ತರಳಬಾಳು ಸಮುದಾಯ ಭವನ ಕಟ್ಟಡದ ಶಂಕುಸ್ಥಾಪನೆ : ಸಿರಿಗೆರೆ ಶ್ರೀಗಳವರಿಂದ ಚಾಲನೆ
ತಿಪಟೂರು: ತಾಲ್ಲೂಕಿನ ವಿನಾಯಕನಗರದ ಚಿಕ್ಕಣ್ಣ ಗಾರ್ಡನ್‌ನಲ್ಲಿ ಸುಮಾರು ಮೂರು ಕೋಟಿ ರೂಪಾಯಿಗಳ ಮೂರು ಅಂತಸ್ಥಿನ ಶ್ರೀ ತರಳಬಾಳು ಸಮುದಾಯ ಭವನದ ಶಂಕುಸ್ಥಾಪನೆಗೆ ಸಿರಿಗೆರೆ ಬೃಹನ್ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಗುದ್ದಲಿ ಪೂಜೆ ನೇರವೇರಿಸಿದರು.
ಸರ್ಕಾರಗಳು ಸಮಾಜದ ಹಿತಿಮಿತಿಗಳನ್ನು ನೋಡಿ ಹಲವಾರು ಸವಲತ್ತುಗಳನ್ನು ಕೊಡುತ್ತದೆ ಅದರಂತೆ ಸಮಾಜದ ಭಕ್ತರು ನಿದ್ರಾವ್ಯವಸ್ಥೆಯಿಂದ ಎದ್ದು ಬಂದು ಸಮಾಜದ ಸೇವಾ ಕರ‍್ಯಗಳಲ್ಲಿ ತನು ಮನ ಧನ ಸಹಾಯ ಮಾಡುತ್ತಾ ಸಮಾಜದ ಜೊತೆಯಲ್ಲಿ ಸಾಗಬೇಕು ಎಂದರು.
ಮೊದಲು ಗ್ರಾಮಾಂತರ ಪ್ರದೇಶಗಳಲ್ಲಿ ಮಧುವೆ ಸಮಾರಂಭಗಳು ನಡೆದರೆ ಇಡೀ ಹಳ್ಳಿಗಳ ಮನೆಗಳು ಕಲ್ಯಾಣ ಮಂಟಪಗಳು ಅಗುತ್ತಿದ್ದವು ಆದರೆ ಬದಲಾದ ಸ್ಥಿತಿಯಲ್ಲಿ ಮದುವೆಗಳು ನಗರಗಳಿಗೆ ಮಾರ್ಪಾಡು ಹೊಂದುತ್ತಿವೆ ಅದರಂತೆ ನಗರಗಳಲ್ಲಿ ಸುಸಜ್ಜಿತ ಕಟ್ಟಡಗಳ ಅವಶ್ಯಕತೆ ಇದೆ ಹಾಗಾಗಿ ಸರ್ಕಾರ ಹಾಗೂ ದಾನಿಗಳು, ಭಕ್ತರ ಸಹಕಾರದಲ್ಲಿ ನಿರ್ಮಾಣವಾಗುವ ತರಳಬಾಳು ಸಮುದಾಯ ಭವನಕ್ಕೆ ಸಿರಿಗೆರೆ ಶ್ರೀಮಠದಿಂದ ಏರಡು ಕೋಟಿ ರೂಪಾಯಿಗಳನ್ನು ಸಹಾಯರ್ಥ ವಾಗಿ ನೀಡುತ್ತೇವೆ ಎಂದರು.
ಸಮಾಜದಲ್ಲಿ ಮಧುವೆ ಮಾಡಲು ಗಂಡು ಹೆಣ್ಣುಗಳ ಹುಡುಕಾಟ ಮಾಡಬೇಕಾಗುತ್ತದೆ ಅದಕೂಸ್ಕರ ಶ್ರೀಮಠದಿಂದ ಸಾಧು ವೀರಶೈವ ಲಿಂಗಾಯಿತ ಮ್ಯಾಟ್ರೋಮೂನಿಯನ್ನು ಆರಂಭಿಸಲಾಗಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ, ಇದೇ ಸಮಯದಲ್ಲಿ ಸಮುದಾಯ ಭವನಕ್ಕೆ ನಿವೇಶನವನ್ನು ದಾನ ಮಾಡಿದ ಹಾಲ್ಕುರಿಕೆ ಚಿಕ್ಕಣ್ಣನವರ ಕುಟುಂಬವನ್ನು ಅಭಿನಂದಿಸಿದರು.
ಶಿಕ್ಷಣ ಸಚಿವ ಬಿಸಿ ನಾಗೇಶ್ ಮಾತನಾಡಿ ಸರ್ಕಾರದ ವತಿಯಿಂದ ಸಾಧು ವೀರಶೈವ ಸಮಾಜಕ್ಕೆ ಈಗಾಗಲೇ ಮೋದಲ ಹಂತದಲ್ಲಿ ೨೦ ಲಕ್ಷ ರೂಪಾಯಿ ಗಳನ್ನು ಮಂಜೂರು ಮಾಡಲಾಗಿದೆ ಅದರಂತೆ ಮತ್ತೆ ೨೫ ಲಕ್ಷಗಳ ಅನುದಾನದ ಜೊತೆ ಒಟ್ಟು ಸಮುದಾಯ ಭವನಕ್ಕೆ ಸರ್ಕಾರದ ವತಿಯಿಂದ ೪೫ ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ, ಹಾಗೂ ಜೊತೆಗೆ ಸಂಬAಧಪಟ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸ ಲಾಗುವುದು ಇಂತಹ ಕಾರ್ಯಗಳಿಗೆ ಸಮಾಜದ ಒಗ್ಗಟ್ಟಿನ ಫಲವೇ ಅತಿ ಮುಖ್ಯವಾಗಿದೆ ಎಂದರು.
ಕಾರ‍್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷ ರಾಮ್ ಮೋಹನ್, ಅರಸೀಕೆರೆ ತಾಲ್ಲೂಕಿನ ಸಾಧು ವೀರಶೈವ ಸಮಾಜದ ಅಧ್ಯಕ್ಷ ರೇವಣ್ಣ, ಹರಿಸಮುದ್ರ ಗಂಗಾಧರ್, ತಾಲ್ಲೂಕಿನ ಸಾಧು ವೀರಶೈವ ಸಮಾಜದ ಅಧ್ಯಕ್ಷ ನಂಜುAಡಪ್ಪ, ಚಿಕ್ಕಬಿದರೆರಾಜಶೇಖರ್, ಮತ್ತಿತ್ತರು ಹಾಜರಿದ್ದರು.