• ಅತ್ಯಾಧುನಿಕ ಫಾಸ್ಫರ್ ತಂತ್ರಜ್ಞಾನವನ್ನು ಹೊಂದಿರುವ ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿಯು ಗ್ರಾಹಕರಿಗೆ ಒಂದು ಬಿಲಿಯನ್ ಬಣ್ಣಗಳ ಛಾಯೆಯನ್ನು ವೀಕ್ಷಿಸಲು ಅವಕಾಶ ಮಾಡಿಕೊಡುತ್ತದೆ.
• 2024 ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿಯು 4ಕೆ ಅಪ್ಸ್ಕೇಲಿಂಗ್, ಡೈನಾಮಿಕ್ ಕ್ರಿಸ್ಟಲ್ ಕಲರ್, ಏರ್ ಸ್ಲಿಮ್ ಡಿಸೈನ್, ಮಲ್ಟಿ ವಾಯ್ಸ್ ಅಸಿಸ್ಟೆಂಟ್, ಕ್ಯೂ-ಸಿಂಫನಿ, ಕ್ರಿಸ್ಟಲ್ ಪ್ರೊಸೆಸರ್ 4ಕೆ, ನಾಕ್ಸ್ ಸೆಕ್ಯುರಿಟಿ ಮುಂತಾದ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.
ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ಇಂದು ರೂ. 41990ರ ಆರಂಭಿಕ ಬೆಲೆಯಲ್ಲಿ ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿಯನ್ನು ಬಿಡುಗಡೆ ಮಾಡಿದೆ. ಈ ಪ್ರೀಮಿಯಂ ಟೆಲಿ ವಿಷನ್ ಸರಣಿಯು ವೀಕ್ಷಕರಿಗೆ ಅದ್ಭುತ ವೀಕ್ಷಣಾ ಅನುಭವವನ್ನು ಒದಗಿಸುತ್ತದೆ ಮತ್ತು ಮನೆ ಮನರಂಜನೆಯ ಹೊಸ ಅಧ್ಯಾಯವನ್ನು ಆರಂಭಿಸುತ್ತದೆ.
2024 ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿಯು 4ಕೆ ಅಪ್ಸ್ಕೇಲಿಂಗ್, ಏರ್ ಸ್ಲಿಮ್ ಡಿಸೈನ್, ಡೈನಾಮಿಕ್ ಕ್ರಿಸ್ಟಲ್ ಕಲರ್, ಮಲ್ಟಿ ವಾಯ್ಸ್ ಅಸಿಸ್ಟೆಂಟ್, ಕ್ಯೂ-ಸಿಂಫನಿ, ಮತ್ತು ಕ್ರಿಸ್ಟಲ್ ಪ್ರೊಸೆಸರ್ 4ಕೆ ಸೇರಿದಂತೆ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದೆ. ಹೊಸ 2024 ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿಯು ವಿಶೇಷವಾಗಿ ಕ್ರಿಸ್ಟಲ್ ಪ್ರೊಸೆಸರ್ 4ಕೆ ಮತ್ತು ಮಾಸ್ಟರ್ಫುಲ್ 4ಕೆ ಅಪ್ಸ್ಕೇಲಿಂಗ್ ಫೀಚರ್ ಹೊಂದಿದ್ದು, ಅದರಿಂದ 4ಕೆ ಡಿಸ್ಪ್ಲೇಗೆ ಸೂಕ್ತವಾಗುವಂತೆ ಚಿತ್ರದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಈ ಟಿವಿಯ ಡೈನಾಮಿಕ್ ಕ್ರಿಸ್ಟಲ್ ಕಲರ್ ತಂತ್ರಜ್ಞಾನವು ವಾಸ್ತವ ಜಗತ್ತಿನ ಬಣ್ಣಗಳನ್ನು ಟಿವಿಯಲ್ಲಿಯೂ ಕಾಣಿಸು ವಂತೆ ಮಾಡುತ್ತದೆ. ಜೊತೆಗೆ ಗ್ರಾಹಕರು ಪ್ರತಿ ಬಣ್ಣಗಳ ಛಾಯೆಯನ್ನು ಸಣ್ಣ ವಿವರಗಳಲ್ಲಿ ಕಾಣುವಂತೆ ಮಾಡು ತ್ತದೆ. ಟಿವಿಯ ಹೆಚ್ಡಿಆರ್ ಫೀಚರ್ ಗ್ರಾಹಕರು ವೀಕ್ಷಿಸುವ ದೃಶ್ಯಗಳ ಬೆಳಕಿನ ಮಟ್ಟಗಳನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸುತ್ತದೆ. ಕಾಂಟ್ರಾಸ್ಟ್ ಎನ್ಹಾನ್ಸರ್ ಫೀಚರ್ ಹೆಚ್ಚು ನೈಸರ್ಗಿಕವಾಗಿ ದೃಶ್ಯಗಳನ್ನು ಕಾಣಿಸುತ್ತದೆ ಮತ್ತು ಲೇಯರ್ಡ್ ಕಾಂಟ್ರಾಸ್ಟ್ ಫೀಚರ್ ನಿಂದಾಗಿ ತೀವ್ರ ರೀತಿಯ ದೃಶ್ಯ ನೋಡಬಹುದಾಗಿದೆ. ಟಿವಿಯ ಬಿಲ್ಟ್-ಇನ್ ಮಲ್ಟಿ ವಾಯ್ಸ್ ಅಸಿಸ್ಟೆಂಟ್ ಮೂಲಕ ಗ್ರಾಹಕರು ಬಿಕ್ಸ್ ಬಿ ಅಥವಾ ಅಮೆಜಾನ್ ಅಲೆಕ್ಸಾವನ್ನು ಬಳಸಿಕೊಂಡು ಕನೆಕ್ಟೆಡ್ ಹೋಮ್ ಅನುಭವ ಹೊಂದಬಹುದಾಗಿದೆ.
ಈ ಕುರಿತು ಸ್ಯಾಮ್ಸಂಗ್ ಇಂಡಿಯಾದ ವಿಷುವಲ್ ಡಿಸ್ ಪ್ಲೇ ಬಿಸಿನೆಸ್ನ ಹಿರಿಯ ನಿರ್ದೇಶಕ ವಿಪ್ಲೇಶ್ ಡ್ಯಾಂಗ್ ಅವರು, “ಈ ಕಾಲದ ಯುವ ಗ್ರಾಹಕರು ಕ್ರೀಡೆ, ಓಟಿಟಿ ಅಥವಾ ಇತರ ಟಿವಿ ವೀಕ್ಷಣೆ ಸಂದರ್ಭದಲ್ಲಿ ಅತ್ಯುತ್ಕೃಷ್ಟ ವಾದ ಆಡಿಯೋ- ವಿಶುವಲ್ ಅನುಭವವನ್ನು ನಿರೀಕ್ಷೆ ಮಾಡುತ್ತಾರೆ. ಹಾಗಾಗಿ ಹೊಸ ಕ್ರಿಸ್ಟಲ್ 4ಕೆ ಟಿವಿ ಸರಣಿಯು ಈ ಕಾಲದ ಮನೆಗಳಿಗೆ ಅತ್ಯುತ್ತಮವಾದ ಟಿವಿ ವೀಕ್ಷಣೆಯ ಅನುಭವವನ್ನು ಒದಗಿಸಲು ರೂಪುಗೊಂಡಿದೆ. ಜೊತೆಗೆ ಸ್ಮಾರ್ಟ್ ಮತ್ತು ಕನೆಕ್ಟೆಡ್ ಸೌಲಭ್ಯಗಳನ್ನು ಒದಗಿಸುವ ಮೂಲಕ ಟಿವಿ ವೀಕ್ಷಣಾ ಅನುಭವವನ್ನು ಉನ್ನತೀಕರಿಸು ತ್ತದೆ.
