Saturday, 7th September 2024

ಲಕ್ಷಾನುಗಟ್ಟಲೆ ವಿದ್ಯುತ್ ಬಾಕಿ ಉಳಿಸಿಕೊಂಡ ಸರಕಾರಿ ಇಲಾಖೆಗಳು

ತುಮಕೂರು: ಬೆವಿಕಂ ತುಮಕೂರು ವಿಭಾಗ ವ್ಯಾಪ್ತಿಗೆ ಒಳಪಡುವ ತುಮಕೂರು ಮತ್ತು ಗುಬ್ಬಿ ತಾಲ್ಲೂಕಿನ ಸರಕಾರಿ ಇಲಾಖೆ ಗಳು ಆಗಸ್ಟ್-2023ರ ಅಂತ್ಯಕ್ಕೆ ಲಕ್ಷಾನುಗಟ್ಟಲೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ.

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ-17955.76ಲಕ್ಷ ., ಕಾವೇರಿ ನೀರಾವರಿ ನಿಗಮ-758.00ಲಕ್ಷ, ನಗರಾಭಿವೃದ್ಧಿ ಇಲಾಖೆ-585.00ಲಕ್ಷ , ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ-71.72ಲಕ್ಷ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ-46.00ಲಕ್ಷ., ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ-13.26ಲಕ್ಷ ., ಗೃಹ ಇಲಾಖೆ-8.19ಲಕ್ಷ ., ಶಿಕ್ಷಣ ಇಲಾಖೆ-6.44ಲಕ್ಷ , ಕಂದಾಯ ಇಲಾಖೆ-4.76ಲಕ್ಷ., ಸಮಾಜ ಕಲ್ಯಾಣ ಇಲಾಖೆ -3.54ಲಕ್ಷ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-1.82ಲಕ್ಷ ., ಲೋಕೋಪಯೋಗಿ ಇಲಾಖೆ-1.58ಲಕ್ಷ ಬಾಕಿ ಉಳಿಸಿಕೊಂಡಿವೆ.

ಬಾಕಿ ಇರುವ ಹಣ ಪಾವತಿ ಮಾಡದೇ ಇದ್ದಲ್ಲಿ ವಿದ್ಯುತ್ ನಿಲುಗಡೆಯಂತಹ ಕ್ರಮಗಳಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ, ಅನನುಕೂಲತೆಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಜವಾಬ್ದಾರಿ ಆಗಿರುವುದಿಲ್ಲ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!