ಚಿಕ್ಕನಾಯಕನಹಳ್ಳಿ : ಸರ್ವ ಸದಸ್ಯರ ಬಲದಿಂದ ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗಿದೆ ಎಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಣ್ಣ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಗುರುವಾರ ಆಯೋಜಿಸಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಯಲ್ಲಿ ಮಾತನಾಡಿದರು.
ತಾಲ್ಲೂಕಿನಲ್ಲಿ ಕಸಬಾ ಸಹಕಾರ ಸಂಘ ಉತ್ತಮವಾಗಿ ನಡೆಯುತ್ತಿದೆ. ಸಂಘದ ಎಲ್ಲಾ ಸದಸ್ಯರಿಗೂ ಇದರ ಶ್ರೇಯ ಸಲ್ಲುತ್ತದೆ. ಸಂಘವನ್ನು ಕುಟುಂಬವೆ0ದು ಭಾವಿಸಿರುವ ಎಲ್ಲಾ ನಿರ್ದೇಶಕರು, ಮತ್ತು ಸಿಬ್ಬಂದಿ ಸಂಘದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.
ಸಹಕಾರ ಸಂಘಗಳಲ್ಲಿ ಸಮಸ್ಯೆಗಳು ಸಾಮಾನ್ಯ ಇದನ್ನು ಬದಿಗಿಟ್ಟು ಸರ್ವ ಸದಸ್ಯರು ಸಂಘ ದೊ0ದಿಗೆ ಸಕ್ರಿಯವಾಗಿ ವ್ಯವಹರಿಸಿ ವೈಯಕ್ತಿಕ ಹಾಗು ಸಂಘದ ಬೆಳವಣಿಗೆಗೆ ಕಾರಣವಾಗಬೇಕು. ರೈತರಿಗೆ ಅನುಕೂಲ ಕಲ್ಪಿಸಲು ಸಹಕಾರ ಸಂಘದ ಮೂಲಕ ಗೊಬ್ಬರ ವಿತರಿಸಲಾಗುವುದು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನೆರವಿಲ್ಲದೆ ಸಹಕಾರ ಸಂಘದ ಮೂಲಕ ಸಾಲ ವಿತರಿಸಲು ಕ್ರಮ ಕೈಗೊಳ್ಳಿ, ಸುಸ್ಥಿದಾರರ ಹೆಸರುಗಳನ್ನು ನೋಟಿಸ್ ಬೋರ್ಡ್ಗಳಲ್ಲಿ ಪ್ರದರ್ಶಿಸಿ, ಸಂಘದ ಸದಸ್ಯರ ಹಾಜರಾತಿ ಭತ್ಯೆ ೭೦೦ ರೂ ಬದಲು ೫೦೦ ರೂಗೆ ಇಳಿಸಲಾಯಿತು. ಹಿಂದಿನ ಸಿಇಓ ಮಧುಸೂದನ್ ಸರ್ವೀಸ್ ರೆಕಾರ್ಡ್ ಒದಗಿಸದೆ ರಜೆಯನ್ನು ನಗದೀಕರಣ ಮಾಡಿಕೊಂಡಿದ್ದಾರೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಸಭೆಯಲ್ಲಿ ಒತ್ತಾಯಿಸ ಲಾಯಿತು.
ಕೇಂದ್ರ ಬ್ಯಾಂಕ್ ಮೇಲ್ವಿಚಾರಕ ರಂಗಸ್ವಾಮಿ, ಉಪಾಧ್ಯಕ್ಷ ಹನುಮಂತರಾಯಪ್ಪ, ನಿರ್ದೇಶಕರಾದ ಗುರುಮೂರ್ತಿ, ಪ್ರಸನ್ನ ಕುಮಾರ್, ಶಶಿಧರ್ಮೂರ್ತಿ, ಧೃವಕುಮಾರ್, ಶಶಿಶೇಖರ್, ರವಿಕುಮಾರ್, ರೇಣುಕಮ್ಮ, ಭಾಗ್ಯ, ಕಾರ್ಯ ನಿರ್ವಾಹಕ ಯೋಗೀಶ್, ಲೆಕ್ಕಿಗರು ಸಿದ್ದರಾಜು, ಮಾರಾಟ ಗುಮಾಸ್ತ ನಟರಾಜು, ಮತ್ತಿತರರು ಇದ್ದರು.