ಕ್ರಿಸ್ಟಲ್ 4ಕೆ ಟಿವಿ ಸರಣಿಯು 4ಕೆ ಅಪ್ಸ್ಕೇಲಿಂಗ್ ತಂತ್ರಜ್ಞಾನ ಹೊಂದಿದ್ದು, 4ಕೆ ಡಿಸ್ಪ್ಲೇಗಳಿಗೆ ಹೊಂದಿಕೊಳ್ಳುವ ಸ್ಟಾಂಡರ್ಡ್ ರೆಸೆಲ್ಯೂಷನ್ ನ ಅತ್ಯುತ್ತಮ ಗುಣಮಟ್ಟದ ಜೀವನದಂತೆಯೇ ಇರುವ ವಿಡಿಯೋ ದೃಶ್ಯಗಳನ್ನು ನೋಡುವಂತೆ ಮಾಡುತ್ತದೆ. ಕ್ಯೂ-ಸಿಂಫನಿ ಮತ್ತು ಓಟಿಎಸ್ ಲೈಟ್ ಫೀಚರ್ ಗಳು ಅತ್ಯುತ್ತಮವಾದ ಆಡಿಯೋ ಸೌಲಭ್ಯಗಳನ್ನು ಒದಗಿಸುತ್ತದೆ. ವಿಶೇಷವಾಗಿ ಈ ಟಿವಿಯು ನಾಕ್ಸ್ ಸೆಕ್ಯೂರಿಟಿ ಫೀಚರ್ ಹೊಂದಿದ್ದು, ಈ ಫೀಚರ್ ಬಳಕೆದಾರರ ಮಾಹಿತಿಗಳಿಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸುತ್ತದೆ,” ಎಂದು ಹೇಳಿದರು.
ಏರ್ಸ್ಲಿಮ್ ವಿನ್ಯಾಸ ಹೊಂದಿದ್ದು, ಸಪೂರವಾಗಿ ಆಕರ್ಷಕವಾಗಿ ಕಾಣಿಸುವ 2024 ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿಯು ಆಂಬಿಯೆಂಟ್ ಎಂಟರ್ಟೈನ್ಮೆಂಟ್ ಪೋರ್ಟಲ್ ಆಗಿದ್ದು, ಇದು ಸ್ಯಾಮ್ಸಂಗ್ ಟಿವಿ ಪ್ಲಸ್ ಸೇವೆ ಜೊತೆಗೆ ಭಾರತದಲ್ಲಿ ಉಚಿತ 300ಕ್ಕೂ ಚಾನಲ್ಗಳ ಕಂಟೆಂಟ್ ಅನ್ನು ನೀಡುತ್ತದೆ.
ಓಟಿಎಸ್ ಲೈಟ್ ಫೀಚರ್ ಗಳನ್ನು ಹೊಂದಿರುವ ಈ ಟಿವಿ ಸರಣಿಯು ಗ್ರಾಹಕರು ಆನ್-ಸ್ಕ್ರೀನ್ ಚಲನೆಯನ್ನು ನಿಜವೆಂದು ಭಾವಿಸುವಂತೆ ಮಾಡುತ್ತದೆ. ಎಲಿವೇಟೆಡ್ ಅಡಾಪ್ಟಿವ್ ಸೌಂಡ್ ತಂತ್ರಜ್ಞಾನವು ಪ್ರತಿಯೊಂದು ಸೀನ್ ಗಳನ್ನು ಗ್ರಾಹಕರಿಗೆ ವಿಶೇಷವಾಗಿ ದಾಟಿಸುವಂತೆ ಮಾಡುತ್ತದೆ. ಈ ತಂತ್ರಜ್ಞಾನದಿಂದ ಟಿವಿ ಹೆಚ್ಚಿ ಪರಿಣಾಮಕಾರಿ ಯಾಗಿ ಮತ್ತು ಡೈನಾಮಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿಯು ಕ್ಯೂ-ಸಿಂಫನಿ ಯನ್ನು ಸಹ ಒಳಗೊಂಡಿದ್ದು, ಈ ಸೌಲಭ್ಯವು ಟಿವಿ ಸ್ಪೀಕರ್ಗಳನ್ನು ಮ್ಯೂಟ್ ಮಾಡದೆಯೇ ಉತ್ತಮ ಸರೌಂಡ್ ಎಫೆಕ್ಟ್ ಒದಗಿಸಲು