ತುಮಕೂರು: ಸಿದ್ಧಗಂಗಾ ಆಸ್ಪತ್ರೆಯಿಂದ ಇದೇ ಸೆ.29ರಂದು ಸಿದ್ಧಗಂಗಾ ಹೆಲ್ತ್ ರನ್ 10ಕೆ ಮ್ಯಾರಥಾನ್‌ಗೆ ವ್ಯಾಪಕ ನೋಂದಣಿಯಾಗಿದ್ದು 2 ಸಾವಿರಕ್ಕೂ ಹೆಚ್ಚು ಓಟಗಾರರು ಮ್ಯಾರಥಾನ್‌ನಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದು ಸಿದ್ಧಗಂಗಾ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ವಿಭಾಗದ ನಿರ್ದೇಶಕ ಹಿರಿಯ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಹೆಚ್.ಎಂ. ತಿಳಿಸಿದರು.
ಅವರು ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ನಡೆಯುತ್ತಿರುವ ಮ್ಯಾರಥಾನ್ 10ಕೆ ಹೆಲ್ತ್ ರನ್ ರೋಡ್‌ಮ್ಯಾಪ್ ಬಿಡುಗಡೆಗೊಳಿಸಿ ಮಾತನಾಡಿ, ಮೂರು ವಿಭಾಗದಲ್ಲಿ ನಡೆಯಲಿರುವ ಮ್ಯಾರಥಾನ್‌ಗೆ ನಮ್ಮ ಜಿಲ್ಲೆಯಷ್ಟೇ ಅಲ್ಲದೆ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ಓಟಗಾರರು ಆಗಮಿಸುತ್ತಿದ್ದು ಅಂದು ಬೆಳಗ್ಗೆ 6.30ಕ್ಕೆ ಚಾಲನೆ ದೊರೆಯಲಿದೆ ಎಂದರು.
ಹೃದ್ರೋಗ ತಜ್ಞರಾದ ಡಾ.ಶರತ್ ರೂಟ್ ಮ್ಯಾಪ್ ಕುರಿತು ಮಾಹಿತಿ ನೀಡಿ, 5 ಕಿ.ಮೀ ಮ್ಯಾರಥಾನ್ ಸಿದ್ಧಗಂಗಾ ಆಸ್ಪತ್ರೆಯಿಂದ ಆರಂಭವಾಗಿ ಕೆಇಬಿ ರಸ್ತೆ ಮೂಲಕ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅಂತ್ಯವಾಗಲಿದೆ, 10 ಕೆ ಮ್ಯಾರ ಥಾನ್ ಆಸ್ಪತ್ರೆಯಿಂದ ಹೊರಟು ಟೌನ್ ಹಾಲ್,ಕಾಲ್ ಟ್ಯಾಕ್ಸ್, ರಿಂಗ್ ರೋಡ್, ಟಿ.ಪಿ.ಕೈಲಾಸಂ ರಸ್ತೆ ಮೂಲಕ ಸಾಗಿ ಪುನಃ ಆಸ್ಪತ್ರೆಯಲ್ಲಿ ಕೊನೆಗೊಳ್ಳಲಿದೆ, 2 ಕಿ.ಮೀ ಮಜಾರನ್ ಕೂಡ ನಡೆಯಲಿದ್ದು ಸಿದ್ಧಗಂಗಾ ಆಸ್ಪತ್ರೆಯಿಂದ ಹೊರಟು ಭದ್ರಮ್ಮ ಚೌಟ್ರಿ ಮೂಲಕ ಪುನಃ ಆಸ್ಪತ್ರೆಯಲ್ಲಿ ಮುಕ್ತಾಯವಾಗಲಿದೆ ಎಂದರು.
ಸಿದ್ಧಗಂಗಾ ಆಸ್ಪತ್ರೆ ಸಿಇಓ ಡಾ.ಸಂಜೀವ್ ಕುಮಾರ್ ಮಾತನಾಡಿ ಮ್ಯಾರಥಾನ್‌ಗೆ ಚಾಲನೆ ನೀಡಲು ಖ್ಯಾತ ಅಥ್ಲೆಟಿಕ್ ಅಶ್ವಿನಿ ಅಕ್ಕುಂಜಿ ಆಗಮಿಸುತ್ತಿದ್ದು, ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಸಿದ್ಧಲಿಂಗ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಥ್ಲೆಟಿಕ್ ಅಸೋಸಿಯೇಶನ್ ಕಾರ್ಯದರ್ಶಿ ಪ್ರಭಾಕರ್ ಮಾತನಾಡಿ ಸಿದ್ಧಗಂಗಾ ಆಸ್ಪತ್ರೆ ಪ್ರತಿವರ್ಷ ಇಂತಹ ಮ್ಯಾರಥಾನ್ ಆಯೋಜಿಸುವ ಮೂಲಕ ಕ್ರೀಡಾಸ್ಪೂರ್ತಿ ಮೆರೆಯುವುದರ ಜೊತೆಗೆ ಹೃದ್ರೋಗ ಬಗ್ಗೆ ಕಾಳಜಿ ಮೂಡಿಸುತ್ತಿರುವುದು ಶ್ಲಾಘನೀಯ ಕೆಲಸ ಎಂದರು.
ದೈಹಿಕ ಶಿಕ್ಷಣ ನಿರ್ದೇಕರುಗಳಾದ ಯೋಗೀಶ್ ಡಿಎಸ್, ಜಯಶಂಕರ್, ಬಸವರಾಜ್ ಮುಂತಾದವರಿದ್ದರು.
ಇದನ್ನೂ ಓದಿ: Tumkur News: ಸರ್ಕಾರಿ ಶಾಲೆಗಳಲ್ಲೂ ಪ್ರತಿಭಾವಂತ ಶಿಕ್ಷಕರಿದ್ದಾರೆ: ಶಾಸಕ ಬಿ. ಸುರೇಶ್‌ಗೌಡ