ಬೆಂಗಳೂರು: ಮುದ್ದಿನ ಸಾಕು ನಾಯಿ ಸತ್ತಿದ್ದಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Self Harming) ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವಪುರದಲ್ಲಿ ನಡೆದಿದೆ. ರಾಜಶೇಖರ್ ಆತ್ಮಹತ್ಯೆ ಮಾಡಿಕೊಂಡ ಯುವಕ.
ಯುವಕ 9 ವರ್ಷದ ಹಿಂದೆ ಜಮರ್ನ್ ಶೆಫರ್ಡ್ ನಾಯಿ ತಂದಿದ್ದರು. ನಾಯಿಗೆ ಪ್ರೀತಿಯಿಂದ ಬೌನ್ಸಿ ಎಂದು ಹೆಸರಿಟ್ಟಿದ್ದರು. ಅನಾರೋಗ್ಯದಿಂದ ನಾಯಿ ಮೃತಪಟ್ಟಿದ್ದು, ಬೆಳ್ಳಗ್ಗೆ ಎದ್ದು ನೋಡಿದಾಗ
ರಾಜಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Viral News: ಭಾಷೆ ಬಾರದಿದ್ದರೆ ಏನಂತೆ? ಗೂಗಲ್ ಟ್ರಾನ್ಸ್‌ಲೇಟ್ ಇದ್ದರೆ ಸಾಕಲ್ವೇ? ಈ ಕ್ಯೂಟ್ ವಿಡಿಯೊಗೆ ನೆಟ್ಟಿಗರು ಫುಲ್ ಫಿದಾ
ಹಾಸನದಲ್ಲಿ ಪ್ರಿಯಕರನಿಗೇ ಚಾಕು ಇರಿದ ಪ್ರಿಯತಮೆ; ನ್ಯೂ ಇಯರ್ ಪಾರ್ಟಿ ವೇಳೆ ಘಟನೆ
ಹಾಸನ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಪ್ರಿಯಕರನಿಗೆ ಪ್ರಿಯತಮೆಯೇ ಚಾಕುವಿನಿಂದ ಇರಿದ (Stabbing Case) ಘಟನೆ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ 12.30ಕ್ಕೆ ಘಟನೆ ನಡೆದಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎ.ಗುಡುಗನಹಳ್ಳಿ ನಿವಾಸಿ ಮನು ಕುಮಾರ್ ಚಾಕು ಇರಿತಕ್ಕೊಳಗಾದ ಯುವಕ. ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರಿಗೆ ಆತನ ಪ್ರಿಯತಮೆ ಚಾಕು ಇರಿದಿದ್ದಾಳೆ. ಸದ್ಯ ಪ್ರಿಯತಮೆ ವಿರುದ್ಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯೊಬ್ಬಳನ್ನು ಮನು ಕುಮಾರ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ. ಕೆಲವು ದಿನಗಳಿಂದ ಇಬ್ಬರು ವೈಮನಸ್ಸಿಂದ ದೂರವಾಗಿದ್ದರು. ನೆನ್ನೆ ಹೊಸ ವರ್ಷಾಚರಣೆ ಪಾರ್ಟಿ ಮುಗಿದ ಸಂದರ್ಭದಲ್ಲಿ ಮನುಕುಮಾರ್ ಮನೆಗೆ ತೆರಳುತ್ತಿದ್ದ ವೇಳೆ ಯುವತಿ ಚಾಕು ಇರಿದಿದ್ದಾಳೆ.
ಹೋಟೆಲ್ ಒಳಗೆ ತೆರಳುತ್ತಿದ್ದ ವೇಳೆ ಎದುರಿಗೆ ಆಕೆಯ ಪ್ರಿಯತಮ ಮನುಕುಮಾರ್ ಭೇಟಿಯಾಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಅಲ್ಲಿದ್ದ ಕೆಲವರು ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪ್ರಿಯತಮೆ ಮನುಕುಮಾರ್‌ಗೆ ಚಾಕು ಇರಿದಿದ್ದಾಳೆ. ಸದ್ಯ ಯುವಕ ಹಾಸನದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.