ಕೇಂದ್ರ ಸರಕಾರದ ವಿರುದ್ದ ಘೋಷಣೆ : ಮಾನವ ಸರಪಳಿ ನಿರ್ಮಿಸಿ ಖಂಡನೆ
ಚಿಕ್ಕಬಳ್ಳಾಪುರ : ಮೋದಿಯಿರಲಿ ಅಮಿತ್ ಶಾ ಇರಲಿ ಅವರಿಗೆ ಈ ದೇಶದ ಇತಿಹಾಸ ಗೊತ್ತಿಲ್ಲ.ಅವರಿಗೂ ಇತಿಹಾಸವಿಲ್ಲ.ಅರಿವುಗೇಡಿಯಾಗಿ ಹೇಳಿಕೆ ನೀಡಿರುವ ಶಾ ಕಾರಣಕ್ಕೆ ದೇಶಕ್ಕೆ ದೇಶವೇ ಹೊತ್ತಿ ಉರಿಯುತ್ತಿದೆ. ಅಂಬೇಡ್ಕರ್ ಹೆಸರೇಳಲು ನಿಮಗೆ ಅವಮಾನ ಆಗುವುದಾದರೆ ನೀವು ಈದೇಶವನ್ನು ಬಿಟ್ಟು ಪಾಕಿಸ್ಥಾನಕ್ಕೆ ತೊಲಗಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸುಧಾ ವೆಂಕಟೇಶ್ ಗುಡುಗಿದರು.
ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಿಂದ ಅಂಬೇಡ್ಕರ್ ವೃತ್ತದವರೆಗೆ ಅಮಿತ್ ಶಾ ಭಾವಚಿತ್ರವನ್ನು ಹಿಡಿದು ಮೆರವಣಿಗೆ ನಡೆಸಿದ ದಲಿತ ಪರ ಸಂಘಟನೆಗಳ ಮುಖಂಡರು ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗುತ್ತಾ, ಮಾನವ ಸರಪಳಿ ನಿರ್ಮಿಸಿ ಖಂಡನೆ ವ್ಯಕ್ತಪಡಿಸಿದರು.
ಸುಧಾ ವೆಂಕಟೇಶ್ ಮಾತನಾಡಿ ಅಂಬೇಡ್ಕರ್ ಪಡೆದ ಶಿಕ್ಷಣದ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲದ ಮನು ವಾದಿ ಸಂತಾನ ಅವರ ಹೆಸರು ಹೇಳಿದರೆ ಮುಕ್ತಿ ಸಿಗಲ್ಲ, ದೇವರ ಹೆಸರು ಹೇಳಿ ಎಂದು ಹೇಳುವ ಮೂಲಕ ಮನು ಸಂಸ್ಕೃತಿಯನ್ನು ನಮ್ಮ ಮೇಲೆ ಹೇರಲು ಹೊರಟಿದ್ದಾರೆ.ಇದನ್ನು ಅಂಬೇಡ್ಕರ್ ಅವರಿಂದ ಉಪಕೃತರಾದ ಮಾನವಂತ ಸಮಾಜ ಖಂಡಿಸಬೇಕಿದೆ.ಏಕೆAದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ದಲಿತರಿಗೆ ಮಾತ್ರ ಸಂವಿಧಾನ ಬರೆದಿಲ್ಲ.ದೇಶದ ಎಲ್ಲಾ ನಿವಾಸಿಗಳಿಗೆ ಅನುಕೂಲ ಮಾಡಿದ್ದಾರೆ ಎಂದರು.
