ತುಮಕೂರು: ಮುಂದಿನ ಚುನಾವಣೆಯಲ್ಲಿ ತಿಗಳ ಸಮುದಾಯಕ್ಕೆ ಒಂದೆರಡು ಟಿಕೆಟ್ ಕೊಡಲು ನಾನು ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ನೀಡಿದರು.
ತಿಗಳ ಸಮುದಾಯದ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಸಣ್ಣ ಸಣ್ಣ ಸಮುದಾ ಯಕ್ಕೂ ಅವಕಾಶ ಕೊಡಬೇಕೆಂಬುದು ನಮ್ಮ ಆಸೆ. ಬೇರೆ ಪಕ್ಷಗಳು ಸಣ್ಣ ಸಮುದಾಯವನ್ನು ಬೆಳೆಸುವುದಿಲ್ಲ. ಜೆಡಿಎಸ್ ನಿರಂತರ ಸಣ್ಣ ಸಮುದಾದಯದ ಬೆಳವಣಿಗೆಗೆ ಶ್ರಮಿಸುತ್ತದೆ ಎಂದರು.
ಮೈತ್ರಿ ಸರಕಾರದಲ್ಲೂ ಕಮಿಷನ್ ನಡೆದಿದೆ. ೨೦೦೮ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸ್ವೇಚ್ಛಾರದಂತೆ ಭ್ರಷ್ಟಚಾರ ನಡೆಯುತ್ತಿದೆ. ಇದನ್ನು ನಿಲ್ಲಿಸುವುದು ಹೇಗಂತ ರ್ಚೆ ಮಾಡಬೇಕು. ಇದಕ್ಕೆ ಜನರು ಕೂಡ ರೆಡಿಯಾಗಬೇಕು, ಒಬ್ಬರಿಬ್ಬರು ಮಾಡುವಂತಹ ಕೆಲಸ ಅಲ್ಲ ಇದು.
ನಾನು ರಾಜ್ಯದ ಮುಖ್ಯಮಂತ್ರಿಯಾದಾಗ ರ್ಸೆಂಟೇಜ್ ನಿಲ್ಲಿಸ ಬೇಕೆಂದು ವೈಯಕ್ತಿಕವಾಗಿ ತರ್ಮಾನದೆ.ನನ್ನ ಮೈತ್ರಿ ಸರಕಾರದಲ್ಲೂ ಕಮಿಷನ್ ನಡೆದಿದೆ. ಇದೆಲ್ಲವನ್ನು ಸರಿಪಡಿಸಲು ಕಠಿಣ ನರ್ಧಾರ ಮಾಡಬೇಕಾದರೆ ಒಂದು ಸ್ವತಂತ್ರ ಸರಕಾರ ಅಧಿಕಾರಕ್ಕೆ ಬರಬೇಕು. ನನ್ನ ಕಾಲದಲ್ಲೂ ರ್ಸಂಟೇಜ್ ನಡೆದುಕೊಂಡು ಬಂದಿದೆ. ಎಲ್ಲಾವೂ ನನಗೆ ಗೊತ್ತಿದೆ, ಆದರೆ ನನ್ನ ಕಚೇರಿಯೊಳಗೆ ರೇವಣ್ಣನವರು ಇದ್ದರು.
ಆ ಒಂದು ವಿಷಯಗಳಲ್ಲಿ ನಾವೂ ದೂರ, ನಾವು ಸರಕಾರದಲ್ಲಿ ಅಧಿಕಾರ ನಡೆಸಬೇಕಾದರೆ, ಸಹಿಯನ್ನು ಮಾರಾಟಕ್ಕೆ ಇಟ್ಟಿರ ಲಿಲ್ಲ ಎಂದರು.
ನಾವು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ವಿ.ರೈತರ ಸಾಲ ಮನ್ನ ಮಾಡಿದೆ, ಅದರಲ್ಲಿ ಕಮಿಷನ್ ತೆಗೆದುಕೊಳ್ಳಲು ಆಗುತ್ತಾ .ರೈತರಿಂದ ಪ್ರೀತಿ ಗಳಿಸಬಹುದು, ಅದೇ ನನಗೆ ಕಮಿಷನ್. ಕೆಂಪಣ್ಣವನರೇ ನನ್ನ ಮೇಲೆ ಯಾರಾದ್ರೂ ಕರ್ಟ್ ಗೆ ಹೋಗುವುದಾದರೆ ಹೋಗಿ ಅಂತ ಆಫರ್ ಕೊಟ್ಟಿದ್ದಾರೆ. ಅವರ ಹೇಳಿಕೆ ವಿರುದ್ಧ ಕರ್ಟ್ ಗೆ ಹೋಗಿ ಮಾನನಷ್ಟ ಮೊಕದ್ದಮೆ ಹೂಡಿದ್ರೆ ಸಂತೋಷ. ವೆಲ್ ಕಮ್ ಇಟ್ ಅಂತ ಅವರೇ ಹೇಳಿಕೊಂಡಿದ್ದಾರೆ. ಒಬ್ಬರೋ ಇಬ್ಬರೋ ಬಿಟ್ಟರೆ, ಈ ಸರಕಾರದಲ್ಲಿ ಬೇರೆ ಸಚಿವರ ಬಗ್ಗೆ ರ್ಚೆ ಮಾಡುವುದರಲ್ಲಿ ಪ್ರಯೋಜನವಿಲ್ಲ ಎಂದರು.
ಮೈತ್ರಿ ಸರಕಾರದ ವೇಳೆ ಕೆಲ ಇಲಾಖೆಯಲ್ಲಿ ಕಮಿಷನ್ ನಡೆದಿದೆ. ಜೆಡಿಎಸ್ ಮಂತ್ರಿಗಳಿಗೆ ಕಮಿಷನ್ ಇಟ್ಟುಕೊಳ್ಳಿ ಅಂತ ನಾನು ಸೂಚನೆ ಕೊಟ್ಟಿರಲಿಲ್ಲ. ಯಾರಿಗೂ ಆ ಕೆಲಸ ಮಾಡಲು ಬಿಟ್ಟಿಲ್ಲ. ಜಿಟಿ ದೇವೇಗೌಡರು ಪರ್ಟಿ ಬಿಟ್ಟು ಹೋಗಿಲ್ಲ. ಜಿ.ಟಿ ದೇವೇಗೌಡ ಜನತಾ ಪಕ್ಷದಲ್ಲಿ ಇದ್ದಾರೆ ಎಂದರು.