ಟೆಲಿವಿಷನ್ ಮತ್ತು ಸೌಂಡ್ಬಾರ್ ಸ್ಪೀಕರ್ಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿ ತೀವ್ರವಾದ ವೀಕ್ಷಣಾ ಅನುಭವವನ್ನು ಒದಗಿಸುವ ಸಲುವಾಗಿ ಬಹು ನವೀನ ಆಡಿಯೋ ತಂತ್ರಜ್ಞಾನಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವು ಹೀಗಿವೆ,-
4ಕೆ ಅಪ್ಸ್ಕೇಲಿಂಗ್
2024 ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿ ಶಕ್ತಿಶಾಲಿ 4ಕೆ ಅಪ್ಸ್ಕೇಲಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, ಮೂಲ ಕಂಟೆಂಟ್ ಕಡಿಮೆ ರೆಸಲ್ಯೂಶನ್ ಆಗಿದ್ದರೂ ಸಹ ವೀಕ್ಷಕರು ತಮ್ಮ ಇಷ್ಟದ ದೃಶ್ಯಗಳನ್ನು ಆಕರ್ಷಕ ಬಣ್ಣಗಳು ಮತ್ತು ಹೆಚ್ಚು ವಿವರಗಳ ಮೂಲಕ ಆನಂದಿಸಲು ಅವಕಾಶ ಮಾಡಿಕೊಡುತ್ತದೆ. ಈ ತಂತ್ರಜ್ಞಾನವು ದೃಶ್ಯಗಳನ್ನು 4ಕೆ ರೆಸಲ್ಯೂಶನ್ಗೆ ನಿಕಟವಾಗಿ ಹೊಂದಿಸುವಂತೆ ಚಿತ್ರದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ತೀವ್ರವಾದ ವೀಕ್ಷಣಾ ಅನುಭವವನ್ನು ನೀಡುತ್ತದೆ.
ಡೈನಾಮಿಕ್ ಕ್ರಿಸ್ಟಲ್ ಬಣ್ಣ
ಸ್ಯಾಮ್ಸಂಗ್ನ ಡೈನಾಮಿಕ್ ಕ್ರಿಸ್ಟಲ್ ಕಲರ್ ತಂತ್ರಜ್ಞಾನವು ಒಂದು ಬಿಲಿಯನ್ ಬಣ್ಣಗಳ ಛಾಯೆಯನ್ನು ಒದಗಿಸಿ ದೃಶ್ಯಗಳನ್ನು ಎದ್ದು ಕಾಣಿಸುವಂತೆ ಮತ್ತು ವಾಸ್ತವ ಜಗತ್ತಿನ ಚಿತ್ರಗಳಂತೆ ತೋರಿಸುತ್ತದೆ. ಈ ಫೀಚರ್ ಅತ್ಯಾಧುನಿಕ ಫಾಸ್ಫರ್ ತಂತ್ರಜ್ಞಾನದೊಂದಿಗೆ ಜೊತೆಯಾಗಿ ದೃಶ್ಯ ವೀಕ್ಷಣಾ ಅನುಭವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಜೊತೆಗೆ ಹೆಚ್ಚು ನಿಖರವಾದ ಮತ್ತು ಉತ್ಕೃಷ್ಟವಾದ ಬಣ್ಣಗಳನ್ನು ಕಾಣಿಸುತ್ತದೆ, ಆ ಮೂಲಕ ಪ್ರತೀ ದೃಶ್ಯವನ್ನು ಹೆಚ್ಚು ವಾಸ್ತವಿಕವಾಗಿ ಮತ್ತು ಆಕರ್ಷಕವಾಗಿ ಮಾಡುತ್ತದೆ.