ಗೃಹಮAತ್ರಿಯಾಗಿ ಈತ ನೀಡಿರುವ ಬಾಲಿಷ ಹೇಳಿಕೆಯನ್ನು ದಲಿತ ಸಮುದಾಯ ಖಂಡಿಸುತ್ತದೆ.ಈತ ಕೂಡಲೇ ದೇಶದ ಜನರ ಕ್ಷಮೆ ಕೇಳದಿದ್ದರೆ ಇನ್ನಷ್ಟು ಉಗ್ರವಾದ ಹೋರಾಟ ಮತ್ತು ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡ ಗ.ನಾ.ಅಶ್ವತ್ಥ್ ಮಾತನಾಡಿ ದೇಶದಲ್ಲಿ ಬಿಜೆಪಿ ಮುಖಂಡರು ಮತ್ತು ಸರಕಾರ ಮೋದಿ ಮೋದಿ ಎಂದು ಅಬ್ಬರಿಸುವ ಮೂಲಕ ಸಂವಿಧಾನಕ್ಕೆ ವಿರುದ್ಧವಾದ ನಡೆಯನ್ನು ಅನುಸರಿಸುತ್ತಿರುವುದು ನಮಗೆ ಗೊತ್ತಿದೆ.ಇದೇ ಮೋದಿ ಅಮಿತ್ ಶಾ ಕುಮ್ಮಕ್ಕಿನಲ್ಲಿ ಗುಜರಾತ್‌ನ ಗೋದ್ರಾದಲ್ಲಿ ನೀವು ನಡೆಸಿರುವ ನರಮೇದ ಇನ್ನೂ ನಮ್ಮ ಮನಸ್ಸಿಂದ ಮಾಸಿಲ್ಲ.ಗರ್ಭಿಣಿ ಹೊಟ್ಟೆಯನ್ನು ಸೀಳಿ ತ್ರಿಶೂಲಕ್ಕೆ ಕಂದಮ್ಮನನ್ನು ನೇತಾಕಿ ಕೇಕೆ ಹಾಕಿದ್ದನ್ನು ನೀವು ಮರೆತಿರಬಹುದು.ಆದರೆ ಅಹಿಂದ ಒಕ್ಕೂಟ ಮತ್ತು ಮಾನವೀಯ ಮನಸ್ಸುಗಳು ಮರೆತಿಲ್ಲ.
ನಿಮ್ಮ ಮುಖವಾಡವನ್ನು ಕಳಚುವ ದಿನಗಳು ದೂರವಿಲ್ಲ.ಸುಳ್ಳನ್ನು ಹೇಳಿ ಮೋಸಮಾಡುವುದು ಇಲ್ಲಿಗೇ ನಿಲ್ಲಬೇಕು.ರಾಜ್ಯಾಂಗ ನೀಡಿರುವ ಹಕ್ಕನ್ನು ಅನುಭವಿಸಿ ಅದರ ಮೇಲೆ ಸವಾರಿ ಮಾಡುವ ಹೀನ ಪ್ರವೃತ್ತಿ ಬಿಟ್ಟು,ಅಂಬೇಡ್ಕರ್ ಬಗ್ಗೆ ತಪ್ಪು ಹೇಳಿಕೆ ಕೊಡುವುದನ್ನು ಬಿಟ್ಟು ಮೋದಿಯವರೇ ಮೊದಲು ಅಮಿತ್‌ಶಾ ರಾಜೀನಾಮೆ ಪಡೆಯಿರಿ ಎಂದು ಗುಡುಗಿದರು.
ಈವೇಳೆ ಕೋಮುವಾದವನ್ನು ಬಿತ್ತಿರುವ ಅಮಿತ್ ಶಾ ಕೂಡ ಗೃಹಮಂತ್ರಿಯಾಗಲಿ ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣ ಎಂಬ ವಿವೇಕ ಇಲ್ಲದೆ ಹೇಳಿಕೆ ನೀಡಿರುವುದನ್ನು ಬಲವಾಗಿ ಖಂಡಿಸುತ್ತೇನೆ ಎಂದು ಬಿ.ವಿ.ಆನಂದ್ ಹೇಳಿದರು. ಇದೇ ವೇಳೆ ಮಾಜಿ ನಗರಸಭಾ ಸದಸ್ಯ ಶ್ರೀನಿವಾಸ್ ಮಾತನಾಡಿದರು.
ಪ್ರತಿಭಟನೆಯ ನಂತರ ತಹಶೀಲ್ದಾರ್ ಮೂಲಕ ಅಮಿತ್ ಶಾ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿ ರಾಷ್ಟçಪತಿಗೆ ಮನವಿ ಪತ್ರವನ್ನು ರವಾನಿಸಿದರು.
ಈ ವೇಳೆ ಮುಖಂಡರಾದ ಎನ್.ಶ್ರೀನಿವಾಸ್,ಬಿ.ವಿ.ಆನಂದ್,ಕೆ.ಎA. ನಾರಾಯಣಸ್ವಾಮಿ, ವೆಂಕಟೇಶ್,ರಮಣಪ್ಪ, ಸಾಗರ್, ಗೌತಮ್ ಗಂಗಾಧರ್,ಮುನಿಕೃಷ್ಣಪ್ಪ ತಿಪ್ಪೇನಹಳ್ಳಿ ನಾರಾಯಣ್, ಸೇರಿ ನೂರಾರು ಕಾರ್ಯಕರ್ತರು ಇದ್ದರು.