ತುಮಕೂರು: ಸ್ಕೌಟ್ ಮತ್ತು ಗೈಡ್ಸ್ ಕರ‍್ಯಕ್ರಮಗಳನ್ನು ಶಾಲಾ ಮಟ್ಟಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಬಿರ‍್ಪಿ ಮತ್ತು ಸಿರ‍್ಪಿಗಳು ಹೆಚ್ಚಿನ ಮುತುವರ್ಜಿ ವಹಿಸುವಂತೆ ಡಿಡಿಪಿಐ ಸಿ.ನಂಜಯ್ಯ ತಿಳಿಸಿದ್ದಾರೆ.
ನಗರದ ಏಂಪ್ರೆಸ್ ಪದವಿಪೂರ್ವ ಕಾಲೇಜಿನಲ್ಲಿ ಸರ‍್ವಜನಿಕ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರ‍್ನಾಟಕ, ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಕೌಟ್ಸ್, ಗೈಡ್ಸ್ ಸಾಮಾನ್ಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತ ನಾಡುತಿದ್ದ ಅವರು, ತರಬೇತಿಯಲ್ಲಿ ಬಿರ‍್ಪಿ ಮತ್ತು ಸಿರ‍್ಪಿಗಳು ಕಲಿಯುವ ಕೌಶಲ್ಯಗಳನ್ನು ತಮ್ಮ ವ್ಯಾಪ್ತಿಯ ಶಾಲೆಗಳ ಶಿಕ್ಷಕರಿಗೆ ಕಲಿಸುವ ಮೂಲಕ ಮಕ್ಕಳಿಗೆ ಹೆಚ್ಚಿನ ಕೌಶಲ್ಯ ಕಲಿಯ ಲು ಅವಕಾಶ ಕಲ್ಪಿಸಬೇಕೆಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ರಾಜ್ಯ ಆಯುಕ್ತರಾದ ಚಿನ್ನಸ್ವಾಮಿ ರೆಡ್ಡಿ,ರಾಜ್ಯದಲ್ಲಿ ಇಂದು ಸುಮಾರು ೬.೫೦ ಲಕ್ಷ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯರ‍್ಥಿಗಳಿದ್ದು, ಇದನ್ನು೧೦ ಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ಭಾರತ್ ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಹಾಕಿಕೊಂಡಿದೆ.ರಾಜ್ಯದ ಪ್ರತಿ ಶಾಲೆಯಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ತೆರೆದು,ಮಕ್ಕಳಿಗೆ ನೈತಿಕ ಶಿಕ್ಷಣದ ಜೊತೆಗೆ, ರಾಷ್ಟç ಪ್ರೇಮ ಕಲಿಸುವ ನಿಟ್ಟಿನಲ್ಲಿ ನಿರತವಾಗಿದೆ.ಪ್ರತಿ ಶಾಲೆಯಲ್ಲಿಯೂ ೧೫ ದಿನಗಳಿಗೊಮ್ಮೆ ಶಿಬಿರಗಳನ್ನು ನಡೆಸುವ ಮೂಲಕ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಮುಖ್ಯ ಆಯುಕ್ತರಾದ ಆಶಾ ಪ್ರಸನ್ನಕುಮಾರ್ ಮಾತನಾಡಿ,ಇಂದು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ತಾಲೂಕಿನ ಬಿ.ಆರ್.ಪಿ ಸಿ.ಆರ್.ಪಿ ಗಳಿಗೆ ತರಬೇತಿ ನೀಡಲಾಗುತ್ತಿದೆ. ಅದೇ ರೀತಿ ಜಿಲ್ಲೆಯ ಎಲ್ಲಾ ತಾಲೂಕುಗಳ ಪ್ರತಿ ಶಾಲೆಯಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ತೆರೆದು ಅಲ್ಲಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಿಗೆ ಮೂಲತರಬೇತಿ ನೀಡಲಾಗುವುದು. ಇದಕ್ಕೆ ಶಿಕ್ಷಣ ಇಲಾಖೆಯ ಸಹಕಾರ ಅಗತ್ಯವಿದ್ದು, ಇಲಾಖೆ ತನ್ನ ವ್ಯಾಪ್ತಿಯ ಬಿ.ಆರ್.ಪಿ,ಸಿ.ಆರ್.ಪಿಗಳ ಪಟ್ಟಿ ನೀಡಿ,ಸ್ಕೌಟ್ಸ್,ಗೈಡ್ಸ್ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.
ಇದೇ ವೇಳೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ೨೦ ಮಕ್ಕಳಿಗೆ ಸ್ಕೌಟ್ಸ್,ಗೈಡ್ಸ್,ಕಬ್ಸ್,ಬುಲ್ ಬುಲ್ ಉಚಿತ ಸಮವಸ್ತç ವಿತರಿಸಲಾಯಿತು.ಸ್ಕೌಟ್ಸ್ ವಿದ್ಯರ‍್ಥಿನಿಯಾಗಿ ಕಳೆದ ಎಸ.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇ೧೦೦ ರ ಅಂಕ ಪಡೆದ ಭೂಮಿಕ ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಗೈಡ್ಸ್ನ ಜಿಲ್ಲಾ ಆಯುಕ್ತೆ ಸುಭಾಷಿಣಿ ಅರ್.ಕುಮಾರ್,ಜಿಲ್ಲಾ ಕರ‍್ಯರ‍್ಶಿ ಸುರೇಂದ್ರ ಷಾ,ಜಿ.ಪಂ. ಮುಖ್ಯ ಯೋಜನಾಧಿಕಾರಿ ಸಣ್ಣ ಮುಸಿಯಪ್ಪ, ಈಶ್ವರಯ್ಯ, ಅಂಜನಪ್ಪ, ಕೆಂಪರ0ಗಯ್ಯ, ಹುಚ್ಚಯ್ಯ,ನವೀನ್ ಕುಮಾರ್,ಜಿಲಾ ಮತ್ತುಸ್ತಳಿಯ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.