Wednesday, 27th November 2024

ಸಿರಿ ಅಂದರೆ ಸಂಪತ್ತು, ಸಿರಿಧಾನ್ಯದ ಮೂಲಕ ಉತ್ತಮ ಆರೋಗ್ಯ ಸಂಪತ್ತನ್ನು ವೃದ್ಧಿಸಿಕೊಳ್ಳಿ: ಯಳನಾಡು ಶ್ರೀಗಳು

ಚಿಕ್ಕನಾಯಕನಹಳ್ಳಿ: ಸಿರಿ ಅಂದರೆ ಸಂಪತ್ತು, ಸಿರಿಧಾನ್ಯದ ಮೂಲಕ ಉತ್ತಮ ಆರೋಗ್ಯ ಸಂಪತ್ತನ್ನು ವೃದ್ಧಿಸಿಕೊಳ್ಳಿ  ಎಂದು ಯಳನಾಡು ಅರಸೀಕೆರೆ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಜ್ಞಾನಪ್ರಭು ಸಿದ್ಧರಾಮೇಶ್ವರ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರವರ್ತಿತ ಯಳನಾಡು ಚಿಕ್ಕನಾಯಕನಹಳ್ಳಿ ಸಿರಿ ರೈತ ಉತ್ಪಾದಕ ಕಂಪನಿಯ ವಾರ್ಷಿಕ ಮಹಾ ಸಭೆಯಲ್ಲಿ ಆಶೀರ್ವಚನ ನೀಡಿದರು. ಈ ಮಹಾಸಭೆಯ ಅಧ್ಯಕ್ಷತೆಯನ್ನು ರೈತ ಉತ್ಪಾದಕ ಕಂಪನಿ ಅಧ್ಯಕ್ಷರಾದ ಜಿ ಪರಮೇಶ್ವರ್ ರವರು ವಹಿಸಿದ್ದರು.ಯೋಜನೆಯ ಬೆಂಗಳೂರು ಪ್ರಾದೇ ಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಶೀನಪ್ಪ ಎಂ. ರವರು ಈ ಸಭೆಯನ್ನು ಉದ್ಘಾಟಿಸಿ” ಯೋಜನೆಯು ಅನೇಕ ಜನಪರ, ರೈತಪರ, ಮಹಿಳಾಪರ ಕೆಲಸ ಮಾಡು ತ್ತಿದ್ದು, ರೈತ ಉತ್ಪಾದಕ ಕಂಪೆನಿಯ ಮೂಲಕ ರೈತರಲ್ಲಿ  ಸ್ವಾವಲಂಬಿ ಜೀವನಕ್ಕೆ ಬುನಾದಿ ಹಾಕುತ್ತಿದೆ. ಇದನ್ನು ಉಳಿಸಿ-ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸಬೇಕು ” ಎಂದು ಹೇಳಿದರು.
ಧಾರವಾಡ ಸಿರಿಧಾನ್ಯ ಘಟಕದ ಹಿರಿಯ ನಿರ್ದೇಶಕ ಶ್ರೀ ದಿನೇಶ್ ಎಂ. ರವರು ಸಿರಿಧಾನ್ಯ ಉಪಯುಕ್ತತೆಯ ಬಗ್ಗೆ ಮಾಹಿತಿ ನೀಡಿದರು. ತಿಪಟೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ| ಎಂ.ಪದ್ಮನಾಭನ್ ರವರು ವಿಷಯ ತಜ್ಞರಾಗಿ ಭಾಗವಹಿಸಿ ಉಪ ನ್ಯಾಸ ನೀಡಿದರು.
ಗ್ರೀನ್ ಸ್ಟಾರ್ ಫರ್ಟಿಲೈಸರ್ ನ ವ್ಯವಸ್ಥಾಪಕರಾದ ಶ್ರೀ ಎಸ್.ಎಸ್. ಮೇತ್ರಿ ಯವರು ಮಣ್ಣು ಪರೀಕ್ಷೆಯ ವಿವಿಧ ಹಂತಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ  ಜಿಲ್ಲಾ ನಿರ್ದೇಶಕರಾದ  ದಿನೇಶ್  ತಾಲೂಕು ಯೋಜನಾಧಿಕಾರಿ ಶ್ರೀ ಪ್ರೇಮಾನಂದ್ , ರೈತ ಉತ್ಪಾದಕ ಕಂಪನಿ ಯೋಜನಾಧಿಕಾರಿ ನಿಖಿಲೇಶ್, ಕಂಪನಿಯ ನಿರ್ದೇಶಕರುಗಳಾದ, ಹೊನ್ನಯ್ಯ, ರಾಜಶೇಖರ್, ಅಂಜನ್ ಕುಮಾರ್, ಗಾಯತ್ರಿ ದೇವಿ, ಕೆರೆ ಸಮಿತಿ ಅಧ್ಯಕ್ಷರಾದ ಶಶಿಧರ್, ಸಾವಯವ ಘಟಕದ ಅಧ್ಯಕ್ಷರಾದ  ಬಸವರಾಜ್, ಜನ ಜಾಗೃತಿ ವೇದಿಕೆ ಸದಸ್ಯ ಪ್ರಕಾಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ರೈತರು ಮಹಿಳಾ ಸಂಘದ ಸದಸ್ಯರುಗಳು  ಭಾಗವಹಿಸಿದ್ದರು. ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗಳಾದ ಶ್ರೀ ಬಾಲಚಂದ್ರ ರವರು ಸ್ವಾಗತಿಸಿ, ಮೇಲ್ವಿಚಾರಕಿ ಶ್ರೀಮತಿ ಚೈತ್ರ ರವರು ವಂದಿಸಿದರು. ಮೇಲ್ವಿಚಾರಕಿ ರೇಷ್ಮಾ, ಸೇವಾಪ್ರತಿನಿಧಿಗಳು ಸಹಕರಿಸಿದರು.