Sunday, 22nd December 2024

Sadguru Jaggi vasudev: ಈಶಾ ರೈತ ಉತ್ಪಾದಕ ಕೇಂದ್ರಗಳ ಮೂಲಕ ಸ್ವಾವಲಂಬನೆಗೆ ಮುನ್ನುಡಿ : ಸದ್ಗುರು ಜಗ್ಗಿ ವಾಸುದೇವ್

ಚಿಕ್ಕಬಳ್ಳಾಪುರ: ಈಶಾ ಸಂಸ್ತೆ ಕೇವಲ ಧ್ಯಾನ ಯೋಗಕ್ಕೆ ಮಾತ್ರ ಸೀಮಿತವಾಗಿಲ್ಲ.ದೇಶದಲ್ಲಿ ೨೬ ಕಡೆ ರೈತ ಉತ್ಪಾಧಕ ಕೇಂದ್ರಗಳನ್ನು ಸ್ಥಾಪಿಸಿದ್ದು ಮಧ್ಯವರ್ತಿಗಳ ಹಾವಳಿ ಇಲ್ಲದೆ ೧೮ ತರದ ಉತ್ಪನ್ನಗಳನ್ನು ನೇರವಾಗಿ ರೈತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ಸದ್ಯ ೨೦೦ ಗ್ರಾಮಗಳು ೨೫೦೦ ರೈತ ಕುಟುಂಬಗಳು ನಮ್ಮೊಟ್ಟಿಗೆ ಕೈಜೋಡಿಸಿವೆ ಎಂದು ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದರು.

ನಗರ ಹೊರವಲಯ ಈಶಾ ಫೌಂಡೇಷನ್ ಆವರಣದಲ್ಲಿ ಭಾನುವಾರ ನಡೆಸಿದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.

ಈಗಾಗಲೇ ಈಶಾ ಫೌಂಡೇಷನ್ ನಿಂದಲೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ರೈತ ಉತ್ಪಾದಕ ಕಂಪನಿಗಳ ಆರಂಭ ಮಾಡಿದ್ದು, ಮಣ್ಣಿನ ಫಲವತ್ತತೆ ಉಳಿಸಿಕೊಂಡು, ಮದ್ಯವರ್ತಿಗಳ ಹಾವಳಿಯಿಲ್ಲದೆ ರೈತರು ತಾವೇ ಬೆಳೆದ ಉತ್ಪನ್ನ ಗಳಿಗೆ ಹೇಗೆ ಮಾರುಕಟ್ಟೆ ಕಂಡುಕೊಳ್ಳಬೇಕು, ಇತ್ಯಾದಿ ವಿಚಾರಗಳಲ್ಲಿ ರೈತರಿಗೆ ಮಾಹಿತಿ, ಸಲಹೆ ಮಾರ್ಗದರ್ಶನ ನೀಡುತ್ತೇವೆ. ರೈತ ಉತ್ಪಾದಕ ಕಂಪನಿಗಳಲ್ಲಿ ರೈತರಿಗೆ ಬೆಳೆಯಿಡಲು ಬೇಕಾಗುವ ಬಿತ್ತನೆ ಬೀಜದಿಂದ ಎಲ್ಲವನ್ನು ಸರಿಸುಮಾರು ಶೇ ೩೦ ರಷ್ಟು ಕಡಿಮೆ ಬೆಲೆಗೆ ನೀಡುತ್ತಿದ್ದು, ಮಾರಾಟವನ್ನು ಸಹಾ ಮಾಡಲಾಗುತ್ತಿದೆ.

ಇದರಿಂದಾಗಿ ನಮ್ಮ ಸಂಪರ್ಕದಲ್ಲಿರುವ ರೈತರು ೩೦೦ ರಿಂದ ೫೦೦ ಪಟ್ಟು ಹೆಚ್ಚಿನ ಲಾಭಾಂಶವನ್ನು ಕಾಣು ತ್ತಿದ್ದಾರೆ. ಸದ್ಯಕ್ಕೆ ಹತ್ತು ಸಾವಿರ ರೈತರೊಂದಿಗೆ ಮಾರ್ಗದರ್ಶನ ಮಾಡಲು ಸನ್ನದ್ದರಾಗಿದ್ದೇವೆ. ಹಾಗಾಗಿ ಈಶಾ ಫೌಂಡೇಶನ್ ನಿಂದಲೇ ರೈತ ಉತ್ಪಾದಕ ಕಂಪನಿಗಳ ಆರಂಭ ಮಾಡಲಾಗಿದೆ ಎಂದರು.

