ಗುಬ್ಬಿ : ತಾಲೂಕ್ ಆಡಳಿತದ ವಿರುದ್ಧ ಸವಿತಾ ಸಮಾಜ ಮುಖಂಡರ ಆಕ್ರೋಶ ಸರ್ಕಾರದ ಆದೇಶವಿದ್ದರೂ ತಾಲೂಕ್ ಆಡಳಿತ ಸಮಾಜದ ಮುಖಂಡರಿಗೆ ಪೂರ್ವಭಾವಿಯಾಗಿ ತಿಳಿಸದೆ ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡಿ ಸಮುದಾಯವನ್ನು ಕಡೆಗಣಿಸಿದ್ದು ಮಂಗಳವಾರ ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಜಿ ಆರ್ ಪ್ರಕಾಶ್ ತಿಳಿಸಿದರು.
ಗೌರವಾಧ್ಯಕ್ಷ ಎಂ ಡಿ ಲಕ್ಷೀನಾರಾಯಣ್ ಮಾತನಾಡಿ ಪ್ರತಿ ವರ್ಷವೂ ಸಹ ತಾಲೋಕ್ ಕಚೇರಿಯಿಂದ ಸಮಾಜದ ಮುಖಂಡರ ಗಮನಕ್ಕೆ ತಂದು ಆಚರಿಸಲು ಕ್ರಮ ವಹಿಸುತ್ತಿದ್ದರು ಈ ಬಾರಿ ನಿರ್ಲಕ್ಷ ಮಾಡಿರುವುದು ಸಮುದಾಯಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸವಿತಾ ಸಮಾಜ ಯುವ ಪಡೆಯ ಅಧ್ಯಕ್ಷ ಎನ್ ರಮೇಶ್ ಮಾತನಾಡಿ ಸವಿತಾ ಮಹರ್ಷಿಗಳು ಸಮಾಜದ ಮೂಲಪುರುಷರಾಗಿದ್ದು ಮಹನೀಯರ ಆಚರಣೆಯಲ್ಲಿ ತಾಲೂಕ್ ಆಡಳಿತ ನಿರ್ಲಕ್ಷ ವಹಿಸಿರುವುದು ವಿಪರ್ಯಾಸವೆಂದು ಅಸಮಾಧಾನ ವ್ಯಕ್ತಪಡಿಸಿ ಸವಿತಾ ಸಮುದಾಯವನ್ನು ನಿರ್ಲಕ್ಷಿ ಸಿದ ತಾಲೂಕ್ ಆಡಳಿತದ ವಿರುದ್ಧ ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ತಾಲೂಕಿನ ಎಲ್ಲಾ ಸವಿತಾ ಬಂಧುಗಳು ಮಂಗಳ ವಾರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸವಿತಾ ಸಮಾಜ ಯುವ ಪಡೆಯ ಅಧ್ಯಕ್ಷ ಎನ್ ರಮೇಶ್, ಪ್ರತಿನಿಧಿ ನಟರಾಜ್ ನರಸಿಂಹಮೂರ್ತಿ, ಅನಿಲ್, ಸುನಿಲ್, ಕಾರ್ತಿಕ್, ರಾಕೇಶ್, ಅಖಿಲೇಶ್, ಶ್ರೀನಿವಾಸ್, ಕುಮಾರ್, ರಮೇಶ್, ಇದ್ದರು.