ಬಾಗೇಪಲ್ಲಿ: ಈ ಬಾರಿ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವು ಇಡೀ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ. ವಿದ್ಯಾರ್ಥಿಗಳು ಸಾಧನೆ ಮಾಡಲು ಹಠಮಾರಿ ಗಳಾಗಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಪಟ್ಟಣದ ಸರಕಾರಿ ಶಾಲಾ ಬಾಲಕೀಯರ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಪಂ, ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 2024-25 ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ಕೈಗೊಂಡಿರುವ ಹೋಬಳಿ ಮಟ್ಟದ ಪ್ರೇರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 10ನೇ ತರಗತಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಮೊದಲ ಬಾರಿಗೆ ಬದಲಾವಣೆಯಾಗುವ ಹಂತಾಗಿದ್ದು, ನಿಮ್ಮ ಗಮನ ಶಿಕ್ಷಣದ ಕಡೆ ಹೆಚ್ಚು ನೀಡುವ ನಿಟ್ಟಿನಲ್ಲಿ ಓದಬೇಕು ಸಾಧಕರಿಗೆ ಅಸಾದ್ಯ ಎಂಬುದು ಪದ ಗೊತ್ತಿರಬಾರದು. ನಾನು ಏನಾದರೂ ಸಾದನೆ ಮಾಡಬೇಕು ಎಂದು ನಿಮ್ಮಲ್ಲಿ ಹಠ ಮತ್ತು ಗುರಿ ಇಟ್ಟುಕೊಳ್ಳಬೇಕು. ನಾನು ಇಂದು ಈ ವೇದಿಕೆಯಲ್ಲಿ ಒಬ್ಬ ಶಾಸಕನಾಗಿ ಮಾತನಾಡಲು ನನ್ನಲ್ಲಿ ಇರುವ ಗುರಿ ಮತ್ತು ಸಂಕಲ್ಪ ಹಾಗೂ ಶಿಸ್ತು ಇವೇ ನನ್ನ ಸಾಧನೆಯ ಮೆಟ್ಟಿಲು.
ನಾನು ಶಾಸಕನಾಗಿ ಆಯ್ಕೆಯಾಗಬೇಕು ಎಂದು ಯಾವತ್ತೂ ಅಂದುಕೊಂಡಿಲ್ಲ ನಾನು ತ್ಯಂತ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದವನು, ೧೦ನೇ ತರಗತಿವರೆಗೂ ಕಾಲಿಗೆ ಚೆಪ್ಪಲಿ ಹಾಕಿಲ್ಲ ಅಂತಹ ಕಷ್ಟಗಳ ಸರಮಾಲೆಯಲ್ಲಿ ಬೆಳೆದವನು.ಪರೀಕ್ಷಗೆ ಇನ್ನು ಎರಡೂವರೆ ತಿಂಗಳು ಬಾಕಿ ಇದೆ ಈ ಎರಡೂ ತಿಂಗಳು ಮೊಬೈಲ್ ಮತ್ತು ಟೀವಿ ಬದಿಗೊತ್ತಿ ಕೇವಲ ಓದಿನ ಕಡೆ ಗಮನ ಕೊಡಬೇಕು ಪೋಷಕರು ಅಷ್ಟೇ ಯಾವುದೇ ಕಾರಣಕ್ಕೂ ಸಂಜೆ ಸಮಯ ದಲ್ಲಿ ಸೀರಿಯಲ್ ನೋಡಲು ಹೋಗಬೇಡಿ ಕಾರಣ ನೀವು ಟೀವಿ ನೋಡಿದರೆ ನಿಮ್ಮ ಮಕ್ಕಳು ಸಹಾ ಟೀವಿ ನೋಡಲು ಮುಂದಾಗುತ್ತಾರೆ ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ಪಾಸಾಗಲು ನಮ್ಮ ಕಡೆಯಿಂದ 40ರಷ್ಟು ಪಾತ್ರ ಇದ್ದರೆ ಪೋಷಕರ ಪಾತ್ರ ಶೇ60 ರಷ್ಟು ಇರುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಪಾಸಾಗಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ನಂಜುಂಡಪ್ಪ, ತಹಶೀಲ್ದಾರ್ ಮನೀಷ್ ಎನ್ ಪತ್ರಿ, ಬಿಇಒ ಎನ್.ವೆಂಕಟೇಶಪ್ಪ, ಕ್ಷೇತ್ರ ಸಮನ್ವಾಧಿಕಾರಿ ಆರ್.ವೆಂಕಟರಾಮಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ಕೆಡಿಪಿ ಸದಸ್ಯರಾದ ಮಂಜುನಾಥರೆಡ್ಡಿ, ಜಿಪಂ ಮಾಜಿ ಸದಸ್ಯ ನರಸಿಂಹಪ್ಪ, ಶಿಕ್ಷಣ ಇಲಾಖೆಯ ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಪಿ.ವೆಂಕಟರವಣಪ್ಪ, ಬೈರೆಡ್ಡಿ, ಶ್ರೀನಿವಾಸ ಈಶ್ವರಪ್ಪ, ಕೆ.ವಿ.ಶ್ರೀನಿವಾಸ ಕೆ.ವಿ.ಆದಿನಾರಾಯಣ ಸೇರಿದಂತೆ ಹಲವಾರು ಶಿಕ್ಷಕರು ಹಾಜರಿದ್ದರು.