ಈಶಾ ಸಂಸ್ಥೆ ಕಳೆದ ೨೪ ವರ್ಷಗಳಿಂದ ಗ್ರಾಮೋತ್ಸವದ ಹೆಸರಿನಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿ ಸುತ್ತಾ ಬಂದಿದ್ದು ಮಾನವೀಯ ಸಂಬAಧಗಳಿಗೆ ಈ ಮೂಲಕ ಒತ್ತು ನೀಡಲಾಗಿದೆ. ಚಿಕ್ಕಬಳ್ಳಾಪುರದ ಈಶಾ ಕೇಂದ್ರದಲ್ಲಿ ಎರಡು ವರ್ಷಗಳಿಂದ ಗ್ರಾಮೀಣ ಕ್ರೀಡೋತ್ಸವ ನಡೆಸುತ್ತಿದ್ದೇವೆ. ಇತ್ತೀಚೆಗೆ ಗ್ರಾಮೀಣ ಜನತೆ ಮದ್ಯವ್ಯಸನಿಗಳಾಗುತ್ತಿದ್ದಾರೆ.

ತಮ್ಮ ದೈನಂದಿನ ಕೆಲಸ ಕಾರ್ಯದಲ್ಲಿ ತೊಡಗಿಯೂ ಸಂಜೆ ಮದ್ಯ ಸೇವೆನೆ ಮಾಡಿ ಮಲಗಿಕೊಳ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದರಿಂದ ಕ್ರೀಡೋತ್ಸವ ಆಯೋಜಿಸಲಾಗಿದೆ.ಈ ಮೂಲಕ ಅವರ ಜೀವನದಲ್ಲಿ ಉತ್ಸಾಹ ಚೈತನ್ಯ ತುಂಬುವ ಸಲುವಾಗಿ ಗ್ರಾಮೀಣ ಭಾಗದವರಿಗಾಗಿಯೇ ಗ್ರಾಮೋ ತ್ಸವ ಆಯೋಜನೆ ಮಾಡುವ ಮೂಲಕ ಆಟೋಟಗಳಲ್ಲಿ ತೊಡಗಿಸುವ ಮೂಲಕ ಮದ್ಯ ವ್ಯಸನ ಮುಕ್ತರನ್ನಾಗಿ ಮಾಡಲು ಶ್ರಮಿಸುತ್ತಿದ್ದೇವೆ.ಅಲ್ಲದೆ ಕ್ರೀಡೆಗಳ ಮೂಲಕ ಜಾತಿ ತಾರತಮ್ಯ ದೂರ ಮಾಡುತ್ತಿದ್ದೇವೆ ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದರು.

ದೇಶದಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯಿಂದಾಗಿ,ಅಭಿವೃದ್ಧಿಯ ನಾಗಾಲೋಟಕ್ಕೆ ಸಿಕ್ಕಿ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಫಲವತ್ತಾದ ಭೂಮಿ ಮರುಭೂಮಿ ಆಗ್ತಿದೆ. ತುರ್ತಾಗಿ ಪರಿಸರ ಸಮತೋಲನ ಆಗಬೇಕಿದೆ. ಲಾಭವಿಲ್ಲದ ವಿಚಾರಗಳ ಬಗ್ಗೆ ಯಾರು ಮಾತನಾಡಲ್ಲ ಎಂದು ಬೇಸರ ವ್ಯೆಕ್ತ ಪಡಿಸಿದ ಅವರು ಕಾವೇರಿ ಕೂಗು ಮತ್ತು ಮಣ್ಣು ಉಳಿಸಿ ಅಭಿಯಾನದೊಂದಿಗೆ ಮುಂದೆ ಮಿರಾಕಲ್ ಅನ್ನೋ ಆಫ್ ಅಭಿವೃದ್ಧಿ ಮಾಡಲಾಗುತ್ತಿದೆ.

