Thursday, 28th November 2024

ಸ್ಕೋಡಾದಿಂದ ವಿಶೇಷ ಸ್ಪೋರ್ಟ್ ಲೈನ್ ಬಿಡುಗಡೆ, ಏನೆಲ್ಲ ವಿಶೇಷತೆಗಳಿವೆ?

scoda

ಸ್ಕೋಡಾ ಆಟೋ ಇಂಡಿಯಾದಿಂಧ ಹೊಸ ಸ್ಲಾವಿಯಾ ಮಾಂಟೆ ಕಾರ್ಲೊ
ಮೊದಲ 5,000 ಬುಕಿಂಗ್‌ಗಳಿಗೆ 30,000 ರೂ. ವಿಶೇಷ ಕೊಡುಗೆ

ಹುಬ್ಬಳ್ಳಿ: ಸ್ಕೋಡಾ ಆಟೋ ಇಂಡಿಯಾ ಭಾರತದಲ್ಲಿ ತನ್ನ ಹೊಸ ಸ್ಲಾವಿಯಾ ಮಾಂಟೆ ಕಾರ್ಲೋ ಎಡಿಶನ್ ಬಿಡುಗಡೆ ಮಾಡಿದೆ. ಸ್ಪೋರ್ಟ್ ಥೀಮ್ ಆದ್ಯತೆಯಾಗಿಟ್ಟುಕೊಂಡ ಕಂಪನಿ ಕುಶಾಕ್ ಮತ್ತು ಸ್ಲಾವಿಯಾ ಲೈನ್‌ಅಪ್‌ನಲ್ಲಿ ಭಾರತೀಯ ಗ್ರಾಹಕರಿಗಾಗಿ ವಿಶೇಷ ಸ್ಪೋರ್ಟ್ ಲೈನ್ ಬಿಡುಗಡೆ ಮಾಡಿದೆ.

ಈ ಹೊಸ ಕೊಡುಗೆಳ ಬಗ್ಗೆ ಮಾತನಾಡಿದ, ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಪೆಟ್ರ್ ಜನೆಬಾ, “ ಸ್ಪೋರ್ಟ್ ಮಾದರಿಯಲ್ಲಿ ಈಗಾಗಲೇ ಜನಮೆಚ್ಚುಗೆ ಪಡೆದುಕೊಂಡಿರುವ ಮಾಂಟೆ ಕಾರ್ಲೋ ಗ್ರಾಹಕರೊಂದಿಗೆ ಬೆಸೆದುಕೊಂಡಿದೆ. ಈ ಹೊಸ ಆರಂಭ ಹಂಚಿಕೊಳ್ಳಲು ನಮಗೆ ತುಂಬಾ ಸಂತಸವಾಗುತ್ತಿದೆ.. ಇದು ಭಾರತದಲ್ಲಿ ಸ್ಕೋಡಾ ಬ್ರ್ಯಾಂಡ್ ಅನ್ನು ಬೆಳೆಸುವ ನಮ್ಮ ಕಾರ್ಯತಂತ್ರಕ್ಕೆ ವಿಶೇಷ ಕೊಡುಗೆ ನೀಡಲಿದೆ. ಯುರೋಪಿನ ಹೊರಗಿನ ಅತಿದೊಡ್ಡ ಮಾರ್ಕೆಟ್ನಲ್ಲಿ ಭಾರತವೂ ನಮಗೆ ಪ್ರಮುಖವಾಗಿದೆ ಎಂದು ತಿಳಿಸಿದರು.

ಸ್ಪೋರ್ಟಿ ಮತ್ತು ಆಕರ್ಷಕ ಕಾರು ಹುಡುಕುತ್ತಿರುವ ಗ್ರಾಹಕರಿಗೆ ಇದೊಂದು ಅದ್ಭುತ ಆಯ್ಕೆಯಾಗಿದೆ. ವಿಭಿನ್ನ ಶೈಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಇದು ನಮ್ಮ 112 ವರ್ಷಗಳ ರ್ಯಾಲಿ ಮಾಂಟೆ ಕಾರ್ಲೋ, 129 ವರ್ಷಗಳ ಪರಂಪರೆ ಮತ್ತು ಭಾರತದಲ್ಲಿ 24 ವರ್ಷಗಳ ಸೇವೆ ನೀಡುತ್ತಿರುವ ಪ್ರತೀಕವಾಗಿದೆ.

