ಗುರುವಾರ ಶುಲ್ಕ ಕೇಂದ್ರದ ಕೆಲ ಸಿಬ್ಬಂದಿಗಳು ಆಗಮಿಸಿ ಕುರ್ಚಿಗಳಲ್ಲಿ ಕುಳಿತು ಮೊಬೈಲ್ ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂತು.
ಹೆಜಮಾಡಿಯ ನವಯುಗ ಟೋಲ್ ಗೇಟ್ ಗೆ ಕೇಂದ್ರ ಸರ್ಕಾರ ನಡೆಸುತ್ತಿದ್ದ ಸುರತ್ಕಲ್ ಟೋಲ್ ಗೇಟ್ ವಿಲೀನವಾಗಿದೆ. ಇದರ ನಡುವೆ ಇಲ್ಲಿನ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಜೆ ವಿಜಯೋತ್ಸವ ಸಭೆ ನಡೆಸಲು ನಿರ್ಧರಿಸಿದೆ.
ಕಳೆದ ಬಾರಿ ಟೋಲ್ ಗೇಟ್ನಲ್ಲಿ ಸಮಸ್ಯೆ ಉಂಟಾದಾಗ ಸಮಾಜ ಸೇವಕ ಆಸೀಫ್ ಆಪ ದ್ಭಾಂಧವ 10-15 ದಿನಗಳ ಕಾಲ ವಿಶೇಷ ರೀತಿಯಲ್ಲಿ ದಿನಕ್ಕೊಂದರಂತೆ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿದ್ದರು. ಇಂದು ಟೋಲ್ ಗೇಟ್ ರದ್ದಾಗಿ ರುವುದಕ್ಕೆ ಸಿಹಿ ಹಂಚಿ ಸಂಭ್ರಮಿಸಿದರು.