ಗುಬ್ಬಿ : ಸಾರ್ವಜನಿಕರಿಗೆ ಸಂವಿಧಾನ ಬದ್ಧವಾಗಿರುವ ತಮ್ಮ ಹಕ್ಕುಗಳ ಬಗ್ಗೆ ಅರಿವು ಕಾಳಜಿ ಮೂಲಭೂತ ಕರ್ತವ್ಯಗಳ ಮೇಲೆಯೂ ಇರಬೇಕು. ಶ್ರೀ ಸಾಮಾನ್ಯನ ಮೇಲೆ ಆಗುವ ಶೋಷಣೆ ತಡೆದು ಅವರ ಹಕ್ಕುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಮೂಲ ಕರ್ತವ್ಯ ಎಂದು ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಗ್ರಾಹಕರ ಸಂರಕ್ಷಣೆ ರಾಜ್ಯ ಗೌರವಾಧ್ಯಕ್ಷ ಚೇಳೂರು ಶಿವ ನಂಜಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದವರು ಸಮಾಜ ದಲ್ಲಿ ಜನಸಾಮಾನ್ಯರು ಸುಗಮ ಜೀವನ ನಡೆಸಲು ಮಾನವ ಹಕ್ಕುಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಇತರರ ಹಕ್ಕುಗಳನ್ನು ಗೌರವಿಸಿ ಉಲ್ಲಂಘನೆಯಾಗದಂತೆ ತಡೆದು ರಕ್ಷಣೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ.ರೈತರ ಕಾರ್ಮಿಕರ ದೀನದಲಿತರ ಪರವಾಗಿ ನ್ಯಾಯ ಒದಗಿಸುವಂತಹ ಹೋರಾಟವನ್ನು ಮಾಡಲು ನಮ್ಮ ಸಂಘ ಸಿದ್ಧವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ನಮ್ಮ ಸದಸ್ಯರು ದುರುಪಯೋಗ ಮಾಡಿಕೊಳ್ಳ ಬಾರದು ಎಂದರು.
ನೂತನ ತಾಲೂಕು ಅಧ್ಯಕ್ಷ ಮಾರಶೆಟ್ಟಿಹಳ್ಳಿ ಬಸವರಾಜು ಮಾತನಾಡಿ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿ ತಾಲೂಕು ಮಟ್ಟ ದಲ್ಲಿ ಸಕ್ರಿಯವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತೇನೆ. ಯಾವುದೇ ಭ್ರಷ್ಟಾಚಾರ ನಡೆಯಲು ನಮ್ಮ ಸಂಘ ಬಿಡುವುದಿಲ್ಲ. ಎಲ್ಲಾ ಸದಸ್ಯರು ಒಗ್ಗೂಡಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾದಲಾಪುರ ಲೋಕೇಶ್ .ಎಂ.ಆರ್, ಉಪಾಧ್ಯಕ್ಷ ಮಹಾದೇವಯ್ಯ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಪರಶುರಾಮ್, ಸಂಚಾಲಕರಾದ, ಸುರೇಶ್, ಗಿರೀಶ್, ಪಾತ ರಾಜು, ಯೋಗೀಶ್, ಗಂಗಯ್ಯ, ನಾಗೇಂದ್ರ, ನರಸಿಂಹರಾಜು, ಮಹೇಂದ್ರ, ಯೋಗನಂದ ಹಾಗೂ ಇನ್ನಿತರರು ಉಪಸ್ಥಿತರಿದ್ದರು.