ನಾವು ಎರಡು ಹೊಸ ಟ್ರಿಮ್‌ಗಳನ್ನು ಪರಿಚಯಿಸಿದ್ದೇವೆ – ಸ್ಲಾವಿಯಾ ಸ್ಪೋರ್ಟ್‌ಲೈನ್ ಮತ್ತು ಕುಶಾಕ್ ಸ್ಪೋರ್ಟ್‌ಲೈನ್ ಎನ್ನುವ ಶ್ರೇಣಿ ಪರಿಚಯಿಸಿದ್ದೇವೆ. ಗ್ರಾಹಕರಿಗೆ ಅದ್ಭುತ ಆಯ್ಕೆ ಮತ್ತು ವಿಶಿಷ್ಟ ಅನುಭೂತಿ ನೀಡುವುದು ನಮ್ಮ ಗುರಿ. ಕೈಗೆಟಕುವ ದರದಲ್ಲಿ ಸ್ಪೋರ್ಟ್ ಕಾರಿನ ಅನುಭವ ನೀಡುತ್ತದೆ ಎನ್ನುವುದು ನಮ್ಮ ಭರವಸೆಯಾಗಿದೆ. ಇದರೊಂದಿಗೆ ಭಾರತದಲ್ಲಿ ಸ್ಕೋಡಾ ಗ್ರಾಹಕರ ಕುಟುಂಬ ಬೆಳೆಸಲು ಕಾರಣವಾಗುತ್ತದೆ ಎಂದು ತಿಳಿಸಿದರು.

ವಾರ್ಷಿಕೋತ್ಸವದ ಕೊಡುಗೆ: ಕಂಪನಿ Rallye Monte Carlo ಜಗತ್ತಿಗೆ ಕಾಲಿಟ್ಟು 112 ವರ್ಷಗಳ ವಾರ್ಷಿಕೋತ್ಸವದ ಸಂದರ್ಭ ಈ ವಿಶೇಷ ಕೊಡುಗೆ ನೀಡಲಾಗಿದೆ. ಸ್ಕೋಡಾ ಆಟೋ ಇಂಡಿಯಾವು ಕುಶಾಕ್ ಮತ್ತು ಸ್ಲಾವಿಯಾದ ಸ್ಪೋರ್ಟ್ ಮಾಂಟೆ ಕಾರ್ಲೋ ಮತ್ತು ಸ್ಪೋರ್ಟ್‌ಲೈನ್ ಶ್ರೇಣಿಯನ್ನು ಖರೀದಿಸುವ ಗ್ರಾಹಕರಿಗೆ ಪ್ರಯೋಜನಗಳನ್ನು ಒದಗಿಸಲಿದೆ. ಮೊದಲು ಬುಕ್ ಮಾಡುವ 5,000 ಗ್ರಾಹಕರಿಗೆ 30,000 ರೂ. ಲಾಭ ಗಳನ್ನು ಪಡೆದುಕೊಳ್ಳಲಿದ್ದಾರೆ. ಈ ಆಫರ್ ತಕ್ಷಣವೇ ದೊರೆಯುತ್ತಿದ್ದು ಸೆಪ್ಟೆಂಬರ್ 6, 2024 ರವರೆಗೆ ಗ್ರಾಹಕರಿಗೆ ದೊರೆಯುತ್ತದೆ.

