ಮಧುಗಿರಿ : ಗೊಂದಿಹಳ್ಳಿ ಗ್ರಾ.ಪಂ.ಗೆ ನೂತನ ಅಧ್ಯಕ್ಷರಾಗಿ ರಂಗನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದು ಸ್ಮಶಾನ ಹಾಗೂ ನೂತನ ಕಟ್ಟಡಕ್ಕೆ ಆದ್ಯತೆ ನೀಡುವ ಭರವಸೆ ನೀಡಿ ದ್ದಾರೆ.
ತಾಲೂಕಿನ ಪುರವರ ಹೋಬಳಿಯ ಗೊಂದಿಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ರಾಗಿ ಆಯ್ಕೆಯಾಗಿ ಮಾತನಾಡಿದ ಅವರು, ಗ್ರಾ.ಪಂ.ನ ಸದಸ್ಯರಿಗೆ ಎಷ್ಟೇ ಆಮಿಷ ತೋರಿದರೂ ಸದಸ್ಯರೆಲ್ಲ ನನ್ನ ಬೆಂಬಲಿಸಿ ಅವಿರೋಧವಾಗಿ ಆಯ್ಕೆಮಾಡಿದ್ದು ನನ್ನ ಮೇಲೆ ನಂಬಿಕೆಯಿರಿಸಿ ಇಷ್ಟು ಚಿಕ್ಕ ವಯಸ್ಸಿಗೆ ನನಗೆ ಈ ಜವಾಬ್ದಾರಿಯನ್ನು ನೀಡಿದ್ದು ಅವರಿಗೆ ಚಿರಋಣಿ. ಹಾಗೂ ನನ್ನ ೧ ವರ್ಷದ ಅವಧಿಯಲ್ಲಿ ಗ್ರಾ.ಪಂ.ಗೆ ನೂತನ ಕಟ್ಟಡ, ಗ್ರಾಮಕ್ಕೆ ಸ್ಮಶಾನ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡು ತ್ತೇನೆ. ಯಾವುದೇ ಅಪವಾದಗಳು ಬರದಂತೆ ಸಾರ್ವಜನಿಕರ ಸೇವೆಗೆ ಬದ್ಧನಾಗಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಮಲ್ಲಿಕಾರ್ಜುನಯ್ಯ, ರೂಪ ಮಂಜುನಾಥ್, ಚಂದ್ರಶೇಖರ್, ನಾಗಮ್ಮ ರಾಜನಾಯಕ, ಶಿವರುದ್ರಯ್ಯ, ಗಿರಿಜಾ, ಆನಂದ ಕುಮಾರ್, ಲಕ್ಷ÷್ಮಮ್ಮ ಜಗದೀಶ್, ಹರ್ಷಿತಾ ಪ್ರಸಾದ್, ಸುನೀತಾ ರಮೇಶ್, ತಾ.ಪಂ. ಮಾಜಿ ಸದಸ್ಯ ಸೌಭಾಗ್ಯ ಹನುಮಂತರಾಯಪ್ಪ, ಮಾಜಿ ಗ್ರಾ.ಪಂ.ಸದಸ್ಯರಾದ ರಮೇಶ್, ಮುನೀರ್, ಮುಖಂಡರಾದ ಲೊಕೇಶ್, ರಮೇಶ್, ಲಕ್ಷಿ÷್ಮÃಕಾಂತ, ಗೋವಿಂದಪ್ಪ, ರಾಮಾಂಜಿನಪ್ಪ, ಮೂರ್ತಪ್ಪ, ಸತೀಶ್, ನಂಜು0ಡಪ್ಪ, ಶ್ರೀನಿವಾಸ್, ಉಮೇಶ್, ಬಾಲಾಜಿ, ರವಿ. ಅನಂತ, ಗಜೇಂದ್ರ, ರಂಗಧಾಮ, ಪುಟ್ಟರಂಗಪ್ಪ, ಇತರರು ಇದ್ದರು.