ಕೋಲಾರ: ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ್ ಹೇಳಿದರು ಕೊಲ್ಹಾರ ತಾಲ್ಲೂಕಿನ ಹಿರೆ ಗರಸಂಗಿ ಹಾಗೂ ಚಿಕ್ಕ ಗರಸಂಗಿ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಮತಕ್ಷೇತ್ರದ ಪ್ರತಿ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಮುಳವಾಡ ಏತ ನೀರಾವರಿಯ ಮೂಲಕ ಈ ಭಾಗದ ರೈರಾಪಿ ವರ್ಗದ ಕಷ್ಟ ನೀಗಿದೆ ಜಮೀನುಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿವೆ ಮುಳವಾಡ ಏತನೀರಾವರಿಯಿಂದ 31 ಸಾವೀರ ಹೆಕ್ಟೇರ್ ಪ್ರದೇಶ ಹಸಿರಿನಿಂದ ಕಂಗೊ ಳಿಸುತ್ತಿದೆ ನೀರು ಹರಿಸಿರುವ ಸಾರ್ಥಕತೆ ನನ್ನಲ್ಲಿದೆ ಎಂದರು. ಗರಸಂಗಿ ಗ್ರಾಮ ಕೊಲ್ಹಾರ ಪಟ್ಟಣಕ್ಕೆ ಹೊಂದಿಕೊಂಡಂತೆ ಇದೆ.
ಬಸವನಬಾಗೇವಾಡಿ ಪಟ್ಟಣದ ಮಾದರಿಯಲ್ಲೇ ಕೊಲ್ಹಾರ ಪಟ್ಟಣವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮಿಸ ಲಾಗುತ್ತಿದೆ. ಕೊಲ್ಹಾರ ಪಟ್ಟಣ ಮುಳುಗಡೆ ಹಣೆಪಟ್ಟಿ ಕಟ್ಟಿಕೊಂಡು ಅಭಿವೃದ್ಧಿಯಿಂದ ವಂಚಿತವಾಗಿತ್ತು ನನ್ನ ಅಧಿಕಾರಾವಧಿ ಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಹೈಸ್ಕೂಲು, ಪಾಲಿಟೆಕ್ನಿಕ್ ಕಾಲೇಜು, 50 ಹಾಸಿಗೆಗಳ ಆಸ್ಪತ್ರೆ, ಒಳಚರಂಡಿ ಕಾಮಗಾರಿ, ಗ್ರಾ.ಪಂ ಯಿಂದ ಪ.ಪಂ ಆಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇನ್ನೂ ಅನೇಕ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅನುದಾನ ತಂದಲ್ಲಿ ಕೆಲವರು ಸುಖಾಸುಮ್ಮನೆ ಅನುದಾನ ತಡೆಹಿಡಿಯುವ ಕೆಲಸ ಮಾಡುತ್ತಾರೆ ಈ ರೀತಿ ಮಾಡದೆ ಅಭಿವೃದ್ಧಿ ಸಹಕಾರ ನೀಡಬೇಕು ಎಂದು ಹೇಳಿದರು.
ಮುಳುಗಡೆಯಾದ ಕೊಲ್ಹಾರ ಪಟ್ಟಣದಲ್ಲಿ 5 ಸಾವಿರ ಜನ ನೈಜ ಸಂತ್ರಸ್ತರಿದ್ದರೆ 1200 ಭೋಗಸ್ ಹಕ್ಕುಪತ್ರಗಳನ್ನು ಸೃಷ್ಟಿಸಲಾಗಿದೆ ಇದರಿಂದಾಗಿ ನೈಜ ಸಂತ್ರಸ್ತರಿಗೆ ಅನ್ಯಾಯ ವಾಗಿದೆ. ಈ ರೀತಿ ಮೋಸ ಅನ್ಯಾಯಕ್ಕೆ ಆಸ್ಪದ ನೀಡಬಾರದು ಎಂದು ಹೇಳಿದರು.
ಯುವ ಮುಖಂಡ ಅಖೀಲ್ ಗೌಡ ಪಾಟೀಲ್ ಮಾತನಾಡಿ ಶಾಸಕ ಶಿವಾನಂದ ಪಾಟೀಲರು ಮತಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗೂ ಅನುದಾನ ತರುವ ಮೂಲಕ ಬಸವನಬಾಗೇವಾಡಿ ಮತಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ ಮುಂಬರುವ ದಿನಮಾನಗಳಲ್ಲಿ ಅವರ ಕೈ ಬಲಪಡಿಸುವಲ್ಲಿ ಸರ್ವರೂ ಶ್ರಮಿಸೋಣ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ, ಹಣಮಂತ ನ್ಯಾಮಗೌಡ, ರಮೇಶ ಕರಿಗಾರ, ಲಕ್ಷ್ಮಣ ಮಾದರ ಇತರರು ಇದ್ದರು.