Monday, 25th November 2024

Tumkur News: ವನ್ಯಜೀವಿಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ-ಸುರೇಶ್

ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಬೃಹತ್ ಹೆಬ್ಬಾವು


ಕೊರಟಗೆರೆ: ಆಹಾರ ಅರಸಿ ನಾಡಿಗೆ ಬಂದ ಹೆಬ್ಬಾವುಯೊವುಂದನ್ನ ತುಮಕೂರು ವನ್ಯಜೀವಿ ಉರಗ ಜಾಗೃತಿ ಸಂಸ್ಥೆಯ ಉರಗ ತಜ್ಞ ದಿಲೀಪ್ ತಂಡ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಕೊರಟಗೆರೆ ಪಟ್ಟಣದ ಹೊರವಲಯದ ಡಿಗ್ರಿ ಕಾಲೇಜು ಸಮೀಪ ಇರುವ ಟೀ ಅಂಗಡಿ ಬಳಿ ಇರುವ ಕಲ್ಲಿನ ಕೆಳ ಭಾಗದಲ್ಲಿ ಹೆಬ್ಬಾವುಯೊಂದು ಕಾಣಿಸಿಕೊಂಡಿದ್ದು, ತಕ್ಷಣ ಗಾಬರಿಯಾದ ಜನರು ಅರಣ್ಯ ಇಲಾಖೆಯ ಅಧಿಕಾರಿ ಗಳಿಗೆ ಮಾಹಿತಿ ನೀಡಿದ್ದಾರೆ. ತುಮಕೂರು ವನ್ಯಜೀವಿ ಉರಗ ಜಾಗೃತಿ ಸಂಸ್ಥೆಯ ಉರಗ ತಜ್ಞ ದಿಲೀಪ್ ತಂಡ ಆಗಮಿಸಿ ಅರಣ್ಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಸುಮಾರು ೧೫ ವರ್ಷದ, ೧೦ ಅಡಿ ಉದ್ದ ಹೆಬ್ಬಾವುನ್ನ ಹಿಡಿದು ಆರ್.ಎಫ್.ಒ ಸುರೇಶ್ ಅವರ ಮಾರ್ಗದರ್ಶನದಂತೆ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಉಗರ ತಜ್ಞ ದಿಲೀಪ್ ಮಾತನಾಡಿ ಸುಮಾರು ಹತ್ತು ವರ್ಷಗಳಿಂದ ಜಿಲ್ಲೆಯ ಯಾವುದೆ ಗ್ರಾಮಗಳಲ್ಲಿ ಹಾವುಗಳು ಕಂಡರೆ ತಕ್ಷಣ ಆಗಮಿಸಿ ಹಾವು ಹಿಡಿದು ಕಾಡಿಗೆ ಬಿಡುತ್ತಿದ್ದು, ಸಾರ್ವಜನಿಕರು ಯಾರು ಕೂಡ ಹಾವುಗಳನ್ನ ಹೊಡೆಯ ಬೇಡಿ, ತಕ್ಷಣ ನಮ್ಮ ನಂಬರ್‌ಗೆ ಕರೆ ಮಾಡಿದರೆ ಸ್ಥಳಕ್ಕೆ ಬಂದು ಸುರಕ್ಷಿತವಾಗಿ ಹಾವನ್ನ ಹಿಡಿದು ಕಾಡಿಗೆ ಬಿಡಲಾಗವುದು ಎಂದು ತಿಳಿಸಿದರು.

ವಲಯ ಅರಣ್ಯಾಧಿಕಾರಿ ಸುರೇಶ್ ಮಾತನಾಡಿ ಮನುಷ್ಯ ಕಾಡುಗಳನ್ನ ನಾಶ ಮಾಡುತ್ತಿದ್ದು, ಕಾಡಿನಲ್ಲಿ ಇದ್ದ ಪ್ರಾಣಿಗಳು ನಾಡಿಗೆ ಬರುವಂತಾಗಿದೆ. ನಮ್ಮ ಸ್ವಾರ್ಥಕ್ಕಾಗಿ ಬೆಟ್ಟ ಗುಡ್ಡ, ಕಾಡುಗಳನ್ನ ನಾಶ ಮಾಡುತ್ತಿದ್ದು, ಅದರಿಂದ ಮನುಷ್ಯನಿಗೆ ತೊಂದರೆ ಉಂಟಾಗುತ್ತದೆ. ವನ್ಯಜೀವಿಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ವಾಗಿದ್ದು, ತುಮಕೂರು ವನ್ಯಜೀವಿ ಉರಗ ಜಾಗೃತಿ ಸಂಸ್ಥೆಯ ಉರಗ ತಜ್ಞ ದಿಲೀಪ್ ತಂಡ ನಿಸ್ವರ್ಥ ಸೇವೆಯಿಂದ ಪ್ರಾಣಿಗಳನ್ನ ರಕ್ಷಣೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳಾದ ನವೀನ್‌ಕುಮಾರ್, ಚಾಂದ್ ಪಾಷ, ಮಂಜುನಾಥ್, ಉರಗ ತಜ್ಞರಾದ ಹನುಮಯ್ಯ ಗುರುಕಿರಣ್, ಸ್ಥಳಿಯರಾದ ಮಾರುತಿ, ಮಂಜುನಾಥ್ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ: ೨೫ ಜನ ರೈತರ ೪೦ ಎಕರೆ ಕೃಷಿ ಬೆಳೆ ಜಲಾವೃತ