ತುಮಕೂರು: ಕೇಂದ್ರ ಸರಕಾರ ವೀರಶೈವ ಲಿಂಗಾಯಿತ ಧರ್ಮವನ್ನು ಜೈನ,ಕ್ರೈಸ್ತ, ಮುಸ್ಲಿಂ ಧರ್ಮಗಳಂತೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಸಿದ್ದಗಂಗಾ ಮಠದ ಆವರಣದಲ್ಲಿ ಆಯೋ ಜಿಸಿದ್ದ ಎರಡು ದಿನಗಳ ಸಮಾವೇಶದ ನಿರ್ಣಯ ಕೈಗೊಳ್ಳಲಾಯಿತು.
ಸಮಾವೇಶ ಸಮಿತಿಯ ಪ್ರಧಾನ ಕಾರ್ಯದರ್ಶಿ ನಟರಾಜು ಸಾಗರನಹಳ್ಳಿ ಅವರು ಮಂಡಿ ಸಿದ ವೀರಶೈವ ಲಿಂಗಾಯಿತರು ನಾವೆಲ್ಲರೂ ಒಂದೆ,ವೀರಶೈವ ಲಿಂಗಾಯಿತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಹಾಗೂ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಎಲ್ಲಾ ಪಂಗಡಗಳನ್ನು ಸೇರಿಸಬೇಕೆಂಬ ಮೂರು ನಿರ್ಣಯಗಳನ್ನು ಮಂಡಿಸಿದ್ದು,ಇದಕ್ಕೆ ವೇದಿಕೆ ಮೇಲಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ, ಬೆಟ್ ಟದಹಳ್ಳಿಯ ಶ್ರೀಚಂದ್ರ ಶೇಖರಸ್ವಾಮೀಜಿ, ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷ ರಾದ ಡಾ.ಎನ್.ತಿಪ್ಪಣ್ಣ ಸೇರಿದಂತೆ ಎಲ್ಲರೂ ಒಕ್ಕೊರಲಿನ ಅನುಮೋಧನೆ ಸೂಚಿಸಿದರು.
ಸಮಾರೋಪ ಭಾಷಣ ಮಾಡಿದ ಡಾ.ಶಾಮನೂರು ಶಿವಶಂಕರಪ್ಪ, ಇಂದು ಎಲ್ಲಾ ಸಮಾಜಗಳ ಜನರು ತಮ್ಮ ಮಕ್ಕಳನ್ನು ಉನ್ನತ ಹುದ್ದೆಗಳಲ್ಲಿ ಕಾಣಲು ಬಯಸು ತಿದ್ದಾರೆ. ಹಾಗಾಗಿ ಎಷ್ಟೇ ಕಷ್ಟವಾದರೂ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸು ತ್ತಿದ್ದಾರೆ. ಇಂದು ಎಲ್ಲಾ ರಂಗದಲ್ಲಿಯೂ ಮಹಿಳೆಯರಿದ್ದಾರೆ. ಬಹಳ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತಿದ್ದಾರೆ.
ಹಾಗೆಯೇ ಯುವಶಕ್ತಿ ದೇಶದ ಸಂಪತ್ತು. ಇಂತಹ ಯುವಕರನ್ನು ಸಶಕ್ತಗೊಳಿಸಲು ಹೆಚ್ಚು ಒತ್ತು ನೀಡುವ ಅಗತ್ಯವಿದೆ.ಮುಂದಿನ ದಿನಗಳಲ್ಲಿ ಮಹಾಸಭಾ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.
ಬೆಟ್ಟದಹಳ್ಳಿಯ ಶ್ರೀಚಂದ್ರಶೇಖರಸ್ವಾಮೀಜಿ ಮಾತನಾಡಿ,ತ್ಯಾಗದಿಂದ ಮಾತ್ರ ಎಲ್ಲವೂ ಸೌಖ್ಯ ಎಂಬುದು ವೀರಶೈವ ಲಿಂಗಾ ಯಿತ ಧರ್ಮದ ಸಾರ.ಸಾಕ್ಷತ್ ಶಿವನ ಸ್ವರೂಪವೇ ನಾವಾಗಿ, ಇತರರಲ್ಲಿಯೂ ಪರಶಿವನನ್ನು ಕಾಣುವುದೇ ನಮ್ಮ ಧರ್ಮದ ಮೂಲ ಉದ್ದೇಶ. ಆದರೆ ಇಂದು ನಾವು ಆ ರೀತಿ ಬದುಕುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಮಾತನಾಡಿ, ಇಂದು ಮಂಡಿಸಿರುವ ಎಲ್ಲಾ ನಿರ್ಣಯಗಳು ಈ ಮಹಾಸಭಾ ವನ್ನು ಸ್ಥಾಪಿಸಿ, ಸಮಾಜದಲ್ಲಿ ಐಕ್ಯತೆ ಮತ್ತು ಅಭಿವೃದ್ದಿಯ ಕನಸು ಕಂಡಿದ್ದ ಹಾನಗಲ್ ಕುಮಾರಸ್ವಾಮಿ ಅವರ ಆಶಯ ವಾಗಿತ್ತು. ಮಕ್ಕಳಲ್ಲಿ ಧರ್ಮ ಸಂಸ್ಕಾರವನ್ನು ತುಂಬುವ ಮೂಲಕ ಅವರನ್ನು ಲಿಂಗಾಯಿತ, ವೀರಶೈವ ಧರ್ಮವನ್ನು ಮುಂದಿನ ಪೀಳಿಗೆಯವರು ಉಜ್ವಲಗೊಳಿಸುವಂತೆ ಪ್ರೇರೆಪಿಸೊಣ ಎಂದರು.
ಕಾರ್ಯಕ್ರಮದಲ್ಲಿ ಡಾ.ಎನ್.ತಿಪ್ಪಣ್ಣ, ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಸಮಾವೇಶ ಮತ್ತು ಕಾರ್ಯಾಗಾರದ ಯಶಸ್ವಿಗೆ ದುಡಿದ ಹಲವನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಎಸ್.ಐ.ಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಎಸ್.ಕೆ.ರಾಜಶೇಖರ್,ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಪಟೇಲ್, ರಾಜ್ಯ ಯುವಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ,ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮುಕ್ತಾಂಭ ಬಸವರಾಜು, ಸಮಾವೇಶದ ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.