ತುಮಕೂರು: ಸುಪ್ರಿಂಕೋರ್ಟಿನ ಏಳು ನ್ಯಾಯಾಧೀಶರ ಪೀಠ ನೀಡಿರುವ ಒಳಮೀಸಲಾತಿ ತೀರ್ಪುನ್ನು ಯಥಾ ವತ್ತು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪತ್ರಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಸುಮಾರು ೩ ದಶಕಗಳ ಹೋರಾಟದ ಫಲವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಪಾಲು ಹಂಚಿಕೆ ಮಾಡುವ ಜವಾಬ್ದಾರಿಯನ್ನು ರಾಜ್ಯ ಸರಕಾರಗಳಿಗೆ ನೀಡಿ ಸುಪ್ರಿಂಕೋರ್ಟು ತೀರ್ಪು ನೀಡಿದೆ.
ಸದರಿ ತೀರ್ಪು ಬಂದು ತಿಂಗಳು ಕಳೆದರೂ ಸಾಮಾಜಿಕ ನ್ಯಾಯದ ಪರ ಎಂದು ಹೇಳುವ ಕಾಂಗ್ರೆಸ್ ಸರಕಾರ ಇದುವರೆಗೂ ಜಾರಿಗೆ ತಂದಿಲ್ಲ.ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ನಾಟಕವಾಡುತ್ತಿದ್ದಾರೆ ಎಂಬುದು ನಮ್ಮ ಆರೋಪವಾಗಿದೆ. ಕೂಡಲೇ ಸರಕಾರ ಸುಪ್ರಿಂಕೋರ್ಟು ತೀರ್ಪನ್ನು ಜಾರಿಗೆ ತರಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಂವಿಧಾನ ಉಳಿವು ಸಾಧ್ಯ ಎಂದು ಬೊಬ್ಬೆ ಹೊಡೆಯು ಕಾಂಗ್ರೆಸಿಗರಿಗೆ ತೀರ್ಪು ಬಂದ ಒಂದು ತಿಂಗಳು ಕಳೆದರೂ ಜಾರಿಗೊಳಿಸಿದಿರುವುದು ಪಕ್ಷದ ಶಾಸಕರು, ಸಂಸದರ ಕಣ್ಣಗೆ ಕಾಣುತ್ತಿಲ್ಲವೇ, ರಾಜ್ಯ ಸರಕಾರ ಕೂಡಲೇ ಒಳಮೀಸಲಾತಿ ವರ್ಗೀಕರಣ ತೀರ್ಪು ಜಾರಿಗೆ ತರಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ಸಂಬAಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ದಸಂಸದ ಜಿಲ್ಲಾ ಉಪಾಧ್ಯಕ್ಷ ಹಟ್ಟಯ್ಯ, ಜಿಲ್ಲಾ ಸಂಘಟನಾ ಅಧ್ಯಕ್ಷರಾದ ಪುಟ್ಟಸ್ವಾಮಿ,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಲಕ್ಷ್ಮಮ್ಮ, ವಿವಿಧ ದಲಿತ ಸಂಘಟನೆಗಳ ಮುಖಂಡರಾದ ನರಸೀಯಪ್ಪ, ಸುನೀಲ್,ಚಿಣ್ಣನಹಳ್ಳಿರಾಜು, ಮಂಜುನಾಥ್, ಚಂದ್ರಶೇಖರ್ .ಡಿ, ಮಂಜುನಾಥ್ ಚಿಕ್ಕತೊಟ್ಲುಕೆರೆ, ದಲಿತ ಗಂಗಣ್ಣ, ಎ.ರಂಜನ್, ಆಟೋ ಶಿವರಾಜು, ನರಸಿಂಹಮೂರ್ತಿ ಚೇಳೂರು, ಸಿದ್ದೀಕ್, ರ್ವೇಜ್, ಮುಬಾರಕ್ ಸಮೀರ್, ಅಫೀದ್ ಸೇರಿದಂತೆ ಹಲವರು ಭಾಗವಹಿಸಿದ್ದರು.