Sunday, 15th December 2024

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಡೆದು ದರೋಡೆ

ಕೊಲ್ಹಾರ: ರಾಷ್ಟ್ರೀಯ ಹೆದ್ದಾರಿ ಉಪ್ಪಲದಿನ್ನಿ ಕ್ರಾಸ್ ಸಮೀಪದ ಹೆಚ್.ಪಿ ಪೆಟ್ರೋಲ್ ಪಂಪ ಹತ್ತಿರ ಮಧ್ಯರಾತ್ರಿ ಕ್ಯಾಂಟರ್ ವಾಹನ ತಡೆದು ಲಕ್ಷಾಂತರ ರೂಪಾಯಿ ದರೋಡೆ ಮಾಡಿರುವ ಘಟನೆ ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಧಾರವಾಡದ ಅಮೀನಭಾವಿಯಲ್ಲಿ ಹತ್ತಿ ಮಾರಿಕೊಂಡು ಜೇವರ್ಗಿಗೆ ತೆರಳುತ್ತಿದ್ದ ಕ್ಯಾಂಟರ್ ವಾಹನದ ಮೇಲೆ ಕಲ್ಲುಗಳಿಂದ ದಾಳಿ ಮಾಡಿ ಚಾಲಕ ಹಾಗೂ ಇನ್ನೂರ್ವ ವ್ಯಕ್ತಿಯ ಮೇಲೆ ಕಾರದ ಪುಡಿ ಎರಚಿ ಅಂದಾಜು 32 ಲಕ್ಷ ರೂಪಾಯಿ ದರೋಡೆ ಮಾಡಲಾಗಿದೆ.

ಮಹಾಂತೇಶ ತಳವಾರ(35) ಹಾಗೂ ಮಲ್ಲಪ್ಪ ಕೊಡಚಿ (29) ದರೋಡೆಗಳಗಾದ ವ್ಯಕ್ತಿಗಳಾಗಿದ್ದು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನಾವಣೆ ಸಹಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.