ಏರ್ ಸ್ಲಿಮ್ ವಿನ್ಯಾಸ
ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿ ಏರ್ ಸ್ಲಿಮ್ ವಿನ್ಯಾಸವನ್ನು ಹೊಂದಿದೆ. ನಯವಾಗಿ ಮತ್ತು ಸ್ಲಿಮ್ ಆಗಿರುವ ಈ ಟಿವಿ ಯಾವುದೇ ರೀತಿಯ ಕೋಣೆಯ ಅಲಂಕಾರದ ಜೊತೆ ಸೂಕ್ತವಾಗಿ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಟಿವಿಯ ಸುಂದರ ನಿಲುವು ಯಾವುದೇ ವಾಸದ ಸ್ಥಳಕ್ಕೆ ಆಧುನಿಕ ನೋಟ ಒದಗಿ ಬರುವಂತೆ ಮಾಡುತ್ತದೆ ಮತ್ತು ಉತ್ತಮ ವೀಕ್ಷಣೆಯ ಅನುಭವವನ್ನು ಉತ್ತಮಗೊಳಿಸುತ್ತದೆ.
ಸೋಲಾರ್ ಸೆಲ್ ರಿಮೋಟ್
ಸೋಲಾರ್ ಸೆಲ್ ರಿಮೋಟ್ ಒಂದು ಪರಿಸರ ಸ್ನೇಹಿ ನವೀನ ಫೀಚರ್ ಆಗಿದ್ದು, ಇದನ್ನು ಮರುಬಳಕೆಯ ವಸ್ತುಗಳಿಂದ ತಯಾರಿಸಲಾಗಿದೆ. ಸೂರ್ಯನ ಬೆಳಕು ಅಥವಾ ಒಳಾಂಗಣ ಬೆಳಕನ್ನು ಬಳಸಿಕೊಂಡು ಚಾರ್ಜ್ ಮಾಡಬಹುದಾದಂತೆ ವಿನ್ಯಾಸ ಮಾಡಲಾಗಿದೆ. ಆ ಮೂಲಕ ಬಿಸಾಡಬಹುದಾದ ಬ್ಯಾಟರಿಗಳ ಅಗತ್ಯ ಇಲ್ಲದಂತೆ ಮಾಡುತ್ತದೆ. ಅನುಕೂಲಕರ ಮತ್ತು ವಿಶ್ವಾಸಾರ್ಹ ರಿಮೋಟ್ ಕಂಟ್ರೋಲ್ ಅನುಭವವನ್ನು ಒದಗಿಸುವಾಗ ಈ ಸುಸ್ಥಿರ ವಿಧಾನವು ಪರಿಸರದ ಮೇಲೆ ಉಂಟಾಗುವ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಮಲ್ಟಿ ವಾಯ್ಸ್ ಅಸಿಸ್ಟೆಂಟ್
ಈ ಟಿವಿ ಅಂತರ್ನಿರ್ಮಿತ ಸೌಲಭ್ಯದಿಂದ ಬಿಕ್ಸ್ ಬಿ ಮತ್ತು ಅಮೆಜಾನ್ ಅಲೆಕ್ಸಾ ಜೊತೆ ಸೂಕ್ತವಾಗಿ ಹೊಂದಿಕೊಳ್ಳು ತ್ತಿದ್ದು, ಮಲ್ಟಿ ವಾಯ್ಸ್ ಅಸಿಸ್ಟೆಂಟ್ ಫೀಚರ್ ಮೂಲಕ ಬಳಕೆದಾರರು ತಮ್ಮ ಟಿವಿ ಮತ್ತು ಇತರ ಸ್ಮಾರ್ಟ್ ಹೋಮ್ ಸಾಧನಗಳನ್ನು ವಾಯ್ಸ್ ಕಮಾಂಡ್ ಅಥವಾ ಆಜ್ಞೆಗಳನ್ನು ಬಳಸಿಕೊಂಡು ಸಲೀಸಾಗಿ ನಿಯಂತ್ರಿಸಬಹುದಾಗಿದೆ. ಇದರಿಂದ ಗ್ರಾಹಕರ ಅನುಕೂಲತೆ ಮತ್ತಷ್ಟು ಹೆಚ್ಚುತ್ತದೆ ಮತ್ತು ಕನೆಕ್ಟೆಡ್-ಹೋಮ್, ಹ್ಯಾಂಡ್ಸ್-ಫ್ರೀ ಅನುಭವ ಒದಗಿಸುತ್ತದೆ.