ಮೆಟಲ್ ನಲ್ಲಿ ಮಾಂಟೆ ಕಾರ್ಲೊ
1.0 ಮತ್ತು 1.5 TSI ಎಂಜಿನ್ ಗಳನ್ನು ಮೀರಿ ಈ ಕಾರು ಕೆಲಸ ಮಾಡಲಿದೆ ಎನ್ನುವುದು ಸಾಬೀತಾಗಿದೆ. ಸಿಕ್ಸ್ ಸ್ಪೀಡ್ ಮ್ಯಾನುವಲ್ ಮತ್ತು ಅಟೋಮ್ಯಾಟಿಕ್ ಮಾದರಿಯಲ್ಲಿ 1.0 TSI ಲಭ್ಯವಿದೆ. 1.5 TSI ಸೆವೆನ್ ಸ್ಪೀಡ್ ನಲ್ಲಿ ಮುಂದಿನ ಚಕ್ರಗಳಿಗೆ ಸ್ಪೀಡ್ ಒದಗಿಸಲಿದೆ. ಈ ಕಾರುಗಳು ಟೊರ್ನಾಡೊ ರೆಡ್ ಮತ್ತು ಕ್ಯಾಂಡಿ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಈ ಎರಡೂ ಆಯ್ಕೆಗಳಲ್ಲಿ ತಿರಿಕ್ತ ಡೀಪ್ ಬ್ಲ್ಯಾಕ್ ರೂಫ್ ಇರಲಿದೆ. ORVM ಗಳಂತೆ ವಿಂಡೋ ಗಾರ್ನಿಶ್ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿದೆ. ಬ್ಲಾಕ್ ಆಕರ್ಷಣೆಯು ರೇಡಿಯೇಟರ್ ಗ್ರಿಲ್ ಸರೌಂಡ್, ಫಾಗ್ ಲ್ಯಾಂಪ್ , ಬ್ಲಾಕ್ R16 ಅಲಾಯ್ ಚಕ್ರಗಳಿಗೆ ಲಭ್ಯವಿದೆ.

ಮುಂಭಾಗದ ಫೆಂಡರ್‌ಗಳಲ್ಲಿ ಮಾಂಟೆ ಕಾರ್ಲೊ ಬ್ಯಾಡ್ಜಿಂಗ್ ಮತ್ತು ಡಾರ್ಕನ್ಡ್ ಟೈಲ್‌ಲೈಟ್‌ಗಳು. ಸ್ಪೋರ್ಟಿ, ಕಪ್ಪು ಸ್ಪಾಯ್ಲರ್‌ಗಳು ಕಾರಿನ ಮುಂಭಾಗ ಮತ್ತು ಸೈಡ್ ಸ್ಕರ್ಟ್‌ಗಳನ್ನು ಇವು ಅಲಂಕರಿಸುತ್ತವೆ ಮತ್ತು ಹಿಂಭಾಗದಲ್ಲಿ ಬೂಟ್‌ನ ಮೇಲೆ ಕಪ್ಪು ಕಲರ್ ಇದೆ. ಹಿಂಭಾಗವು ಬ್ಲ್ಯಾಕ್ ಸ್ಪೋರ್ಟಿ ರಿಯರ್ ಡಿಫ್ಯೂಸರ್ ಮತ್ತು ಬ್ಲ್ಯಾಕ್ ಬಂಪರ್ ಗಾರ್ನಿಶ್ ನಿಂದ ಸುಂದರವಾಗಿದೆ. ಅತ್ಯಾಕರ್ಷಕ ಮತ್ತು ಕ್ಲಾಸಿ ಡೋರ್ ಹ್ಯಾಂಡಲ್‌ಗಳು ಮತ್ತು ಸ್ಲಾವಿಯಾ ಮಾಂಟೆ ಕಾರ್ಲೋದ ವಿಶೇಷ ಕಪ್ಪು ಬಣ್ಣ ಇನ್ನೊಂದು ಆಕರ್ಷಣೆ.

