ವಾಡಿ(ಶಹಾಪುರ): ಬೌದ್ಧರ ಪವಿತ್ರ ಸ್ಥಳ ಸನ್ನತಿಯ ಸಮಗ್ರ ಅಭಿವೃದ್ದಿ ಮತ್ತು ರಕ್ಷಣೆಗಾಗಿ ಸನ್ನತಿ ಬೌದ್ಧ ಪ್ರಾಧಿಕಾರ ಸಂರಕ್ಷಣಾ ಸಮಿತಿ ರಚಿಸಲಾಯಿತು ಎಂದು ಸಾಯಿಬಣ್ಣ ಬನ್ನೆಟ್ಟೆ ತಿಳಿಸಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ ಸನ್ನತ್ತಿ, ಕನಗನಹಳ್ಳಿ, ಕೊಲ್ಲೂರ, ನಾಲವಾರ, ಸೂಗೂರ, ಮಾರಡಗಿ, ಬನ್ನೆಟ್ಟಿ, ಕುಲಕುಂದಾ, ಮಳಗ, ತುನ್ನೂರ ಹಾಗೂ ವಾಡಿ ಕಾರ್ಯಕರ್ತರನ್ನೊಳಗೊಂಡ ಸಮಿತಿ ರಚಿಸಲಾಗಿದೆ.
ಸನ್ನತಿ ಅಭಿವೃದ್ದಿ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಿ, ಬೌದ್ಧ ಸ್ಥಳ ಅಭಿವೃದ್ದಿ ಪಡಿಸುವುದು ಸಂಘದ ಉದ್ದೇಶವಾಗಿದೆ ಎಂದರು. ಸಾಯಿಬಣ್ಣ ಹೊಸಮನಿ(ಅಧ್ಯಕ್ಷ), ಭಾಗಪ್ಪ ಯಾದಗಿರಿ ಕೊಲ್ಲೂರು(ಗೌರವಧ್ಯಕ್ಷ), ಬಾಬು ಬಂದಳ್ಳಿ(ಉಪಾಧ್ಯಕ್ಷ), ಮೋನಪ್ಪ ನಡಿಗೇರ (ಕಾರ್ಯದರ್ಶಿ), ಸಂದೀಪ ಕಟ್ಟಿ, ಶ್ರೀಮಂತ ಬಾವಿ (ಸಹ ಕಾರ್ಯದರ್ಶಿಗಳು), ಸಂಜುಕುಮಾರ ಹರಗಿ(ಖಜಾಂಚಿ), ಭಗವಾನ್ ಚಾಮನೂರ, ಮಲ್ಲಕಾರ್ಜುನ ರಾವೂರ, ಮಲ್ಲಿಕಾರ್ಜುನ ಮುದನಕರ, ಮಂಜುನಾಥ ಹೊನಗುಂಟಾ, ಸೋಮನಾಥ ಕಂಸೂರ, ಶಿವಕುಮಾರ ನೀಲೂರ, ಶಿವಯೋಗಿ ಜೆಡಿಯಾರ, ಶಿವಕುಮಾರ ಬಂದಳ್ಳಿ, ಶಿವಯೋಗಿ ಕಾಗಿ, ಶರಬಣ್ಣ ನಾಟೇಕರ, ಮರಲಿಂಗ ಹೊಸಮನಿ, ನಾಗಪ್ಪ ಪೂಜಾರಿ, ಭೀಮಾಶಂಕರ ಹೊಸಮನಿ, ಬಸವರಾಜ ಯಾದಗಿರಿ, ಮಲ್ಲಿಕಾರ್ಜುನ ಯಾದಗಿರಿ, ಮರೆಪ್ಪ ಪ್ಯಾಟಿ, ಶಿವಶರಣಪ್ಪ ಕಡ್ಲೆಕ್ (ಕಾರ್ಯಕಾರಿ ಸಮಿತಿ ಸದಸ್ಯರು) ನೇಮಕವಾಗಿದ್ದಾರೆ ಎಂದು ಹೇಳಿದರು.