ಕ್ರಿಸ್ಟಲ್ ಪ್ರೊಸೆಸರ್ 4ಕೆ
ಕ್ರಿಸ್ಟಲ್ ಪ್ರೊಸೆಸರ್ 4ಕೆ ಹೊಂದಿರುವ ಹೊಸ ಟಿವಿ ನಿಖರವಾದ ಬಣ್ಣದ ಸಂಯೋಜನೆ ಮೂಲಕ ಅತ್ಯುತ್ತಮ ಗುಣಮಟ್ಟದ ದೃಶ್ಯಗಳನ್ನು ಒದಗಿಸುತ್ತದೆ. ಈ ಶಕ್ತಿಯುತ ಪ್ರೊಸೆಸರ್ ಬಣ್ಣಗಳ ಪ್ರತಿಯೊಂದು ಛಾಯೆಯನ್ನು ಉದ್ದೇಶಿಸಿದ ರೀತಿಯಲ್ಲಿಯೇ ತೋರಿಸುವಂತೆ ಮಾಡುತ್ತದೆ. ಜೊತೆಗೆ ಎಲ್ಲಾ ಕಂಟೆಂಟ್ ಗಳಿಗೆ ವಾಸ್ತವ ಬದುಕಿನಂತೆ ದೃಶ್ಯ ಕಾಣಿಸುವ 4ಕೆ ರೆಸಲ್ಯೂಶನ್ ನೀಡುತ್ತದೆ.
ಕಾಂಟ್ರಾಸ್ಟ್ ಎನ್ ಹಾನ್ಸರ್
ಕಾಂಟ್ರಾಸ್ಟ್ ಎನ್ಹಾನ್ಸರ್ ಫೀಚರ್ ಸ್ಕ್ರೀನ್ ನ ವಿವಿಧ ಭಾಗಗಳಲ್ಲಿ ಕಾಂಟ್ರಾಸ್ಟ್ ಸೆಟ್ಟಿಂಗ್ಗಳನ್ನು ಅಟೋ ಮ್ಯಾಟಿಕ್ ಆಗಿ ಸರಿಹೊಂದಿಸುತ್ತದೆ ಮತ್ತು ಹೆಚ್ಚು ತೀವ್ರಗತಿಯ ದೃಶ್ಯ ವೈಭವ ಸಾದರ ಪಡಿಸುತ್ತದೆ. ಬಣ್ಣದ ಗಾಢತೆ ಮತ್ತು ಕಾಂಟ್ರಾಸ್ಟ್ ಅನ್ನು ಹೆಚ್ಚಿಸುವ ಮೂಲಕ ಈ ಫೀಚರ್ ಬದುಕಿನಂತೆ ಕಾಣಿಸುವ ಮತ್ತು ಮೂರು ಆಯಾಮದ ವೀಕ್ಷಣಾ ಅನುಭವವನ್ನು ಒದಗಿಸುತ್ತದೆ.
