Tuesday, 26th November 2024

ಶ್ರೀಗಂಧ ಬೆಳೆಯುವ ರೈತರಿಗೆ ಸರಕಾರ ಹೆಚ್ಚಿನ ಅನುಕೂಲ

ತುಮಕೂರು:ರಾಜ್ಯದಲ್ಲಿ ಶ್ರೀಗಂಧ ಬೆಳೆಯಲು ಇದ್ದ ಅಡ್ಡಿ ಆತಂಕಗಳನ್ನು ನಿವಾರಿಸುವಂತೆ ಶ್ರೀಗಂಧದ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ದಿ ಸಂಶೋಧನಾ ಸಂಘ ಪ್ರಧಾನಿಗಳು, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹಲವಾರು ಮಾರ್ಪಾಡುಗಳನ್ನು ತಂದಿದ್ದು,ಇದರಿ0ದ ಶ್ರೀಗಂಧ ಬೆಳೆಯುವ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಂಘದ ಅಧ್ಯಕ್ಷ ಬಿ.ಆರ್.ರಘುರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2020ರ ಜನವರಿ 02ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರ ಮೂಲಕ ಪ್ರಮುಖವಾಗಿ ಶ್ರೀಗಂಧದ ಬೆಳೆಗೆ ಕಳ್ಳಕಾಕರಿಂದ ರಕ್ಷಣೆ,ಶ್ರೀಗಂಧ ಬೆಳೆಯಲು ಪ್ರೋತ್ಸಾಹ, ಶ್ರೀಗಂಧ ಬೆಳೆಗೆ ವಿಮಾ ಸೌಲಭ್ಯ ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಿ ಒತ್ತಾಯ ಮಾಡುವುದರ ಜೊತೆಗೆ,ಶ್ರೀಗಂಧ ಬೆಳೆಯುವುದರಿಂದ ಆರ್ಥಿಕ ಲಾಭದ ಜೊತೆಗೆ,ನಿರುದ್ಯೋಗ ಸಮಸ್ಯೆ ನಿವಾರಣೆ ಮತ್ತು ಹಲವಾರು ರೋಗ ರಜಿನಗಳಿಗೆ ಪರಿಹಾರ ಒದಗಿಸಬಹುದು ಎಂಬ ಅಂಶವನ್ನು ಸಹ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಲಾಗಿತ್ತು.

ಇದರ ಫಲವಾಗಿ ಸರಕಾರ ಹಲವಾರು ಮಾರ್ಪಾಡುಗಳನ್ನು ಮಾಡಿ ಶ್ರೀಗಂಧ ಬೆಳೆಗಾರರಿಗೆ ಹೆಚ್ಚಿನ ಅನುಕೂಲ ಒದಗಿಸಿದೆ.ಇದಕ್ಕಾಗಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ನುಡಿದರು.

ಶ್ರೀಗಂಧ ಬೆಳೆ ಮತ್ತು ಬೆಳೆಗಾರರನ್ನು ಕಳ್ಳಕಾಕರ ಭಯದಿಂದ ರಕ್ಷಿಸಲು ವಿಮೆಯ ಸೌಲಭ್ಯ ಒದಗಿಸಿದೆ. ಅಲ್ಲದೆ, ಇದುವರೆಗೂ ಅರಣ್ಯ ಇಲಾಖೆಯ ಅಧೀನದಲ್ಲಿದ್ದ ಶ್ರೀಗಂಧವನ್ನು ತೋಟಗಾರಿಕೆ ಬೆಳೆಗಳ ಸಾಲಿಗೆ ಸೇರಿಸಿದೆ.ಜೊತೆಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಸಹ ಕಲ್ಪಿಸಲು ಮುಂದಾಗಿದೆ.

ಇದರಿ0ದ ಇಂದು ಒಂದು ಕೆ.ಜಿ.ಶ್ರೀಗಂಧದ ತುಂಡಿಗೆ ಇರುವ 5-8 ಸಾವಿರ ರೂ ಬೆಳೆ 15 ಸಾವಿರ ತಲುಪಲಿದೆ. ತೋಟಗಾರಿಕಾ ಬೆಳೆಯಾಗುವುದರಿಂದ ಇದನ್ನು ಬೆಳೆದ ರೈತರು ಇದರ ಮಾಲೀಕರಾಗಿ, ಹೆಚ್ಚಿನ ಲಾಭ ಪಡೆಯಲಿದ್ದಾರೆ. ಹಾಗಾಗಿ ಈ ಕುರಿತು ರೈತರಿಗೆ ಅರಿವು ಮೂಡಿಸುವ ಕೆಲಸವನ್ನು ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ದಿ ಸಂಶೋಧನಾ ಸಂಘ ಮಾಡಲು ಮುಂದಾಗಿದೆ.ಅಲ್ಲದೆ ಈ ಬಾರಿ ಆಸಕ್ತಿ ಉಳ್ಳ ರೈತರಿಗೆ ಶಿವಮೊಗ್ಗದಿಂದ ತರಿಸಿ 10 ಸಾವಿರ ಶ್ರೀಗಂಧದ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಮುಂದಾಗಿ ರುವುದಾಗಿ ಎಂದು ರಘುರಾವ್ ತಿಳಿಸಿದರು.

ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ರೈತರು ಶ್ರೀಗಂಧದ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.ಆದರೆ ರೈತರು ಇದರ ಬಗ್ಗೆ ಸರಿಯಾದ ಅರಿವಿಲ್ಲದೆ,ಶ್ರೀಗಂಧದ ಗಿಡದ ರಂಬೆಗಳನ್ನು ಕತ್ತರಿಸು ತ್ತಿದ್ದಾರೆ.ಇದು ತಪ್ಪು,ಶ್ರೀಗಂಧ ಕಾಡು ಗಿಡವಾದ ಕಾರಣ.ತೇಗ ಇನ್ನಿತರ ಮರಗಳಂತೆ ಶ್ರೀಗಂಧದ ಗಿಡದ ರಂಬೆ, ಕೊಂಬೆಗಳನ್ನು ಕತ್ತರಿಸುವುದರಿಂದ ಗಿಡ ಸತ್ತು ಹೋಗುತ್ತದೆ.ಈ ಬಗ್ಗೆ ಪ್ರತಿಯೊಬ್ಬರ ರೈತರು ಅಗತ್ಯ ಮಾಹಿತಿಯನ್ನು ಪಡೆದು ಟ್ರಿಮ್ಮಿಂಗ್ ಮಾಡಬೇಕೆಂಬುದು ನಮ್ಮ ಸಲಹೆಯಾಗಿದೆ.ಅಲ್ಲದೆ ಸಂಘದವತಿಯಿ0ದ ಮುಂದಿನ ದಿನಗಳಲ್ಲಿ ಒಂದು ಬೃಹತ್ ಶ್ರೀಗಂಧದ ಬೆಳೆಗಾರರ ಸಮಾವೇಶ ನಡೆಸಲು ಉದ್ದೇಶಿಸಿದ್ದು,ಇದಕ್ಕೆ ಪ್ರಧಾನಿ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಭಾಗವಹಿಸುವಂತೆ ಕೋರಲಾಗುವುದು ಎಂದರು.

ನೈಸರ್ಗಿಕ ಬೇಸಾಯಗಾರ ಹಾಗು ನಿವೃತ್ತ ಪ್ರಾಧ್ಯಾಪಕ ಡಾ.ಸಿದ್ದಗಂಗಯ್ಯ ಹೊಲತಾಳ್ ಮಾತನಾಡಿ,ದೇಶದ ಒಟ್ಟು ಶ್ರೀಗಂಧದ ಬೇಡಿಕೆ ಪ್ರಮಾಣದ ಶೇ5ರಷ್ಟನ್ನು ಸಹ ಭಾರತದಲ್ಲಿ ಉತ್ಪಾಧಿಸುತ್ತಿಲ್ಲ.ಇದಕ್ಕೆ ಕಾರಣ ಕಳ್ಳಕಾಕರ ಭಯ ಮತ್ತು ಬೆಳೆಯಲು ಮತ್ತು ಕಟಾವು ಮಾಡಲು ಇರುವ ಕಟ್ಟುನಿಟ್ಟಿನ ನೀತಿ, ನಿಯಮಗಳು. ಪ್ರಸ್ತುತ ಕೇಂದ್ರ ಸರಕಾರ ಸರಳೀಕರಣ ಗೊಳಿಸಿರುವ ಹಿನ್ನೆಲೆಯಲ್ಲಿ ಶ್ರೀಗಂಧದ ಬೆಳೆ ವಿಸ್ತರಣೆಯ ಉದ್ದೇಶದಿಂದ ಈಗಾಗಲೇ ಶಿರಾ,ಶಿವಗಂಗೆ ಹಾಗೂ ತುಮಕೂರು ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಶ್ರೀಗಂಧದ ಬೆಳೆ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಾ ಗುತ್ತಿದೆ. ಭವಿಷ್ಯದಲ್ಲಿ ಅವರು ಶ್ರೀಗಂಧದ ಬೆಳೆ ಬೆಳೆಯಲು ಪ್ರೇರೇಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಇಂಜಿನಿರ‍್ಸ್ ಅಸೋಸಿಯೇಷನ್ ಅಧ್ಯಕ್ಷ ರಾಮಮೂರ್ತಿ ಮಾತನಾಡಿ,ಶ್ರೀಗಂಧ ಒಂದು ಪರಾವಲಂಬಿ ಜೀವಿಯಾಗಿದ್ದು, ಅದರ ಪಕ್ಕದಲ್ಲಿ ಒಂದು ಸಸ್ಯವಿದ್ದರೆ ಮಾತ್ರ ಅದು ಚಿಗುರಬಲ್ಲದು,ಹುಲುಸಾಗಿ ಬೆಳೆಯಬಲ್ಲದು. ಹಾಗಾಗಿ ರೈತರು ಶ್ರೀಗಂಧದ ಬೆಳೆಯ ಜೊತೆಗೆ ತೊಗರಿ,ನುಗ್ಗೆ,ಲಕ್ಷö್ಮಣಫಲ,ಬೇವು,ತೇಗ,ಹೊಂಗೆ ಸಸಿಗಳ ಮಿಶ್ರ ಬೇಸಾಯ ಆರಂಭಿಸಿ, ನಿರಂತರ ಅದಾಯ ಪಡೆಯಬಹುದು.ಅಲ್ಲದೆ,ಶ್ರೀಗಂಧದ ಬೀಜಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ.ಶ್ರೀಗಂಧದ ಸೊಪ್ಪನ್ನು ಕುರಿ,ಮೇಕೆಗಳಿಗೆ ಮೇವಾಗಿಯೂ ಬಳಕೆ ಮಾಡಬಹುದು.ಇದನ್ನು ನಾನು ನನ್ನ ಜಮೀನಿನಲ್ಲಿ ಬೆಳೆದು ಕಂಡುಕೊAಡ ಸತ್ಯವೆಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀಗಂಧ ಬೆಳೆಗಾರರಾದ ಶಂಕರಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.