ತಿಪಟೂರು : ತಾಲ್ಲೂಕಿನ ಆದಿಚುಂನಗಿರಿ ಶಾಖಾ ಮಠ ದಸರೀಘಟ್ಟದ ಚೌಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಪೂಜಾ ಕಾರ್ಯಕ್ರಮಗಳು ಇಂದಿನಿ೦ದ (ಸೆ.೨೫) ಅದ್ದೂರಿಯಾಗಿ ಪ್ರಾರಂಭಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸು ವಂತೆ ದೇವಾಲಯದ ಚಂದ್ರಶೇಖರನಾಥ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.೨೫ ರಂದು ಮಹಾಲಯ ಅಮಾವಾಸ್ಯೆ, ಸಂಜೆ ೬ಕ್ಕೆ ದುರ್ಗಾ ಹೋಮ, ಸೆ.೨೬ ರ ಸೋಮವಾರ ಚೌಡೇಶ್ವರಿ ದೇವಿ ಅಮ್ಮನವರಿಗೆ ರಜತ ಕವಚ ಹಾಗೂ ನಿಂಬೆಹಣ್ಣಿನ ಅಲಂಕಾರ, ಆದಿಚುಂನಗಿರಿ ಶಾಖಾ ಮಠದ ಚಂದ್ರಶೇಖರನಾಥ ಸ್ವಾಮೀಜಿ ಯವರಿಂದ ಮಹಾಮಂಗಳಾರತಿ ನಡೆಯುತ್ತದೆ.
ಸೆ.೨೭ ಮಂಗಳವಾರ ಅರಿಶಿನ ಅಲಂಕಾರ, ಮಹಾಮಂಗಳಾರತಿ, ಸೆ.೨೮ ರ ಬುಧವಾರ ದಂದು ಗಾಯತ್ರಿ ಹಾಗೂ ವಿಳ್ಯೆದೆಲೆ ಅಲಂಕಾರ, ಸೆ.೨೯ ರ ಗುರುವಾರ ಕುಂಕುಮ ಹಾಗೂ ಕದಲಿಫಲ ಅಲಂಕಾರ, ಸೆ.೩೦ ರ ಶುಕ್ರವಾರ ಧನಲಕ್ಷಿö್ಮÃ ಅಲಂಕಾರ, ಅ.೧ ರ ಶನಿವಾರ ನವಧಾನ್ಯ ಅಲಂಕಾರ, ಅ.೨ ರಂದು ಭಾನುವಾರ ಸರಸ್ವತಿ ಹಾಗೂ ಬಳೆ ಅಲಂಕಾರ, ಅ.೩ ರ ಸೋಮವಾರ ಮಹಾಕಾಳಿ ಹಾಗೂ ಮಹಿಷಾಸುರ ಮರ್ದಿನಿ ಅಲಂಕಾರ, ಅ.೪ರ ಮಂಗಳವಾರ ಶಾಖಾಂಬರಿ ಅಲಂಕಾರ, ಅ.೫ ರಂದು ಮುತ್ತಿನ ಅಲಂಕಾರ ಹಾಗೂ ಮುಳ್ಳುಗದ್ದಿಗೆ ಉತ್ಸವ, ಮಹಾಮಂಗಳಾರಿ ನೆರವೇರುತ್ತದೆ ಎಂದು ತಿಳಿಸಿದ್ದಾರೆ.