ಚಿಕ್ಕನಾಯಕನಹಳ್ಳಿ ; ಸಾಹಿತ್ಯ ಪರಿಷತ್ ವತಿಯಿಂದ ಪ್ರತಿನಿತ್ಯವೂ ಗ್ರಾಮ ಹಾಗು ಹೋಬಳಿಗಳಲ್ಲಿ ಸಾಹಿತ್ಯ ಸಮ್ಮೇಳನ ಗಳನ್ನು ಆಯೋಜಿಸಲು ಚಿಂತನೆ ನಡೆಸುವಂತೆ ಸಮ್ಮೇಳನದ ಅಧ್ಯಕ್ಷ ಹೆಚ್.ಎಸ್. ಶಿವಲಿಂಗಯ್ಯನವರು ಸಲಹೆ ನೀಡಿದರು.
ತಾಲ್ಲೂಕು ಕಸಾಪ, ನಗರ-ಕಸಬಾ ಘಟಕದ ವತಿಯಿಂದ ಜೋಗಿಹಳ್ಳಿ ಸಮೀಪದ ಆದಿ ಆಂಜನೇಯ ದೇವಾಲಯದ ಆವರಣದಲ್ಲಿ ಸಿದ್ದು ಜಿ.ಕೆರೆ ವೇದಿಕೆಯಲ್ಲಿ ಶನಿವಾರ ನಡೆದ ಕಸಬಾ ಪ್ರಥಮ ಹೋಬಳಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಭಾಷೆಗೆ ೨ ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದ್ದು ಇತರ ಭಾಷೆಗಳಿ ಗಿಂತಲೂ ಕನ್ನಡ ಭಾಷೆಯ ಲಿಪಿ ಅತ್ಯಂತ ಸುಂದರವಾಗಿದೆ. ನಮ್ಮ ಹಿಂದಿನ ಶ್ರೇಷ್ಠ ಕವಿಗಳಿಂದ ಕನ್ನಡ ಭಾಷೆ ಇಂದು ಬೆಳಕು ಕಂಡಿದೆ. ಚಿಕ್ಕನಾಯಕನಹಳ್ಳಿಯಲ್ಲಿ ಸಂಘಟನೆ, ಜನರ ಪ್ರೋತ್ಸಾಹ ಉತ್ತಮವಾಗಿದ್ದು ಕನ್ನಡ ಉಳಿಸುವಲ್ಲಿ ಕಾರ್ಯೋನ್ಮುಖ ರಾಗಬೇಕು. ಭಾಷೆಯ ಉಳಿವಿನ ಮೂಲಕ ಸಮಾಜದ ಉಳಿವು ಸಾಧ್ಯ, ಇದಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ತಿಳಿಸಿದರು.
ನಮ್ಮ ಮಣ್ಣಿನಲ್ಲಿ ಕಲೆಯಿದೆ. ಅದನ್ನು ಪೋಷಿಸಲು ಸಿ.ಬಿ.ಮಲ್ಲಪ್ಪನವರ ಹೆಸರಿನಲ್ಲಿ ನೀನಾಸಂ ಮಾದರಿ ಒಂದು ನಾಟಕ ತರಬೇತಿ ಶಾಲೆ ಪ್ರಾರಂಭವಾಗಬೇಕು. ಕನ್ನಡ ಭವನ ಅಥವಾ ಸಾಹಿತ್ಯ ಪರಿಷತ್ ಭವನ ಶೀಘ್ರವಾಗಿ ನಿರ್ಮಾಣವಾಗಲಿ ಎಂದು ಈ ವೇದಿಕೆಯ ಮೂಲಕ ಆಶಿಸುತ್ತೇನೆ. ತಾಲ್ಲೂಕಿನ ಪ್ರಮುಖ ದೇಗುಲಗಳು ಕಲೆಯನ್ನು ಬೆಳಸುವ ಪ್ರೋತ್ಸಾಹಿಸುವ ಸಾಂಸ್ಕೃತಿಕ ಕೇಂದ್ರ ಗಳಾಗಲಿ ಎಂದು ಬಯಸುವುದಾಗಿ ಸಮ್ಮೇಳನಾಧ್ಯಕ್ಷರು ನುಡಿದರು.
ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ ಜಿಲ್ಲೆಯಲ್ಲಿ ಐದು ತಾಲ್ಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತುಗಳು ಸ್ವಂತ ಕಟ್ಟಡವನ್ನು ಹೊಂದಿದೆ. ಚಿಕ್ಕನಾಯಕನಹಳ್ಳಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸ್ವಂತ ಕಟ್ಟಡವನ್ನು ಹೊಂದಿಲ್ಲದೆ ಇರುವುದು ವಿಷಾದದ ಸಂಗತಿ. ಆದ್ದರಿಂದ ಕನ್ನಡ ಭವನಗಳಿಲ್ಲದ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಿಸಲು ಸೂಕ್ತ ಸ್ಥಳವನ್ನು ಮಂಜೂರು ಮಾಡುವುದರ ಜೊತೆಗೆ ಅನುದಾನ ನೀಡುವ ಯೋಜನೆಯನ್ನು ಸರಕಾರ ಘೋಷಿಸಬೇಕೆಂದು ಮನವಿ ಮಾಡಿದರು. ಸರಕಾರಿ ಶಾಲೆಗಳನ್ನು ಗಟ್ಟಿಗೊಳಿಸಲು ಎಲ್ಲರೂ ಒಗ್ಗೂಡಬೇಕು. ಜಿಲ್ಲಾ ಕಸಾಪ ವತಿಯಿಂದ ಪ್ರತಿ ತಾಲ್ಲೂಕಿನಲ್ಲಿ ಅತ್ಯಂತ ಹಿಂದುಳಿದ ಶಾಲೆಯನ್ನು ದತ್ತು ಪಡೆದು ದಾನಿಗಳು, ಸರಕಾರದ ನೆರವಿನಿಂದ ಅದರ ಪುನರಜ್ಜೀವನ ಮಾಡಲಾಗು ವುದು ಎಂದರು.
ಅದ್ದೂರಿಯಾಗಿ ನಡೆದ ಪುರ ಮೆರವಣಿಗೆ
ಸಾಹಿತ್ಯ ಸಮ್ಮೇಳನ ಆರಂಭಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ಹಳೆಯೂರು ಆಂಜನೇಯ ಸ್ವಾಮಿ ದೇವಾಲಯದಿಂದ ವಿವಿಧ ಜಾನಪದ ತಂಡಗಳೊAದಿಗೆ ಎತ್ತಿನ ಬಂಡಿಯಲ್ಲಿ ಪುರ ಮೆರವಣಿಗೆ ನಡೆಸಲಾಯಿತು. ಸಮ್ಮೇಳನದ ಅಂಗಳದಲ್ಲಿ ತಹಸೀಲ್ದಾರ್ ತೇಜಸ್ವಿನಿ ರಾಷ್ಟç ಧ್ವಜಾರೋಹಣ ಮತ್ತು ಕಸಾಪ ತಾ.ಘಟಕದ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಕಟ್ಟೇಮನೆ ಪರಿಷತ್ ಧ್ವಜಾ ರೋಹಣ ನಡೆಸಿದರು.
ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ ಕಂಟಲಗೆರೆ ಸಣ್ಣಹೊನ್ನಯ್ಯ ಕವನ ವಾಚಿಸಿ ಶುಭ ಹಾರೈಸಿದರು. ಕಾರ್ಯದರ್ಶಿಗಳಾದ ಪ್ರೊ.ರವಿಕುಮಾರ್, ನಿಶಾನಿ ಕಿರಣ್ ನಿರೂಪಿಸಿ, ಸಂಚಾಲಕ ಸಂಗಮೇಶ್ ವಂದಿಸಿದರು. ಹೋಬಳಿ ಘಟಕದ ಅಧ್ಯಕ್ಷ ಗಂಗಾಧರ್ ಮಗ್ಗದಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಹೋಬಳಿಗಳ ಅಧ್ಯಕ್ಷರು, ತಾ.ಕಸಾಪ ಉಪಾಧ್ಯಕ್ಷ ರಾಜ್ಕುಮಾರ್, ಸಿ.ಎನ್.ಮಂಜುನಾಥ್, ಗೌರವ ಕಾರ್ಯದರ್ಶಿ ನಿರೂಪ್ರಾವತ್, ಗೌ.ಅಧ್ಯಕ್ಷ ದಿನಕರ್, ಪುರಸಭಾ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷೆ ಲಕ್ಷಿö್ಮÃ, ಸದಸ್ಯರಾದ ಶ್ಯಾಮ್, ರತ್ನಮ್ಮ, ಜಕಾವುಲ್ಲಾ, ಮಲ್ಲಿಕಾರ್ಜುನಸ್ವಾಮಿ, ಮಿಲಿಟರಿ ಶಿವಣ್ಣ, ಕೃಷ್ಣೇಗೌಡ, ತರಬೇನಹಳ್ಳಿ ಷಡಕ್ಷರಿ, ಶಿವಣ್ಣ, ನವೀನ್ರಾವತ್, ಮಹಾಂತೇಶ್, ಶಬ್ಬೀರ್, ಇಟ್ಟಿಗೆ ರಂಗಸ್ವಾಮಯ್ಯ, ಲೋಕೇಶ್, ರಘು, ಬ್ರಿಜೇಶ್ ಹಾಗು ಶಾಲಾ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.