Sunday, 15th December 2024

ಮಾಜಿ ಶಾಸಕ ಸುರೇಶ್ ಗೌಡ ‌ವಿರುದ್ಧ 100 ಕೋಟಿ‌ ಮೊಕದ್ದಮೆ

ತುಮಕೂರು : ಮಾಜಿ ಶಾಸಕ ಸುರೇಶ್ ಗೌಡ ಕೊಲೆಗೆ ಸುಪಾರಿ ಪ್ರಕರಣದಲ್ಲಿ ಸುಳ್ಳು ಆರೋಪ ಮಾಡಲಾಗಿದೆ ಎಂದು ಬಿ. ಸುರೇಶ್ ಗೌಡ ವಿರುದ್ಧ ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಅಟ್ಟಿಕಾ ಬಾಬು (ಬೊಮ್ಮನಹಳ್ಳಿ ಬಾಬು) ೧೦೦ ಕೋಟಿ ರುಪಾಯಿ ಮಾನನಷ್ಟ ಮೊಕದ್ದಮೆ ಹೂಡಿ, ನೋಟಿಸ್ ನೀಡಿದ್ದಾರೆ.
ತುಮಕೂರು ಗ್ರಾಮಾಂತರ ಮಾಜಿ ಶಾಸಕ ಬಿ.ಸುರೇಶ್ ಗೌಡ, ಇತ್ತೀಚೆಗೆ ತಮ್ಮ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿ ತುಮಕೂರಿನ ಕ್ಯಾತಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನಲ್ಲಿ ಶಾಸಕ ಗೌರಿಶಂಕರ್, ಹಿರೇಹಳ್ಳಿ ಮಹೇಶ್ ಹಾಗೂ ಅಟ್ಟಿಕಾ ಬಾಬು ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು. ನನ್ನ ಕೊಲೆ ಮಾಡಲು ಜೈಲಿನಲ್ಲಿರುವ ಕೈದಿಗೆ ಶಾಸಕ ಗೌರಿಶಂಕರ್ ಸುಪಾರಿ ನೀಡಿದ್ದಾರೆ. ಕೈದಿಗೆ ಅಟ್ಟಿಕಾ ಬಾಬು ಮುಖಾಂತರ ಹಣ ನೀಡಲಾಗಿದೆ ಎಂದು ಸುರೇಶ್ ಗೌಡ ಆರೋಪಿಸಿದ್ದರು.

ದೂರಿನಲ್ಲಿ ತಮ್ಮ ಹೆಸರು ತಳುಕು ಹಾಕಿದ್ದರಿಂದ ಸುರೇಶ್ ಗೌಡ ವಿರುದ್ಧ ಅಟ್ಟಿಕಾ ಬಾಬು ೧೦೦ ಕೋಟಿ ರು.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅಟ್ಟಿಕಾ ಬಾಬು ಪರವಾಗಿ ಮಾಜಿ ಶಾಸಕ ಬಿ.ಸುರೇಶ್ ಗೌಡಗೆ ಅಡ್ವೊಕೇಟ್ ಎಸ್.ಎಂ.ಪಾಷಾ ನೋಟಿಸ್ ನೀಡಿದ್ದಾರೆ.