದ ರ‍್ಗದವರು, ಕೂಲಿ ಕರ‍್ಮಿಕರು ವಾಸ ಮಾಡುತ್ತಿರುವ ಬಡಾವಣೆಗಳ ರಸ್ತೆಗಳು ಸಂಪರ‍್ಣ ಹಾಳಾಗಿವೆ.ಶಾಸಕರಾಗಲಿ, ಸಂಸದರಾಗಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮುಂದಿನ ೧೫ ದಿನಗಳಲ್ಲಿ ಪಾಲಿಕೆ ರಸ್ತೆ ರಿಪೇರಿಯ ಬಗ್ಗೆ ಸೂಕ್ತ ವ್ಯವಸ್ಥೆ ಮಾಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ತುಮಕೂರು ನಗರದ ಬಹುತೇಕ ಒಳಚರಂಡಿಯ ಕೊಳಚೆ ನೀರು ನಗರದ ಭೀಮಸಂದ್ರ ಕೆರೆಗೆ ಹೋಗಬೇಕು. ಇಡೀ ನಗರದ ನೀರು ಒಂದೇ ಕಡೆ ಹೋಗುವುದರಿಂದ ಚರಂಡಿ ಸಾಕಾಗದೆ ಪ್ರತಿ ಸಲ ಜೋರು ಮಳೆ ಬಂದಾಗಲು ಹಲವಾರು ಮನೆಗಳಿಗೆ ಮಳೆ ನೀರು ನುಗ್ಗಿ ಹತ್ತಾರು ಮನೆಗಳು ಬಿದ್ದು, ಸಾಕಷ್ಟು ಹಾನಿಯಾಗಿದೆ. ಇಲ್ಲಿ ಬದುಕುತ್ತಿರುವ ಜನರು ಸಹ ಭಾರತೀಯರೇ, ಹಾಗಾಗಿ ಮಾನವೀಯ ದೃಷ್ಟಿಯಿಂದ ನಗರದ ಕೊಳಚೆ ನೀರು ಒಂದೇ ಕಾಲುವೆ ಬದಲು ಎರಡು ಮೂರು ಕಡೆಯಿಂದ ಭೀಮಸಂದ್ರ ಕೆರೆ ಸೇರುವಂತೆ ಮಾಡಿದರೆ ಮನೆಗಳಿಗೆ ನೀರು ನುಗ್ಗುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ಶಾಸಕರು, ಸಂಸದರು ಗಮನಹರಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಹಿರಿಯ ಕಾಂಗ್ರೆಸ್ ಮುಖಂಡ ರೇವಣ್ಣ ಸಿದ್ದಯ್ಯ ಮಾತನಾಡಿ,ತುಮಕೂರು ನಗರದ ಸ್ಮರ‍್ಟ್ಸಿಟಿ ಎಂಬುದಕ್ಕೆ ಅಪವಾದ ಎಂಬುದನ್ನು ನಗರದ ರಸ್ತೆಗಳೇ ಸಾರಿ ಸಾರಿ ಹೇಳುತ್ತಿವೆ.ಹಾಳಾಗಿರುವ ರಸ್ತೆಗಳಿಗೆ ಕನಿಷ್ಠ ತಾತ್ಕಾಲಿಕ ರ‍್ಯಾಯ ವ್ಯವಸ್ತೆಯನ್ನು ಸಹ ಮಾಡಿಲ್ಲ. ಜನರ ತಾಳ್ಮೆಗೂ ಒಂದು ಮಿತಿಯಿದೆ. ಅವರ ಸಹನೆಯ ಕಟ್ಟೆ ಹೊಡೆಯುವ ಮುನ್ನ ಎಚ್ಚೆತ್ತುಕೊಳ್ಳಿ,ಇಲ್ಲದಿದ್ದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಎಂಬುದನ್ನೂ ನೋಡದೆ ಜನರು ಬುದ್ದಿ ಕಲಿಸುವ ಕಾಲ ದೂರವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕರ‍್ಯರ‍್ಶಿ ಮುರುಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಜಿ.ಲಿಂಗರಾಜು, ಮುಖಂಡರಾದ ಶಿವಾಜಿ ಸೇರಿದಂತೆ ನೂರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ಸಂಬಂಧ ಮನವಿಯನ್ನು ಆಯುಕ್ತರು, ಮೇಯರ್, ಉಪಮೇಯರ್ ಅವರುಗಳಿಗೆ ಸಲ್ಲಿಸಲಾಯಿತು.