Friday, 13th December 2024

ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸನ್ಮಾನ

ಇಂಡಿ: ಇಂಡಿ ತಾಲೂಕಾ ಲಿಂಗಾಯತ ಪಂಚಮಸಾಲಿ ವತಿಯಿಂದ ಶಾಸಕ ಯಶವಂತರಾಯಗೌಡ ಪಾಟೀಲ ಹ್ಯಾಟ್ರಿಕ ವಿಜಯ ಸಾಧಿಸಿದ್ದರಿಂದ ಸನ್ಮಾನ ಸಮಾರಂಭ ಜುಲೈ ೦೧ ರಂದು ಶನಿವಾರ ೧೧ ಗಂಟೆಗೆ ಶುಭಂ ಮಂಗಲ ಕಾರ್ಯಾಲಯ ಇಂಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಪರಮ ಪೂಜ್ಯ ಶ್ರೀಸಂಗನಬಸವ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿಲ್ಲಿದ್ದು, ಉದ್ಘಾಟನೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ನೆರವೇರಿಸಲ್ಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಂಗಮೇಶ ಬಲಬಲೇಶ್ವರ ಆಗಮಿಸಲ್ಲಿದ್ದಾರೆ. ಆದ್ದರಿಂದ ಇಂಡಿ ತಾಲೂಕಾ ಲಿಂಗಾಯತ ಪಂಚಮಸಾಲಿ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವೀಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡ ಎಂ.ಆರ್ ಪಾಟೀಲ ಬಳ್ಳೋಳ್ಳಿ ಪ್ರಕಟಣೆಗೆ ತಿಳಿಸಿದ್ದಾರೆ.