ತುಮಕೂರು: ರೋಟರಿ ತುಮಕೂರು, ರೋಟರಿ ತುಮಕೂರು ಚಾರಿಟೇಬಲ್ ಟ್ರಸ್ಟ್ ಮತ್ತು ಡಾ.ರಾಮ ಮನೋಹರ್ ಲೋಹಿಯಾ ಆರೋಗ್ಯ ಜೀವನ ಸಂಸ್ಥಾನ ರಾಜ್ಯಸ್ಥಾನ ಇವರ ಸಹಯೋಗದಲ್ಲಿ ನ್ಯಾಚುರಲ್ ಹೆಲ್ತ್ ಕ್ಯಾಂಪ್‌ನ್ನು ರೋಟರಿ ತುಮಕೂರು ಬಾಲಭವನದಲ್ಲಿ ರೋಟರಿ ತುಮಕೂರು 3192ನ ಅಧ್ಯಕ್ಷ ರಾಜೇಶ್ವರಿ ರುದ್ರಪ್ಪ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನ್ಯಾಚುರಲ್ ಹೆಲ್ತ್ ಕ್ಯಾಂಪ್‌ಗೆ ಚಾಲನೆ ನೀಡಿ ಮಾತನಾಡಿದ ರೋಟರಿ ಅಧ್ಯಕ್ಷೆ ರಾಜೇಶ್ವರಿ ಅವರು, ರಾಜಸ್ಥಾನದ ಡಾ.ರಾಮ ಮನೋಹರ ಲೋಹಿಯಾ ಆರೋಗ್ಯ ಜೀವನ ಸಂಸ್ಥಾನದ ನುರಿತ ವೈದ್ಯರ ತಂಡದಿಂದ ಪ್ರತಿ ಬಾರಿ ಯಂತೆ ಈ ವರ್ಷವೂ ಮೊಣಕಾಲು ನೋವು, ದೇಹದ ಅತಿಭಾರ, ಮಧುಮೇಹ, ಅರ್ಧ ತಲೆನೋವು, ಕೀಲು ನೋವು, ಸಂಧಿವಾತ, ಪಿತ್ತವಾತ, ಬಿ.ಪಿ. ಬೆನ್ನನೋವು ಸೇರಿದಂತೆ ಹಲವಾರು ಖಾಯಿಲೆಗಳಿಗೆ ಚಿಕಿತ್ಸೆಯನ್ನು ಸೆ.9ರಿಂದ 14ರವರೆಗೆ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಮತ್ತು ಸಂಜೆ ನಾಲ್ಕು ಗಂಟೆ ಯಿಂದ 7 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.ಹೆಚ್ಚು ಜನರಿಗೆ ಉಪಯೋಗವಾಗಬೇಕೆಂಬುದು ಇದರ ಹಿಂದಿನ ಉದ್ದೇಶ ವಾಗಿದೆ ಎಂದರು.
ಆಯುರ್ವೇದ ವೈದ್ಯ ಡಾ.ವಿನುತ್ ಮಾತನಾಡಿ, ಅಧುನಿಕ ಜೀವನ ಶೈಲಿಯ ಪರಿಣಾಮ ಇಂದು ಎಲ್ಲರೂ ಆರೋಗ್ಯದ ಕಡೆಗೆ ಗಮನಹರಿಸಬೇಕಾಗಿದೆ.ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬಂದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಹೆಚ್ಚು ಸೂಕ್ತ ಎಂದು ತಿಳಿಸಿದರು.
ರೋಟರಿ ಗೌರನ್ನರ್ ಉಮೇಶ್ ಮಾತನಾಡಿ,ರೋಟರಿ ಸಂಸ್ಥೆ ಹುಟ್ಟಿರುವುದೇ ಸಮಾಜ ಸೇವೆಗಾಗಿ, ಈ ಬಾರಿ ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕಳೆದ ಬಾರಿ ನಡೆದ ನ್ಯಾಚುರಲ್ ಹೆಲ್ತ್ ಕ್ಯಾಂಪ್‌ಗೆ ಜನರಿಗೆ ಒಳ್ಳೆಯ ಸ್ಪಂದನೆ ಸಿಕ್ಕಿತ್ತು. ಹಾಗಾಗಿ ಈ ಬಾರಿ ಮತ್ತಷ್ಟು ಜನರು ಕ್ಯಾಂಪ್‌ಗೆ ಬರುವ ನಿರೀಕ್ಷೆಯಿದೆ. ಎಲ್ಲರೂ ಇದರ ಲಾಭ ಪಡೆದುಕೊಳ್ಳಲಿ ಎಂದರು.
ನರರೋಗ ತಜ್ಞ ಡಾ.ವಿಕ್ರಂ ಮಶಾಲ ಮಾತನಾಡಿ, ಕಳೆದ ಬಾರಿ ನಡೆದ ನ್ಯಾಚುರಲ್ ಹೆಲ್ತ್ ಕ್ಯಾಂಪ್‌ಗೆ ಸಾರ್ವಜನಿಕ ರಿಂದ ಒಳ್ಳೆಯ ಸ್ಪಂದನೆ ಸಿಕ್ಕಿತ್ತು. ಚಿಕತ್ಸೆ ಪಡೆದ ಎಲ್ಲರೂ ಖುಷಿಯಿಂದ ತೆರಳಿದ್ದರು. ದಿನದಲ್ಲಿ 15 ನಿಮಿಷಗಳ ಕಾಲ ನಮ್ಮ ಚಿಕಿತ್ಸೆಯನ್ನು ಪಡೆದುಕೊಂಡರೆ,ಗುಣಮುಖರಾಗಿ ಸಂತಸದ ಜೀವನ ನಡೆಸಬಹುದು. ಜರ್ಮನ್ ತಂತ್ರಜ್ಞಾನದ ಮೂಲಕ ಶಸ್ತçಚಿಕಿತ್ಸೆ ಇಲ್ಲದೆ ಮಂಡಿನೋವು ಗುಣಪಡಿಸಬಹುದು. ಇದರ ಲಾಭವನ್ನು ಎಲ್ಲರೂ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರೋಟರಿ ತುಮಕೂರು 3192 ಕಾರ್ಯದರ್ಶಿ ನಾಗಮಣ ,ಮಾಜಿ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ, ನ್ಯಾಚುರಲ್ ಹೆಲ್ತ್ ಕ್ಯಾಂಪ್‌ನ ಥೇರಾಪಿಸ್ಟ್ಗಳಾದ ವಿಷ್ಣು ಲಾಂಡ್ಗೇ, ಆಕಾಶ ಶರ್ಮಾ, ರೋಟರಿಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.