ಪೆಟ್ರೋಲ್ ಹಾಕುವುದರಲ್ಲಿ ಯಾವುದೇ ಮೋಸವಾಗಿಲ್ಲ ಎಂದು ಸ್ಪಷ್ಟನೆ
ಚಿಂತಾಮಣಿ: ನಗರದ ಬೆಂಗಳೂರು ವೃತ್ತದ ಸಮೀಪವಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುವುದರಲ್ಲಿ ಸಿಬ್ಬಂದಿ ಮೋಸ ಮಾಡಿದ್ದಾರೆ ಎಂದು ಕೆಲ ವಾಹನ ಸವಾರರು ಆರೋಪ ಮಾಡಿದ್ದರು.
ಈ ಕುರಿತು ಸುದ್ದಿ ಬಿತ್ತರಿಸಲಾಗಿತ್ತು. ಇದರ ಬೆನ್ನಲ್ಲೇ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರಾದ ಬೀನಾ ಎನ್ ರವರು ಸಂಜೆ ಪೆಟ್ರೋಲ್ ಬಂಕ್ ಗೆ ಭೇಟಿ ಸಂಪೂರ್ಣ ಮಾಹಿತಿ ಪಡೆದು ಅಲ್ಲಿಯೇ ಪೆಟ್ರೋಲ್ ಹಾಕುವ ಪಂಪುಗಳನ್ನು ಪರಿಶೀಲನೆ ಮಾಡಿದರು.
ನಂತರ ಪೆಟ್ರೋಲ್ ಬಂಕ್ ನಲ್ಲಿರುವ ಸಿಸ್ಟಮ್ ನ ಸಂಪುಟ ಮಾಹಿತಿ ಪಡೆದ ನಂತರ ಮಾತನಾಡಿದವರು ಪೆಟ್ರೋಲ್ ಬಂಕಿನಲ್ಲಿ ಅಳತೆ ಮಾಡುವ ವಿಚಾರದಲ್ಲಿ ಯಾವುದೇ ಮೋಸ ಕಂಡುಬಂದಿಲ್ಲ ಎಂದು ವಿವರಿಸಿದರು.
ಇದನ್ನೂ ಓದಿ: chikkaballapur