Tuesday, 26th November 2024

Police SP Kushal Chaukse: ಧಾರ್ಮಿಕ ಆಚರಣೆಗಳು ಕೋಮು ಸೌಹಾರ್ದತೆ ಪಸರಿಸುವಂತಿರಲಿ: ಎಸ್ಪಿ ಕುಶಾಲ್ ಚೌಕ್ಸೆ ಅಭಿಮತ


ಚಿಕ್ಕಬಳ್ಳಾಪುರ : ಗೌರಿಗಣೇಶ ಹಬ್ಬವೇ ಇರಲಿ ಈದ್ ಮಿಲಾದ್ ಆಚರಣೆಯೇ ಇರಲಿ  ಧಾರ್ಮಿಕ ಆಚರಣೆ ಯಾವುದೇ ಆಗಿದ್ದರೂ ಅವುಗಳು ಪರಸ್ಪರ ಕೋಮುಸೌಹಾರ್ಧತೆ ಪಸರಿಸುವಂತಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಧಾರ್ಮಿಕ ಮುಖಂಡರಲ್ಲಿ ಮನವಿ ಮಾಡಿದರು.

ನಗರದ ಪೊಲೀಸ್ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಾಂತಿಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸಂತೋಷದಿAದ ಮಾಡುವ ಹಬ್ಬ ಹರಿದಿನಗಳು ಯಾರಿಗೂ ತೊಂದರೆಯಾಗದAತೆ ನಡೆಯಬೇಕು.ಈ ಬಾರಿ ರಾಜ್ಯ ಸರ್ಕಾರ ಗೌರಿಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಟಾಪನೆಗೆ ಹಲವು ನಿಯಮಗಳನ್ನು ರೂಪಿಸಿದೆ.ಇವುಗಳನ್ನು ತಿಳಿದುಕೊಂಡು ಎಲ್ಲಿಯೂ ಲೋಪವಾಗದಂತೆ ಸಂಘಟಕರು, ಧಾರ್ಮಿಕ ಮುಖಂಡರು ಎಚ್ಚರವಹಿಸಿ ಪಾಲಿಸಬೇಕು ಎಂದು ಎಸ್‌ಪಿ ತಿಳಿಸಿದರು.

ವಾಯುಮಾಲಿನ್ಯ, ಜಲಮಾಲಿನ್ಯ,ಶಬ್ದಮಾಲಿನಕ್ಕೆ ಆಸ್ಪದವಿಲ್ಲ.ಪಿಒಪಿ ಗಣೇಶನ ಮೂರ್ತಿ ಪ್ರತಿಷ್ಟಾಪನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮೆರವಣಿಗೆ ವೇಳೆ ಯಾರೂ ಕೂಡ ಡಿಜೆ ಬಳಸುವಂತಿಲ್ಲ. ಅತಿ ಶಬ್ಧ ಮಾಡು ವುದರಿಂದ ಹಿರಿಯ ನಾಗರೀಕರು, ಮಕ್ಕಳು,ಗರ್ಭೀಣಿ ಬಾಣಂತಿಯರಿಗೆ ಅಪಾಯವಾಗುವ ಸಂಭವ ಹೆಚ್ಚಿದೆ. ಪಟಾಕಿ ಸಿಡಿಸಬಾರದು ಸಿಡಿಸಲೇಬೇಕು ಎಂದಿದ್ದರೆ ಹಸಿರು ¥ಟಾಕಿಯನ್ನು ಮಿತವಾಗಿ ಬಳಸಿ, ಸಂಘಸAಸ್ಥೆಗಳ ಮುಖಂಡರು ಮೆರವಣಿಗೆ ಗಣಪತಿ ವಿಸರ್ಜನೆ ವೇಳೆ ಗುರುತಿನ ಚೀಟಿಗಳನ್ನು ಹಾಕಿಕೊಳ್ಳುವ ಮೂಲಕ ಅಶಾಂತಿ ಸೃಷ್ಟಿಸುವ ಸಮಾಜಘಾತುಕ ಶಕ್ತಿಗಳನ್ನು ತಡೆಯಲು ಇಲಾಖೆಯೊಂದಿಗೆ ಸಹಕರಿಸಬೇಕು.ಸರಕಾರ ನೀಡಿರುವ ಯಾವುದೇ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗಣೇಶನ ಮೂರ್ತಿ ವಿಸರ್ಜನೆ ಶ್ರದ್ಧಾಭಕ್ತಿಯಿಂದ ಮಾಡಬೇಕು. ಆದರೆ ಕೆಲವರು ಮದ್ಯವನ್ನು ಸೇವಿಸಿ ಉತ್ಸವದಲ್ಲಿ ಭಾಗವಹಿಸುವುದು, ಹಬ್ಬದಲ್ಲಿ ಪ್ರಯುಕ್ತ ಇಸ್ಪೀಟ್ ಸೇರಿ ಹಲವು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಾರೆ. ಇದು ಧಾರ್ಮಿಕ ಆಚರಣೆಗೆ ತೋರುವ ಅಗೌರವ. ಹೀಗಾಗಿ ಯಾರೂ ಇಂತಹ ಕೆಲಸ ಮಾಡಬಾರದು ಎಂದು ತಿಳಿ ಹೇಳಿದರು.

