ಗೌರಿಬಿದನೂರು : ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆರ್.ಮುನಿಲಕ್ಷ್ಮಮ್ಮ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಬಲರಾಮ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಎಪಿಎಂಸಿ ಆವರಣದಲ್ಲಿ ಇರುವ ಕುರಿ ಸಾಗಾಣಿಕೆದಾರರ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ,ಅಧ್ಯಕ್ಷ ಸ್ಥಾನಕ್ಕೆ ಆರ್.ಮುನಿಲಕ್ಷ್ಮಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಲರಾಮ್ ಅವರುಗಳು ನಾಮಪತ್ರವನ್ನು ಸಲ್ಲಿಸಿದ್ದರು,
ಬೇರಾರು ನಾಮಪತ್ರಗಳನ್ನು ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ಆರ್.ಮುನಿಲಕ್ಷ್ಮಮ್ಮ ಅಧ್ಯಕ್ಷರಾಗಿ, ಬಲರಾಮ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಕುರಿ ಸಾಗಾಣಿಕೆದಾರರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಆರ್.ಮುನಿಲಕ್ಷ್ಮಮ್ಮ ಅವರು ತಮ್ಮನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಮಾಡಿದ ಸಂಘದ ನಿರ್ದೇಶಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಮಾತನಾಡುತ್ತಾ, ತಾಲ್ಲೂಕಿನ ಕುರಿ ಸಾಗಾಣಿಕೆದಾರರ ಹಿತವನ್ನು ಕಾಪಾಡಲು ತಾನು ಬದ್ದವಾಗಿದ್ದು,ಸರಕಾರದಿಂದ ಸಿಗಬಹುದಾದ ಸವಲತ್ತುಗಳನ್ನು ಕುರಿ ಸಾಗಾಣಿಕೆದಾರರಿಗೆ ಒದಗಿಸಿಕೊಡುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಸಂಘದ ನೂತನ ಉಪಾಧ್ಯಕ್ಷ ಬಲರಾಮ್, ನಿರ್ದೇಶಕರಾದ ಆರ್ ಪಿ.ಗೋಪಾಲಗೌಡ,ಕೃಷ್ಣಪ್ಪ,ಎಸ್ ವಿ.ರಾಜಣ್ಣ, ನಾರಾಯಣಸ್ವಾಮಿ, ಜಯಣ್ಣ, ಗೋಪಾಲ್, ಮೋಹನ್ ಕುಮಾರ್,ವಿಸಿ ಗಂಗಯ್ಯ,ಅನಿಲ್ ಕುಮಾರ್, ಧರ್ಮಪಾಲ್,ಪುಣ್ಯವತಿ,ಲೀಲಾವತಿ ಹಾಗೂ ಚುನಾವಣಾ ಅಧಿಕಾರಿ ಶಿವಲಿಂಗಯ್ಯ ಅವರುಗಳು ಉಪಸ್ಥಿತರಿದ್ದರು.