ಯುವಕ ಯುವತಿಯರಲ್ಲಿ ಜೀವನ ನಿರ್ವಹಣೆ ಮಾಹಿತಿ ಕೊರತೆ ಇದೆ.ಇವರ ಜೀವನ ನಿರ್ಹವಣೆ ಬಗ್ಗೆ ಆಸಕ್ತಿ ವಹಿಸಿದ್ದೇವೆ.ಮಿರಾಕಲ್   ಆಫ್ ಮೂಲಕ ಜನತೆಗೆ ಮಾನಸಿಕ ದೃಢತೆಯನ್ನು ಅವರಲ್ಲಿರುವ ಇಂದ್ರಿಯಗಳ ಮೂಲಕ ಚುರುಕು ಗೊಳಿಸಿ ಅವರನ್ನು ಒತ್ತಡ ಮುಕ್ತರನ್ನಾಗಿ ಮಾಡುವುದು ಮುಖ್ಯ ಉದ್ದೇಶವಾಗಿದೆ. ಮಿರಾಕಲ್ ಆಫ್‌ನಿಂದ  ಪ್ರಪಂಚಾದ್ಯಾAತ ಮೂನ್ನೂರು ಕೋಟಿ ಜನರಿಗೆ ಏಕಕಾಲದಲ್ಲಿ ಧ್ಯಾನದ ಸಂದೇಶದ ಮೂಲಕ ಜೀವನ ನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡಿ ಅವರ ಜೀವನ ಉತ್ತಮಪಡಿಸುವ ಕನಸು ಕಂಡಿದ್ದೇವೆ ಎಂದು ತಿಳಿಸಿದರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಮತ್ತು ಹಿಂದೂ ಸನ್ಯಾಸಿಗಳ ಮೇಲೆ ದೌರ್ಜನ್ಯ ವಿಚಾರ ಖಂಡಿಸಿದ ಸದ್ಗುರು ಬಾಂಗ್ಲಾದೇಶ ಉದ್ಬವವಾಗಲು ಭಾರತದ ಕೊಡುಗೆ ಅಪಾರವಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ಮಿಲಿಟರಿ ಸೇವೆ ಸಹಿತ ಮಾಡಿದ ಉಪಕಾರವನ್ನು ಮರೆಯುವಂತಿಲ್ಲ.ಬಾAಗ್ಲಾದೇಶ ಉಧ್ಬವವಾಗಲು ಭಾರತದ ೧೧ ಸಾವಿರ ಸೈನಿಕರು ಹುತಾತ್ಮರಾಗಿದ್ದಾರೆ. ಭಾರತದ ಪಕ್ಕದಲ್ಲೇ ಮಿತ್ರ ದೇಶವಾಗಿ ಇರಲಿ ಅಂತ ಸಹಕಾರ ನೀಡಿದೆ. ಆದರೆ  ಹಿಂದೂಗಳ ಮೇಲೆ ದಾಳಿ ನಡೆಯುತ್ತಿದ್ದು, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದೇವೆ ಎಂದರು.

ಮರಗಳನ್ನು ಬೆಳೆಸಲು ರೈತರು ವಿಮುಖರಾಗುತ್ತಿದ್ದಾರೆ. ಇದಕ್ಕೆ ಸರ್ಕಾರದ ನೀತಿಗಳೇ ಕಾರಣವಾಗಿದೆ. ರೈತ ತಾನೇ ಬೆಳೆದ ಮರವನ್ನು ಕಡಿಯಲು ಸರ್ಕಾರ ಅನುಮತಿ ಬೇಕಿದೆ. ಇದರಿಂದಾಗಿ ಶ್ರೀಗಂಧದ ನಾಡು ಎಂದು ಖ್ಯಾತಿ ಗಳಿಸಿದ್ದ  ಕರ್ನಾಟಕ ಈಗ ಆಸ್ಟ್ರೇಲಿಯಾದಿಂದ ಶ್ರೀಗಂಧ ಆಮದು ಮಾಡಿಕೊಳ್ಳುವ ದುಸ್ಥಿತಿಗೆ ಇಳಿದಿದ್ದಾರೆ.  

ರೈತರು ಹೆಚ್ಚಾಗಿ ಶ್ರೀಗಂಧ ಹೊನ್ನೆ ಬೀಟೆ ತೇಗ ಮತ್ತಿತರ ಮರಗಳನ್ನು ಬೆಳೆಯಲು ಮತ್ತು ಅವುಗಳ ಮೇಲಿನ ಹಕ್ಕನ್ನು ರೈತರಿಗೇ ನೀಡಬೇಕು. ಈ ರೀತಿಯ ಮರಗಳನ್ನು ಬೆಳೆಸಿದಲ್ಲಿ ಮರಗಳಿಂದ ಉದುರುವ ಎಲೆಗಳು ಮಣ್ಣಿಗೆ ಸೇರಿ ಮಣ್ಣು ಫಲವತ್ತಾಗುತ್ತದೆ.

ಇಲ್ಲವಾದಲ್ಲಿ ಈಗಾಗಲೇ ಫಲವತ್ತತೆ ಕಳೆದುಕೊಂಡಿರುವ ಭೂಮಿ ಮುಂದಿನ ದಿನಗಳಲ್ಲಿ ಮರಳುಗಾಡಾಗಲಿದೆ. ಮಣ್ಣು ಉಳಿಸಲು  ಸರ್ಕಾರ ರೈತರು ಮರಗಳನ್ನು ಬೆಳೆಸಲು ಉತ್ತೇಜನ ನೀಡಬೇಕಿದೆ. ಎಲೆಕ್ಟ್ರಿಕಲ್ ವಾಹನಗಳಿಂದ ಪರಿಸರಕ್ಕೆ ಅನುಕೂಲ ಇಲ್ಲ. ನನ್ನ ಹೇಳಿಕೆ ವಿವಾದ ಆದರೂ ಪರವಾಗಿಲ್ಲ. ನಗರ ಪ್ರದೇಶಗಳಿಗೆ ಮಾತ್ರ ಎಲೆಕ್ಟ್ರಿಕಲ್ ವಾಹನಗಳು ಸೂಕ್ತ ಎಂದರು.