Sunday, 5th January 2025

Selection: ಗ್ರಾ.ಪಂ. ಅಧ್ಯಕ್ಷೆ ಲಲಿತಮ್ಮ ಅವಿರೋಧ ಆಯ್ಕೆ

ಬಾಗೇಪಲ್ಲಿ: ತಾಲ್ಲೂಕಿನ ತೋಳ್ಳಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಸುಜ್ಞಾನಂಪಲ್ಲಿ ಶ್ರೀಮತಿ ಲಲಿತಮ್ಮ ತೋಳ್ಳಪಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾದರು.

ಹಿಂದಿನ ಅಧ್ಯಕ್ಷ ಸ್ಥಾನ  ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ಸುಜ್ಞಾನಂಪಲ್ಲಿ ಕ್ಷೇತ್ರ ದಿಂದ ಶ್ರೀಮತಿ ಲಲಿತಮ್ಮ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರು. ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಬಾಗೇಪಲ್ಲಿ ತಾಲ್ಲೂಕು ಚುನಾವಣೆ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಮನೀಶಾ ಮಹೇಶ್ ಎನ್ ಪತ್ರಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ಶ್ರೀಮತಿ ಲಲಿತಮ್ಮ ಅಧಿಕಾರ ವಹಿಸಿ ಕೊಟ್ಟರು.

ತೋಳ್ಳಪಲ್ಲಿ ಗ್ರಾಮ ಪಂಚಾಯತಿ ಒಟ್ಟು ೧೬ ಸದಸ್ಯರು ಇದ್ದು ಇಬ್ಬರು ಗೈರುಹಾಜರಾಗಿ ಈ ಚುನಾವಣೆಯಲ್ಲಿ ೧೪ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ತೋಳ್ಳಪಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ವಿ.ಮಂಜುನಾಥ್ ರೆಡ್ಡಿ ಮಾತನಾಡಿ, ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಅವರು ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತಾರೆ
ಸದಸ್ಯರು ಮತ್ತು ಅಧ್ಯಕ್ಷರು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಸಾಕಷ್ಟು ಅಭಿವೃದ್ಧಿ ಸಾಧಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಬಹುದು ಎಂದು ಸಲಹೆ ನೀಡಿದರು ಹಾಗೂ. ಪಕ್ಷಾತೀತ ನೆಲೆಯಲ್ಲಿ ಅಭೀವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾರ ತುರಾಯಿಗಳನ್ನು ಹಾಕಿ ಸಿಹಿ ಹಂಚಿ ಪಟಾಕಿ ಸಿಡಿಸಿ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಲಲಿತಾ ಈಶ್ವರರೆಡ್ಡಿ ಅವರನ್ನು ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯ ರಾದ ರಾಮಲಕ್ಷ್ಮಮ್ಮ ಗೋಪಾಲ ರೆಡ್ಡಿ, ಕದಿರಮ್ಮ, ಯಾಮನ್ನ, ಗಂಗರತ್ನಮ್ಮ, ವೇಣುಗೋಪಾಲ, ಮಂಜುಳಾ, ಮುರಳಿಮನೋಹನ್, ಶಿವಮ್ಮ, ಸುಕನ್ಯಾ, ಗೋವಿಂದಪ್ಪ, ಶ್ರೀನಿವಾಸ್, ಆಂಜನೇಯ, ಕೆ.ವಿ.ಮಂಜುನಾಥ್ ರೆಡ್ಡಿ ಹಾಗೂ ಸಾರ್ವಜನಿಕರು, ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: chikkaballapurnews