Tuesday, 26th November 2024

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಕಡ್ಡಾಯವಾಗಿ ಶಿಕ್ಷಕರ ನೇಮಕವಾಗಲಿ

ಗುಬ್ಬಿ : ಸರ್ಕಾರ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಿಗೆ ಕಡ್ಡಾಯವಾಗಿ ಶಿಕ್ಷಕರನ್ನು ನೇಮಿಸಬೇಕು ಎಂದು ಬೆಟ್ಟದಹಳ್ಳಿ ಗವಿಮಠಧ್ಯಕ್ಷ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ತಿಳಿಸಿದರು.

ಗುಬ್ಬಿ ತಾಲ್ಲೂಕಿನ ತಿಪ್ಪೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳು ಅಥವಾ ಖಾಸಗಿ ಶಾಲೆಗಳಲ್ಲಿ ವಿಧ್ಯಾಭ್ಯಾಸ ಮಾಡಲಿ ಆದರೆ ಎಲ್ಲರಿಗೂ ಶಿಕ್ಷಕರ ಕೊರತೆ ಇದ್ದು ಸರ್ಕಾರ ಕೂಡಲೇ ಎಲ್ಲ ಶಾಲೆಗಳಿಗೂ ಕೂಡ ಶಿಕ್ಷಕರನ್ನು ನೇಮಿಸಬೇಕು. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ ಇದರಿಂದ ಶಾಲಾ ಮಕ್ಕಳಿಗೆ ಸಾಕಷ್ವು ತೊಂದರೆ ಆಗುತ್ತಿದೆ ಆದ್ದರಿಂದ ಸರ್ಕಾರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರ ಎಂಬುಂದು ಅತ್ಯಂತ ಪವಿತ್ರವಾದ ಕ್ಷೇತ್ರ ಶಿಕ್ಷಕರು ತಮ್ಮ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ ಸಮಾಜದಲ್ಲಿ ಗುರುತಿಸಿಕೊಳಲು ಮಾಡುವ ಶಕ್ತಿ ಇರುವುದೇ ಶಿಕ್ಷಕರಿಗೆ ಆದ್ದರಿಂದ ಶಿಕ್ಷಣ ಎಂಬುಂದು ಎಲ್ಲರಿಗೂ ಅತ್ಯವಶ್ಯಕ ಶಿಕ್ಷಣ ಪಡೆಯವುದನ್ನು ಎಲ್ಲ ಮಕ್ಕಳು ಪಡೆದುಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದು ತಿಳಿಸಿದರು‌.
ಗೊಲ್ಲಹಳ್ಳಿ‌ಮಠದ ಶ್ರೀ ವಿಭವ ವಿಧ್ಯಾಶಂಕರ ಸ್ವಾಮಿಗಳು ಮಾತನಾಡಿ, ವಿದ್ಯೆ ಎಂಬುಂದು ಅಮೂಲ್ಯ ಸಂಪತ್ತು ಎಲ್ಲರಿಗೂ ವಿದ್ಯೆ ಸಿಗುವುದಿಲಲ್ಲ ನಾವೆಲ್ಲರೂ ಸಹ ವಿದ್ಯೆಯನ್ನು ಕಲಿಯಬೇಕಿದೆ ಗ್ರಾಮೀಣ ಬಾಗದಲ್ಲಿ ಇರುವ ಮಕ್ಕಳು ವಿಧ್ಯಾಬ್ಯಾಸಕ್ಕೆ ಹೆಚ್ಚು ಹೋತ್ತು ನೀಡಬೇಕಿದೆ.ವಿದ್ಯೆ ಇದ್ದಾರೆ ಎಲ್ಲಿ ಬೇಕಾದರೂ ಬದಕಲು ಸಾಧ್ಯವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು  ಸಹ ಶಿಕ್ಷಣಕ್ಕೆ ಹೆಚ್ಚು  ಒತ್ತು  ನೀಡಬೇಕು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಹಳೆಯ ಸಂಘದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತ್ತು.
ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಯತೀಶ್ , ಶಿವನಂಜಪ್ಪ , ಮುಖ್ಯ ಶಿಕ್ಷಕ ವಿಶ್ವನಾಥ್ , ಶಿಕ್ಷಕರಾದ ಲಕ್ಷ್ಮಯ್ಯ , ನಂದೀಶ್ , ನಿಜಲಿಂಗಪ್ಪ ನಿವೃತ್ತ ಶಿಕ್ಷಕರಾದ ಸುರೇಶ್ , ಮಲ್ಲಿಕಾರ್ಜುನಯ್ಯ , ಲಿಂಗಪ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.