Monday, 25th November 2024

ರಾಮಕೃಷ್ಣ ಸೇವಾಶ್ರಮ 35 ವರ್ಷಗಳಿಂದ ಸೇವೆ ಮಾಡಿಕೊಂಡು ಬರುತ್ತಿದೆ

ಕೊರಟಗೆರೆ: ನೆರೆ ಸಂತ್ರಸ್ಥರಿಗೆ ರಾಮಕೃಷ್ಣ ಸೇವಾಶ್ರಮ ಸುಮಾರೂ ೩೫ ವರ್ಷಗಳಿಂದ ಸೇವೆ ಮಾಡಿಕೊಂಡು ಬರುತ್ತಿದೆ ಎಂದು ಪಾವಗಡದ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಶ್ರೀ ಜಪಾನಂದಶ ಸ್ವಾಮಿಜಿ ತಿಳಿಸಿದರು.

ಕೊರಟಗೆರೆ ತಾಲೂಕಿನ ಚೀಲಗಾನಹಳ್ಳಿ ಗ್ರಾಮದಲ್ಲಿ ಇನ್ಫೋಸಿಸ್ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಪಾವಗಡದ ರಾಮಕೃಷ್ಣ ಸೇವಾಶ್ರಮದ ವತಿಯಿಂದ ಅತಿವೃಷ್ಠಿಯಿಂದ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ಆಹಾರ ದಾನ್ಯ ಕಿಟ್ ವಿತರಣೆ ಮಾಡಿ ಮಾತನಾಡಿದರು.

ತಾಲೂಕಿನಲ್ಲಿ ಅತಿಯಾದ ಮಳೆಯಿಂದ ಹಲವಾರು ಮನೆಗಳು ಬಿದ್ದುಹೋಗಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿದೆ. ಧಾರಾಕಾರ ಮಳೆಯಿಂದಾಗಿ ರೈತರು ಮತ್ತು ಬಡವರು ಸಂಕಷ್ಠ ಸಿಲುಕಿದ್ದು, ಅಂತಹವರಿಗೆ ಕಷ್ಟಗಳಿಗೆ ರಾಮಕೃಷ್ಣ ಸೇವಾಶ್ರಮ ಸದಾ ಸಿದ್ದವಿರುತ್ತದೆ. ನಮ್ಮ ಈ ಕಾರ್ಯಕ್ಕೆ ಸದಾ ನಮ್ಮೊಂದಿಗೆ ಇರುವ ಇನ್ಫೋಸಿಸ್ ಮತ್ತು ರೆಡ್ ಕ್ರಾಸ್ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು

ತಹಶೀಲ್ದಾರ್ ನಾಹೀದಾ ಜಮ್ ಜಮ್ ಮಾತನಾಡಿ ತಾಲೂಕಿನಲ್ಲಿ ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಹಾನಿಗೊಳ ಗಾದ ನೆರೆಸಂತ್ರಸ್ಥರ ಮನೆಗಳಿಗೆ ಜಪಾನಂದ ಸ್ವಾಮೀಜಿ ಗಳು ಟಾರ್ಪಲ್, ಆಹಾರ ದಾನ್ಯ, ಹೊದಿಕೆ, ಬಟ್ಟೆಗಳು ಹಾಗೂ ಔಷಧಿ ಕಿಟ್‌ಗಳನ್ನು ನೀಡುತ್ತಿದ್ದಾರೆ.

ಈ ಸಮಯದಲ್ಲಿ ನೊಂದವರಿಗೆ ಇಂತಹ ಸ್ವಯಂ ಸೇವಾ ಸಂಘಗಳ ಸೇವೆ ಅತ್ಯಗತ್ಯವಾಗಿದೆ. ರಾಮಕೃಷ್ಣಾ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿಗಳು ಸಾಮಾಜಿಕ ಸೇವೆಗಳನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದು ಅವರಿಗೆ ನಮ್ಮ ತಾಲ್ಲೂಕು ಆಡಳಿತದ ಪರವಾಗಿ ದನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.

ಈ ಸಂಧರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಭಾಗ್ಯಮ್ಮ, ಸದಸ್ಯರಾದ ಲಕ್ಷಿö್ಮÃ ನಾರಾಯಣ್, ನಾಗರಾಜು, ನಂದೀಶ್, ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಣ್ಣ, ಸದಸ್ಯ ರಮೇಶ್, ನರೇಂದ್ರಬಾಬು, ಕಂದಾಯ ಇಲಾಖೆಯ ಬಸವರಾಜು, ಪವನ್‌ಕುಮಾರ್, ರಾಕೇಶ್, ಸೇರಿದಂತೆ ಇತರರು ಹಾಜರಿದ್ದರು.