ಸಮಾಜದಲ್ಲಿ ಎಲ್ಲ ಸಮುದಾಯದವರು ಇದ್ದಾರೆ. ಹೀಗಾಗಿ ಯಾರಿಗೂ ತೊಂದರೆಯಾಗದAತೆ ಸಹಕರಿಸಬೇಕು. ಯಾರಿಗೂ ಸಮಸ್ಯೆ ಆಗಬಾರದು. ನಿಗದಿತ ಮಾರ್ಗದಲ್ಲಿ ಮಾತ್ರ ಮೆರವಣಿಗೆ ಮಾಡಬೇಕು. ಪ್ರಮುಖ ವೃತ್ತಗಳು, ಬೇರೆ ಧರ್ಮದವರ ಸ್ಥಳಗಳಿರುವೆಡೆ ವಿನಾಕಾರಣ ಸಮಸ್ಯೆ ಸೃಷ್ಟಿಸಬಾರದು. ಗಣೇಶನ ಉತ್ಸವ ಆಯೋಜಕರು ಐಡಿ ಕಾರ್ಡ್, ಟೀಶರ್ಟ್ ಬಳಸಿದರೆ ಒಳ್ಳೆಯದು ಎಂದರು.

ಯಾವುದೇ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುವಾಗ ನಗರಸಭೆ ಅನುಮತಿ ಪಡೆದೇ ಹಾಕಬೇಕು.ಹೀಗೆ ಹಾಕುವಾಗ ಕೋಮುಭಾವನೆ ಕೆರಳಿಸುವಂತೆ, ಸಮಾಜಘಾತುಕ ಶಕ್ತಿಗಳನ್ನು ವೈಬವೀಕರಿಸುವಂತೆ ಇರಬಾರದು. ಕಾನೂನು ಪ್ರಕಾರವೇ ಎಲ್ಲವೂ ಇರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಮಾಡ ಬಾರದು. ಜಿಲ್ಲೆಯಲ್ಲಿ ಎಲ್ಲ ಕಾನೂನುಗಳನ್ನು ಪಾಲಿಸಿ ಶಾಂತಿಯುತವಾಗಿ ಗಣೇಶ ಉತ್ಸವ ನಡೆಸುವ ಆಯೋಜಕರಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಹೆಚ್ಚುವರಿ ಜಿಲ್ಲಾಪೊಲೀಸ್ ವರಿಷ್ಟಾಧಿಕಾರಿ ಖಾಸಿಂ ಮಾತನಾಡಿ, ಜಿಲ್ಲೆಯಲ್ಲಿ ಸಮಸ್ಯೆಯಾದರೆ ತಕ್ಷಣ ಮಾಹಿತಿ ನೀಡಿದರೆ ಕೇವಲ ೧೫ ನಿಮಿಷಕ್ಕಿಂತ ಮೊದಲು ಸ್ಥಳಕ್ಕೆ ಭೇಟಿ ನೀಡುತ್ತೇವೆ. ೧೦೦,೧೧೨ ನಂಬರ್‌ಗೆ ಕರೆ ಮಾಡ ಬಹುದು. ಇನ್ನೊಂದೆಡೆ ಹಬ್ಬದ ಆಫರ್‌ಗಳ ನೆಪದಲ್ಲಿ ಸೈಬರ್ ಕ್ರೈಂ ನಡೆಯುವ ಸಾಧ್ಯತೆಯೂ ಇದೆ. ಹೀಗಾಗಿ ಜನರು ಎಚ್ಚರಿಯಿಂದ ಇರಬೇಕು ಎಂದು ಹೇಳಿದರು.

ಚಿಕ್ಕಬಳ್ಳಾಪುರ ಡಿವೈಎಸ್‌ಪಿ ಶಿವಕುಮಾರ್  ಬೆಸ್ಕಾಂ ಎಇಇ ರಮೇಶ್, ಜಿಲ್ಲಾ ಅಗ್ನಿಶಾಮಕ ದಳದ ಬಸವರಾಜ್, ತಹಸೀಲ್ದಾರ್ ಅನಿಲ್,ಚಿಂತಾಮಣಿ ಡಿವೈಎಸ್ಪಿ ಮುರಳೀಧರ್, ಮಾತನಾಡಿದರು.

ಸಭೆಯಲ್ಲಿ ಎಲ್ಲಾ ೬ ತಾಲೂಕಿನ ಹಿರಿಯ ಪೊಲೀಸ್ ಅಧಿಕಾರಿಗಳು ವೃತ್ತ ನಿರೀಕ್ಷಕರಾದ ಸತ್ಯನಾರಾಯಣ, ಮಂಜುನಾಥ್,ನಗರ ಠಾಣೆ ಎಸೈ ನಂಜುAಡಪ್ಪ ಮತ್ತಿತರರು ಇದ್ದರು.