Tuesday, 26th November 2024

ಅಭಿವೃದ್ಧಿಯಾಗಲು ರಸ್ತೆಗಳ ನಿರ್ಮಾಣ ಅಗತ್ಯ

ಮಧುಗಿರಿ : ಯಾವುದೇ ಗ್ರಾಮೀಣ ಭಾಗವು ಅಭಿವೃದ್ಧಿಯಾಗಲು ರಸ್ತೆಗಳ ನಿರ್ಮಾಣ ಅಗತ್ಯವಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ತಾಲೂಕಿನ ವೀರಚಿನ್ನೇನಹಳ್ಳಿ – ಬ್ರಹ್ಮದೇವರಹಳ್ಳಿ ರಸ್ತೆ ಸಂಪರ್ಕಿಸಲು ವಿಶೇಷ ಅನು ದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು ರಸ್ತೆ ಅಭಿವೃದ್ಧಿ ಯಿಂದ ಗ್ರಾಮೀಣ ಭಾಗಕ್ಕೆ ಶಕ್ತಿ ಬರಲಿದ್ದು, ಪ್ರತಿಯೊಂದು ಕಾರ್ಯಕ್ಕೂ ಇದು ನೆರವಾಗ ಲಿದೆ. ಈ ರಸ್ತೆ ಅಭಿವೃದ್ಧಿಗೆ ಅನುದಾನದ ಅಗತ್ಯವಿದ್ದು ೪ ಕೋಟಿಯಷ್ಟು ಸಿಕ್ಕಿರಲಿಲ್ಲ. ಇದು ಈ ವರ್ಷ ಸಾಕಾರ ವಾಗಿದ್ದು ಹೇಮಾವತಿ ನಿಗಮದಿಂದ ಅನುದಾನ ತಂದು ಕಾಮ ಗಾರಿಗೆ ಚಾಲನೆ ನೀಡಿದ್ದೇವೆ.

ಕರೊನಾ ಬಂದು ಕುಮಾರಸ್ವಾಮಿ ಸರ್ಕಾರ ಕಳೆದುಕೊಂಡಿದ್ದು ಮಧುಗಿರಿಗೆ ತುಂಬ ನಷ್ಟವಾಗಿತ್ತು. ಆದರೂ ಸ್ನೇಹಿತರ ಸಹಕಾರದಿಂದ ಈ ಕಾರ್ಯವನ್ನೂ ಮಾಡಿದ್ದೇನೆ. ಗುತ್ತಿಗೆದಾರರು ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ಮಿಸಬೇಕಿದ್ದು ಇಂಜಿನಿಯರ್‌ಗಳು ಗುಣಮಟ್ಟಕ್ಕೆ ಆದ್ಯತೆ ನೀಡಬೇಕಿದ್ದು ಕಳಪೆಯಾದರೆ ನೀವೆ ಹೊಣೆಗಾರರಾಗುತ್ತೀರಿ ಎಂದರು.

೩ ಬೆಸ್ಕಾಂ ಸಬ್ ಸ್ಟೇಷನ್‌ಗೆ ಜಾಗ ಕೊಡಿ : ತಾಲೂಕಿನಲ್ಲಿ ಗರಣಿ, ಗಿರೆಗೌಡನಹಳ್ಳಿ ಹಾಗೂ ವೀರಚಿನ್ನೇನಹಳ್ಳಿಯಲ್ಲಿ ಗುಣಮಟ್ಟದ ವಿದ್ಯುತ್‌ಗಾಗಿ ೩ ಬೆಸ್ಕಾಂ ಸಬ್ ಸ್ಟೇಷನ್ ಮಂಜೂರು ಮಾಡಿಸಿದ್ದು ಸರ್ಕಾರಿ ಜಾಗವಿಲ್ಲ. ಗಿರೇಗೌಡನಹಳ್ಳಿಯಲ್ಲಿ ಜಾಗ ಸಿಕ್ಕಿದ್ದು ವೀರಚಿನ್ನೇನಹಳ್ಳಿಯಲ್ಲಿ ಪುರಸಭೆ ಅಧ್ಯಕ್ಷ ತಿಮ್ಮರಾಯಪ್ಪ ಜಾಗ ಕೊಡಲು ಮುಂದೆ ಬಂದಿದ್ದಾರೆ. ಉಳಿದಂತೆ ಗರಣಿಯಲ್ಲಿ ಜಾಗ ಕೊಟ್ಟರೆ ಉತ್ತಮ ಬೆಲೆ ನೀಡಿ ಸಬ್ ಸ್ಟೇಷನ್ ನಿರ್ಮಿಸಲಾಗುತ್ತದೆ. ಇದರಿಂದ ಗ್ರಾಮೀಣ ಭಾಗಕ್ಕೆ ಗುಣ ಮಟ್ಟದ ವಿದ್ಯುತ್ ಪೂರೈಸಲು ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಚಿನ್ನೇನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಸವರಾಜು, ಮಿಡಿಗೇಶಿ ಗ್ರಾ.ಪಂ. ಉಪಾಧ್ಯಕ್ಷ ಸುರೇಶ್, ಸದಸ್ಯರಾದ ಹನುಮಂತರಾಯಪ್ಪ, ಮೂರ್ತಣ್ಣ, ಪ್ರಕಾಶ್, ಗ್ರಾಮದ ಮುಖಂಡ ಚೆನ್ನಲಿಂಗಪ್ಪ, ಮಲ್ಲಿಕಾರ್ಜುನ, ಕಾಂತಣ್ಣ, ಅಂಜನರೆಡ್ಡಿ, ಬ್ರಹ್ನನಂದರೆಡ್ಡಿ, ರಘು, ರಂಗರಾಜು, ಹಾಗೂ ಇತರರು ಇದ್ದರು.