ಹೆಚ್ಡಿಆರ್ (ಹೈ ಡೈನಾಮಿಕ್ ರೇಂಜ್)
ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿ ಹೆಚ್ಡಿಆರ್ ತಂತ್ರಜ್ಞಾನವನ್ನು ಸಹ ಹೊಂದಿದ್ದು, ಅದು ಕಡುಗಪ್ಪು ಮತ್ತು ಬ್ರೈಟ್ ಲೈಟ್ ಬಣ್ಣ ಸಂಯೋಜನೆ ಮೂಲಕ ಆನ್-ಸ್ಕ್ರೀನ್ ದೃಶ್ಯಗಳನ್ನು ಅದ್ಭುತವಾಗಿ ಕಾಣಿಸುತ್ತದೆ. ವೀಕ್ಷಕರಿಗೆ ಕಡಿಮೆ ಮತ್ತು ಹೆಚ್ಚು ಎಕ್ಸ್ ಪೋಷರ್ ಇರುವ ದೃಶ್ಯಗಳಲ್ಲಿಯೂ ಉತ್ತಮ ದೃಶ್ಯ ವಿವರಗಳನ್ನು ನೋಡಲು ಅನುವು ಮಾಡಿಕೊಡುತ್ತದೆ. ಈ ಫೀಚರ್ ನಿಜ-ಜೀವನದ ಬಣ್ಣಗಳು ಮತ್ತು ಟೆಕ್ಷರ್ ಗಳನ್ನು ಕಾಣವಂತೆ ಮಾಡು ತ್ತದೆ. ಪ್ರತಿ ಫ್ರೇಮ್ ಅನ್ನು ಕೂಡ ಹೆಚ್ಚು ಎದ್ದುಕಾಣುವಂತೆ ಮತ್ತು ತೀವ್ರವಾಗಿ ಕಾಣುವಂತೆ ಮಾಡುತ್ತದೆ.
ಕ್ಯೂ-ಸಿಂಫನಿ
ಕ್ಯೂ ಸಿಂಫನಿ ಎಂಬ ಸ್ಮಾರ್ಟ್ ಫೀಚರ್ ಟಿವಿಯ ಅಂತರ್ನಿರ್ಮಿತ ಸ್ಪೀಕರ್ಗಳು ಮತ್ತು ಸಂಪರ್ಕಿತ ಸೌಂಡ್ಬಾರ್ ಅನ್ನು ಏಕಕಾಲದಲ್ಲಿ ಒಟ್ಟಿಗೆ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ, ಆ ಮೂಲಕ ಉತ್ಕೃಷ್ಟವಾದ ಮತ್ತು ಪರಿಪೂರ್ಣವಾದ ಸರೌಂಡ್ ಸೌಂಡ್ ಅನುಭವವನ್ನು ಸೃಷ್ಟಿಸುತ್ತದೆ. ಟಿವಿ ಸ್ಪೀಕರ್ಗಳನ್ನು ಮ್ಯೂಟ್ ಮಾಡದೆಯೇ ಉತ್ತಮ ಗುಣಮಟ್ಟದ ದೃಶ್ಯಗಳಿಗೆ ಪೂರಕವಾಗಿರುವ ಡೈನಾಮಿಕ್ ಆಡಿಯೋ ಲಭ್ಯವಾಗಲಿದ್ದು, ವೀಕ್ಷಕರು ಆನಂದಿಸುವಂತೆ ಮಾಡುತ್ತದೆ.
ಓಟಿಎಸ್ ಲೈಟ್
ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್ ಲೈಟ್ (ಓಟಿಎಸ್ ಲೈಟ್) ತಂತ್ರಜ್ಞಾನವು ಆನ್-ಸ್ಕ್ರೀನ್ ಅಂಶಗಳ ಚಲನೆಯನ್ನು ಟ್ರ್ಯಾಕ್ ಮಾಡುವ ಮೂಲಕ 3ಡಿ ಆಡಿಯೋ ಅನುಭವವನ್ನು ನೀಡುತ್ತದೆ ಮತ್ತು ಮಲ್ಟಿ-ಚಾನೆಲ್ ಸ್ಪೀಕರ್ಗಳನ್ನು ಬಳಸಿಕೊಂಡು ಅವುಗಳಿಗೆ ಅನುಗುಣವಾಗಿ ಅತ್ಯುತ್ತಮ ಆಡಿಯೋ ಒದಗಿಸುತ್ತದೆ. ಈ ಫೀಚರ್ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳ ಆಡಿಯೋ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದೃಶ್ಯಕ್ಕೆ ಪೂರಕವಾಗಿ ಉತ್ತಮ ಆಡಿಯೋ ಒದಗಿಸುತ್ತದೆ.