ಮಾಂಟೆ ಕಾರ್ಲೊ ಒಳಗೇನಿದೆ?
ಕಾರು ಸಂಪೂರ್ಣ ಬ್ಲಾಕ್ ಸ್ಪೋರ್ಟಿ ಕ್ಯಾಬಿನ್‌ ಹೊಂದಿದ್ದು ಮಾಂಟೆ ಕಾರ್ಲೊ ರೆಡ್ ಥೀಮ್ ಹೊಂದಿದೆ. ಡೆಕೋರ್ ಫ್ರೇಮ್, ಏರ್ ವೆಂಟ್ಸ್ ಎಲ್ಲವೂ ಬ್ಲಾಕ್ ಬಣ್ಣದಿಂದ ಕಂಗೊಳಿಸುತ್ತದೆ. ಕೆಳಗಿನ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೋಲ್ ಡೆಕೋರ್ ಮತ್ತು ಹ್ಯಾಂಡ್‌ಬ್ರೇಕ್ ಪುಶ್ ಬಟನ್ ಇದರ ವಿಶೇಷ. ಸ್ಟೀರಿಂಗ್ ವೀಲ್ ಮತ್ತು ಗೇರ್ ನಾಬ್ ಸಹ ಕಪ್ಪು ಬಣ್ಣದಲ್ಲಿ ಕಂಗೊಳಿಸುತ್ತದೆ. ಡಾರ್ಕ್, ಸ್ಪೋರ್ಟಿ ಥೀಮ್ ಸ್ಕೋಡಾ ಆಟೋದ ವಿಶೇಷತೆಗಳು ಸುಂದರವಾದ ಒಳಾಂಗಣ ಲೋಕವನ್ನೇ ನಿರ್ಮಾಣ ಮಾಡುತ್ತವೆ.

ಕಪ್ಪು ಮತ್ತು ಕೆಂಪು ಮಾಂಟೆ ಕಾರ್ಲೋ ಥೀಮ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡ್ರೈವರ್‌ನ ವರ್ಚುವಲ್ ಕಾಕ್‌ಪಿಟ್‌ಗೆ ವಿಸ್ತರಿಸುತ್ತದೆ. ಆದಾಗ್ಯೂ, ಈ ಸ್ಪೋರ್ಟಿ ಕ್ಯಾಬಿನ್‌ ನ ಮತ್ತೊಂದು ಆಕರ್ಷಣೆ ಎಂದರೆ ಮುಂಭಾಗದ ಬಾಗಿಲುಗಳ ಬಳಿ ಮಾಂಟೆ ಕಾರ್ಲೋ ಸ್ಕಫ್ ಪ್ಲೇಟ್‌ಗಳು. ಮತ್ತು ಈ ಕೆಂಪು ಮತ್ತು ಕಪ್ಪು ಮಾಂಟೆ ಕಾರ್ಲೊ ಥೀಮ್ ಗಳು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಸ್ಪೋರ್ಟ್‌ಲೈನ್
ಸ್ಕೋಡಾ ಆಟೋ ಇಂಡಿಯಾವು ಕುಶಾಕ್ ಮತ್ತು ಸ್ಲಾವಿಯಾಯದ ಸ್ಪೋರ್ಟ್‌ಲೈನ್ ಬಿಡಗುಡೆ ಮಾಡಲಾಗಿದೆ. ಗ್ರಾಹಕರ ಪ್ರತಿಕ್ರಿಯೆ ಆಧರಿಸಿ ಸ್ಕೋಡಾ ಆಟೋ ಇಂಡಿಯಾ ಇದೀಗ ಸ್ಪೋರ್ಟ್‌ಲೈನ್ ಅನ್ನು ಪರಿಚ ಯಿಸಲಾಗಿದೆ. ಇದು ಅಸ್ತಿತ್ವದಲ್ಲಿರುವ ಕ್ಲಾಸಿಕ್, ಸಿಗ್ನೇಚರ್, ಮಾಂಟೆ ಕಾರ್ಲೊ ಮತ್ತು ಪ್ರೆಸ್ಟೀಜ್ ಗಳನ್ನು ಮೀರಿದ ಕೊಡುಗೆಯಾಗಿದೆ. ಕುಶಾಕ್ ಮತ್ತು ಸ್ಲಾವಿಯಾ ಕಸ್ಟಮರ್ ಗೆ ವಿಶೇಷ ಅನುಭೂತಿ ಒದಗಿಸಲಿಉದೆ.

