Saturday, 7th September 2024

ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಆದೇಶ ಹಿಂಪಡೆಯಲು ಆಗ್ರಹ

ತುಮಕೂರು: ವಾಣಿಜ್ಯ ವಾಹನಗಳಿಗೆ ಜಿ.ಪಿ.ಆರ್.ಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸುವ ಆದೇಶ ವಾಪಸ್ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿ ಟ್ಯಾಕ್ಸಿ ಚಾಲಕರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರೀಫ್ ಮಾತನಾಡಿ, ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆಯು ನೀಡಿರುವ ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆರ್.ಎಸ್. ಎಂಬ ಅವೈಜ್ಞಾನಿಕ ಸಾಧನ ಅಳವಡಿಸಲು ನೀಡಿರುವ ಆದೇಶದಿಂದ ಟ್ಯಾಕ್ಸಿ ಚಾಲಕರಿಗೆ ಸಮಸ್ಯೆಯಾಗಿದೆ. ಈ ಆದೇಶ ಹಿಂಪಡೆಯುವAತೆ ಸರ್ಕಾರವನ್ನು ಒತ್ತಾಯಿಸಿದರು.

ಇಂತಹ ಅವೈಜ್ಞಾನಿಕ ಸಾಧನಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ನಿಗದಿಪಡಿಸಿರುವುದು ೭೮೯೦ ರೂ. ಆದರೆ ರಾಜ್ಯದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ ಇದರ ಮೊತ್ತವು ೧೫ ಸಾವಿರ ರೂ.ನಿಂದ ೨೦ ಸಾವಿರ ರೂ ವರೆಗೆ ಹಾಗೂ ೧ ಪ್ಯಾನಿಕ್ ಬಟನ್ ದರ ೬೫೦ ರೂ ಜತೆಗೆ ಶೇಕಡ ೧೮ರಷ್ಟು ತೆರಗೆ ವಸೂಲಿ ಮಾಡಲಾಗುತ್ತಿದೆ. ಇದು ರಾಜ್ಯದ ಎಲ್ಲಾ ಟೂರಿಸ್ಟ್ ವಾಹನ ಚಾಲಕ, ಮಾಲಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಹೇಳಿದರು.

ರಾಜ್ಯದ ಸಾರಿಗೆ ಸಚಿವರು ಈ ಬಗ್ಗೆ ಸೆಪ್ಟಂಬರ್ ೨೪ರವರೆಗೆ ಯಾವುದೇ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸದೆ ಎಫ್.ಸಿ ಮಾಡಬಹುದು ಎಂದು ತಿಳಿಸಿದ್ದಾರೆ.

ಇದನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಸಚಿವರ ಆದೇಶ ಗಡೆಗಣ ಸಿ ತರಾತುರಿಯಲ್ಲಿ ಎಫ್.ಸಿ. ಮಾಡಲು ಪ್ಯಾನಿಕ ಬಟನ್ ಕಡ್ಡಾಯ ಮಾಡಿದ್ದಾರೆ ಎಂದು ಟೀಕಿಸಿದರು.ಸರ್ಕಾರ ಟ್ಯಾಕ್ಸಿ ಉದ್ಯಮವನ್ನು ಪ್ರೋತ್ಸಾಹಿಸುವ ಬದಲು ನಿರ್ನಾಮ ಮಾಡುವ ಪ್ರಯತ್ನ ತಡೆದಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್, ಉಪಾಧ್ಯಕ್ಷ ಬಳ್ಳಗೆರೆ ಕುಮಾರ್, ಕೆ.ಟಿ.ಡಿ.ಓ. ರಾಜು, ಹುಸೇನ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!