ಅಡಾಪ್ಟಿವ್ ಸೌಂಡ್
ಅಡಾಪ್ಟಿವ್ ಸೌಂಡ್ ಫೀಚರ್ ಆಯಾ ಕ್ಷಣದ ದೃಶ್ಯ ವಿಶ್ಲೇಷಣೆಯ ಆಧಾರದ ಮೇಲೆ ಆಡಿಯೋ ವ್ಯವಸ್ಥೆಯನ್ನು ಸಿದ್ಧಪಡಿಸುತ್ತದೆ ಮತ್ತು ಪ್ರತಿಯೊಂದು ರೀತಿಯ ದೃಶ್ಯಗಳಿಗೂ ಅದಕ್ಕೆ ತಕ್ಕಂತೆ ಉತ್ತಮ ಆಡಿಯೋ ಅನುಭವವನ್ನು ನೀಡುತ್ತದೆ. ಈ ತಂತ್ರಜ್ಞಾನವು ದೃಶ್ಯಕ್ಕೆ ಹೊಂದಿಕೆಯಾಗುವಂತೆ ಧ್ವನಿ ಸೆಟ್ಟಿಂಗ್ಗಳನ್ನು ಕ್ರಿಯಾಶೀಲವಾಗಿ ಸರಿ ಹೊಂದಿಸುತ್ತದೆ ಮತ್ತು ಆಡಿಯೋದ ಒಟ್ಟಾರೆ ಪರಿಣಾಮವನ್ನು ಹೆಚ್ಚಿಸುತ್ತದೆ.
ಸ್ಯಾಮ್ ಸಂಗ್ ಟಿವಿ ಪ್ಲಸ್
ಸ್ಯಾಮ್ಸಂಗ್ ಟಿವಿ ಪ್ಲಸ್ ಉಚಿತ ಲೈವ್ ಟಿವಿ ಮತ್ತು ಆನ್ ಡಿಮ್ಯಾಂಡ್ ಕಂಟೆಂಟ್ ಅನ್ನು ನೀಡುತ್ತದೆ. ಯಾವುದೇ ಹೆಚ್ಚುವರಿ ಚಂದಾದಾರಿಕೆ ಅಥವಾ ಆಪ್ ಗಳು, ಕೇಬಲ್ಗಳು ಅಥವಾ ಸೆಟ್-ಅಪ್ ಬಾಕ್ಸ್ ಗಳನ್ನು ಸ್ಥಾಪಿಸುವ ತೊಂದರೆಯಿಲ್ಲದೆಯೇ ವ್ಯಾಪಕ ಶ್ರೇಣಿಯ ಮನರಂಜನಾ ಆಯ್ಕೆಗಳನ್ನು ಒದಗಿಸುತ್ತದೆ. ಇದರಲ್ಲಿ 100ಕ್ಕೂ ಹೆಚ್ಚು ಚಾನಲ್ಗಳು ಲಭ್ಯವಿದ್ದು, ಗ್ರಾಹಕರು ಸುದ್ದಿಯಿಂದ ಕ್ರೀಡೆವರೆಗೆ, ಚಲನಚಿತ್ರಗಳಿಂದ ಹೊಸ ವಿಚಾರಗಳವರೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆನಂದಿಸಬಹುದು.
ಬೆಲೆ ಮತ್ತು ಲಭ್ಯತೆ
ಹೊಚ್ಚ ಹೊಸ ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿ 43-ಇಂಚು ಮತ್ತು 55-ಇಂಚಿನ ಸ್ಕ್ರೀನ್ ಗಾತ್ರಗಳಲ್ಲಿ ಲಭ್ಯವಾಗುತ್ತಿದ್ದು, ಈ ಸರಣಿಯ ಆರಂಭಿಕ ಬೆಲೆ ರೂ. 41990.
ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿ ಸ್ಯಾಮ್ಸಂಗ್ನ ಅಧಿಕೃತ ಆನ್ಲೈನ್ ಸ್ಟೋರ್ Samsung.com ನಲ್ಲಿ ಮತ್ತು ವಿಶೇಷವಾಗಿ Amazon.in ನಲ್ಲಿ ಲಭ್ಯವಿದೆ.