ಇನ್ನಷ್ಟು ಕೊಡುಗೆ
ಕುಶಾಕ್ ಮತ್ತು ಸ್ಲಾವಿಯಾ ಎರಡರ ಸ್ಪೋರ್ಟ್‌ಲೈನ್ ಟ್ರಿಮ್‌ಗಳು ಮಾಂಟೆ ಕಾರ್ಲೊದಿಂದ ಕಪ್ಪು-ಹೊರಗಿನ ವಿನ್ಯಾಸ ಅಂಶಗಳನ್ನು ಟೈಲ್‌ಲೈಟ್‌ಗಳು, ಏರೋ ಕಿಟ್ ನೀಡುತ್ತವೆ. ಸ್ಲಾವಿಯಾ ಸ್ಪೋರ್ಟ್‌ಲೈನ್ R16 ಬ್ಲ್ಯಾಕ್ ವೀಲ್ ನೀಡಿದರೆ ಮತ್ತು ಕುಶಾಕ್ R17 ಬ್ಲಾಕ್ ವೀಲ್ ಹೊಂದಿದೆ. ಸ್ಪೋರ್ಟ್‌ಲೈನ್ ಕುಶಾಕ್ ಮತ್ತು ಸ್ಲಾವಿಯಾ ಎರಡರಲ್ಲೂ LED ಹೆಡ್‌ಲ್ಯಾಂಪ್‌ಗಳು ಮತ್ತು DRLಗಳಿವೆ.

ಒಳಗೆ ವೈಶಿಷ್ಟ್ಯಗಳು
ಸ್ಪೋರ್ಟ್‌ಲೈನ್, ಉಳಿದ ಕುಶಾಕ್ ಮತ್ತು ಸ್ಲಾವಿಯಾ ಲೈನ್-ಅಪ್‌ನಂತೆ ಆರು ಏರ್‌ಬ್ಯಾಗ್‌ಗಳೊಂದಿಗೆ ಪ್ರಮಾಣಿತವಾಗಿದೆ. ಇದರ ಜೊತೆಗೆ, ಈ ಸ್ಪೋರ್ಟಿ ಟ್ರಿಮ್ ಎಲೆಕ್ಟ್ರಿಕ್ ಸನ್‌ರೂಫ್, ಅಲಾಯ್ ಫೂಟ್ ಪೆಡಲ್‌ಗಳು, ಕನೆಕ್ಟಿವಿಟಿ ಡಾಂಗಲ್, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಆಟೋ-ಡಿಮ್ಮಿಂಗ್ ಇಂಟರ್ನಲ್ ರಿಯರ್ ವ್ಯೂ ಮಿರರ್ ಅನ್ನು ಹಲವಾರು ಇತರ ವೈಶಿಷ್ಟ್ಯ ಹೊಂದಿದೆ.

ಇದಲ್ಲದೆ, ಕುಶಾಕ್ ಮತ್ತು ಸ್ಲಾವಿಯಾ ಗ್ಲೋಬಲ್ NCAP ಅಡಿಯಲ್ಲಿ ವಯಸ್ಕ ಮತ್ತು ಮಕ್ಕಳ ಸುರಕ್ಷತೆಗಾಗಿ ಪೂರ್ಣ 5-ಸ್ಟಾರ್ ರೇಟಿಂಗ್ ಅನ್ನು ಹೊಂದಿವೆ. ಯುರೋ NCAP ಅಡಿಯಲ್ಲಿ ಸೂಪರ್ಬ್ ಮತ್ತು ಕೊಡಿಯಾಕ್ ಅನ್ನು ಒಂದೇ ರೇಟ್ ಮಾಡಲಾಗಿದೆ. ಸ್ಲಾವಿಯಾ ಮಾಂಟೆ ಕಾರ್ಲೊ ಮತ್ತು ಸ್ಪೋರ್ಟ್‌ಲೈನ್ ಟ್ರಿಮ್ ಅನ್ನು ಕುಶಾಕ್ ಮತ್ತು ಸ್ಲಾವಿಯಾದಲ್ಲಿ ಸೇರಿಸುವುದರೊಂದಿಗೆ, ಸ್ಕೋಡಾ ಆಟೋ ಇಂಡಿಯಾ ತನ್ನ 5-ಸ್ಟಾರ್ ಸುರಕ್ಷಿತ ಕಾರುಗಳ ದರ್ಜೆಯಲ್ಲಿ ಅಗ್ರಸ್ಥಾನಿಯಾಗಿದೆ.