ಪಾವಗಡ : ಮಕ್ಕಳ ಪೋಷಣೆಯ ರೀತಿಯಲ್ಲಿ ಸಸಿಗಳನ್ನು ಬೆಳೆಸುವ ಕೆಲಸ ಪ್ರತಿಯೊಬ್ಬರು ಮಾಡಿದಾಗ ಮಾತ್ರ ಸಸಿಗಳನ್ನು ಬೆಳೆಸಲು ಸಾಧ್ಯ ಎಂದು ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಪಾವಗಡ ಪಟ್ಟದ ಶೃಂಗೇರಿ ಶಾರದಾ ವಿದ್ಯಾಪೀಠ ಶಾಲೆಯ ಅವರಣದಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಪಾವಗಡ ಮೊದಲೇ ಬರ ಪ್ರದೇಶ ಎಂದೆ ಹೆಸರುವಾಸಿಯಾದ ತಾಲ್ಲೂಕು ಕಡಿಮೆ ಮಳೆ ಬೀಳುವ ಪ್ರದೇಶ ಇದಕ್ಕೆ ಕಾರಣ ಕಾಡು ಬೆಳೆಸುವುದರಲ್ಲಿ ಈ ಭಾಗದ ಜನರ ನಿರ್ಲಕ್ಷ್ಯ ಒಂದು ಕಾರಣ ಎಂಬುದಾಗಿ ಹೇಳಬಹುದಾಗಿದೆ.
ಪ್ರತಿವರ್ಷ ಸಾವಿರಾರು ಸಸಿಗಳನ್ನು ನೆಟ್ಟಿದೇವೆ ಎಂಬುದು ಕೇಳಿದ್ದೆವೆ ಅದರೆ ಅವುಗಳ ಯಾವ ಮಟ್ಟಿಗೆ ಬೆಳೆದಿವೆ ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ. ಅದೀಕಾರಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ಗಿಡಗಳ ರಕ್ಷಣೆ ಯಾಗಲು ಸಾಧ್ಯ ಎಂದರು. ಗಿಡಗಳನ್ನು ಹೊಡೆದು ಮಾರಾಟ ಮಾಡುವವರನ್ನು ಮೊದಲು ಅಧಿಕಾರಿಗಳು ಮಟ್ಟ ಹಾಕಬೇಕು ಎಂದರು.
ನಂತರ ಬೆಳ್ಳಿಬಟ್ಟು ಚಂದ್ರಶೇಖರ್ ರೆಡ್ಡಿ ಮಾತನಾಡಿ ನಮ್ಮ ತಾಲ್ಲೂಕು ಬರದ ನಾಡು ಎಂದೆ ಹೆಸರು ಈ ಭಾಗದಲ್ಲಿ ಕಾಡು ಬೆಳೆಸಲೆ ಬೇಕಾದ ಅವಶ್ಯಕತೆ ಇರುವ ತಾಲ್ಲೂಕು ನಮ್ಮದು. ನಮ್ಮ ಜಮೀನಿನಲ್ಲಿ ಹಲವು ಬಾರಿ ಕರಡಿಗಳಿಂದ ಬಹಾಳಷ್ಟು ನಷ್ಟವನ್ನು ಅನುಭವಿಸಿದ್ದೆವೆ ಅದರೆ ಅದರ ಪರಿಹಾರವಾಗಿ ನೀಡಿದ ಪೋಟೋಗಳ ಖರ್ಚು ಸಮೇತ ನಮ್ಮಗೆ ಸರ್ಕಾರದಿಂದ ಅಥವಾ ಅರಣ್ಯ ಇಲಾಖೆಯಿಂದಾಗಿ ಸಿಗಲಿಲ್ಲ ಎಂದರು.
ಇಂದು ಬಹಳಷ್ಟು ಎನ್.ಜಿ.ಒ ಗಳಿಂದಾಗಿ ಸಸಿಗಳನ್ನು ನೆಡೆಯುವ ಕಾರ್ಯಕ್ರಮಗಳು ನಡೆಯುತ್ತಿವೆ.
ಅಧಿಕಾರಿ ಐದು ಸಾವಿರ ಹತ್ತು ಸಾವಿರ ಸಸಿಗಳನ್ನು ಹಾಕಿದ್ದೇವೆ ಎಂಬುದಾಗಿ ಪತ್ರತಿಕೆಗಳಲ್ಲಿ ಜಾಹಿರಾತುಗಳ ರೀತಿ ಅಗಬಾರದು ಗಿಡನೆಟ್ಟಿದ ಸ್ವಲ್ಪವತ್ತಿಗೆ ಮೆಕೆ ತಿಂದು ಹೋಗಿರುತ್ತದೆ ಎಂದರು.
ಈ ವೇಳೆ ಮಾಜಿ ಪುರಸಭೆ ಸದಸ್ಯ ಎ.ಶಂಕರ್ ರೆಡ್ಡಿ.ಪುರಸಭೆ ಅಧ್ಯಕ್ಷ ವೇಲು.ಉಪಾಧ್ಯಕ್ಷ ಜಾಹ್ನವಿ.ತಹಶಿಲ್ದಾರ್ ವರದರಾಜು, ಪುರಸಭೆ ಸದಸ್ಯ ಮಹಮ್ಮದ್ ಇಮ್ರಾನ್, ವೆಂಕಟಮ್ಮನಹಳ್ಳಿ ಕಾಂಗ್ರೆಸ್ ಯುವ ಮುಖಂಡ ಬತ್ತಿನೇನಿ ನಾನಿ, ಅನಿಲ್.ವಿಜಿ, ವಲಯ ಅರಣ್ಯ ಅಧಿಕಾರಿ ಸತೀಶ್ ಚಂದ್ರ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಸೀವಪ್ಪ ಹುಸಮಣಿ, ಸಾಮಾಜಿಕ ಉಪವಲಯಧಿಕಾರಿ ಬಸವರಾಜು, ಅರಣ್ಯ ರಕ್ಷಣಾಧಿಕಾರಿಗಳಾದ ಹಸೆನ್ ಬಾಷ ಮುಲ್ಲಾ, ಗಂಗಾಧರ, ಕೇಶವ ಹಾಗೂ ಇತರೆ ಸಾರ್ವಜನಿಕರು ಮತ್ತು ಶಾಲೆಯ ಮಕ್ಕಳು ಇದ್ದರು.